ನವದೆಹಲಿ : ಕನಸುಗಳು ಎಲ್ಲರಿಗೂ ಬೀಳುತ್ತವೆ. ಬೀಳುವ ಕನಸಿಗೂ (Dreams) ಅರ್ಥವಿರುತ್ತದೆ. ಕನಸುಗಳು ಭವಿಷ್ಯದಲ್ಲಿ ಘಟಿಸುವ ಶುಭ ಮತ್ತು ಅಶುಭ ಘಟನೆಗಳನ್ನು ಸೂಚಿಸುತ್ತವೆ. ಕನಸು ಯಾವಾಗ ಬೀಳುತ್ತದೆ ಎನ್ನುವುದು ಕೂಡಾ ಮುಖ್ಯವಾಗಿರುತ್ತದೆ. ಸ್ವಪ್ನ ಶಾಸ್ತ್ರದಲ್ಲಿ (Swapna Shastra) ಮಾತ್ರವಲ್ಲ, ಧರ್ಮ ಪುರಾಣಗಳಲ್ಲಿಯೂ ನಿರ್ದಿಷ್ಟ ದಿನ ಅಥವಾ ಸಮಯದಲ್ಲಿ ಬೀಳುವ ಕನಸುಗಳು ಯಾವ ಫಲಿತಾಂಶಗಳನ್ನು ನೀಡುತ್ತವೆ ಎಂದು ಉಲ್ಲೇಖಿಸಿದೆ.
ಶ್ರಾವಣದಲ್ಲಿ ಶಿವನಿಗೆ (Lord Shiva) ಸಂಬಂಧಪಟ್ಟ ಕೆಲವು ವಿಶೇಷ ಕನಸುಗಳು ಬಂದರೆ, ಜೀವನವನ್ನೇ ಬದಲಾಯಿಸುವ ಸಮಯ ಬಂದಿದೆ ಎಂದರ್ಥ. ಈ ಕನಸುಗಳು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿಯನ್ನು ಹೊತ್ತು ತರುತ್ತದೆಯಂತೆ.
ಶ್ರಾವಣ ತಿಂಗಳಲ್ಲಿ ಬೀಳುವ ಕನಸು ತುಂಬಾ ಶುಭ :
ದೇವರ ದರ್ಶನ : ಶ್ರಾವಣ ಮಾಸದಲ್ಲಿ (Shraavana month) ದೇವರನ್ನು ಕನಸಿನಲ್ಲಿ ನೋಡುವುದು ತುಂಬಾ ಶುಭವಾಗಿರುತ್ತದೆ. ಇದು ನಿಮ್ಮ ಜೀವನದ ಎಲ್ಲಾ ದುಃಖ , ದುಗುಡಗಳು ಕೊನೆಯಾಗುತ್ತಿವೆ ಎನ್ನುವುದನ್ನು ಸೂಚಿಸುತ್ತವೆ. ಅಲ್ಲದೆ, ಹಣಕಾಸಿನ ಸ್ಥಿತಿ ಕೂಡಾ ಸುಧಾರಿಸುತ್ತದೆ ಎನ್ನುವುದರ ಸಂಕೇತವಾಗಿರುತ್ತದೆ.
ಇದನ್ನೂ ಓದಿ : Raksha Bandhan 2021: ರಕ್ಷಾಬಂಧನದ ದಿನದಂದು ಈ ತಪ್ಪು ಮಾಡ್ಬೇಡಿ, ಇಲ್ಲಿದೆ ಶುಭ ಮುಹೂರ್ತದ ಪಟ್ಟಿ
ಶಿವನ ದರ್ಶನ: ಶ್ರಾವಣ ಮಾಸ ಶಿವನಿಗೆ ಸಮರ್ಪಿತವಾಗಿದೆ. ಈ ತಿಂಗಳಲ್ಲಿ ಕನಸಿನಲ್ಲಿ ಶಿವನನ್ನು ಕಂಡರೆ, ಮಹಾದೇವನ ಆಶೀರ್ವಾದ ಸಿಕಿತು ಎಂದೇ ಅರ್ಥ. ನಿಮ್ಮ ಜೀವನದಲ್ಲಿ ಸಾಕಷ್ಟು ಪ್ರಗತಿ ಮತ್ತು ಹಣವನ್ನು ತಂದು ಕೊಡುತ್ತದೆ. ಶಿವನನ್ನು ಕನಸಿನಲ್ಲಿ ಕಂಡ ತಕ್ಷಣವೇ ಶಿವಲಿಂಗಕ್ಕೆ (Shivalinga) ನೀರು ಅರ್ಪಿಸಲು ಆರಂಭಿಸಿ. ಹೀಗೆ ಮಾಡುವುದರಿಂದ, ಇನ್ನು ಶುಭ ಫಲ ಹೆಚ್ಚುತ್ತದೆ.
ಕನಸಿನಲ್ಲಿ ಮೀನುಗಳನ್ನು ನೋಡುವುದು: ಶ್ರಾವಣ ಮಾಸದಲ್ಲಿ ಕನಸಿನಲ್ಲಿ ಮೀನುಗಳು ನೀರಿನಲ್ಲಿ ಈಜುವುದನ್ನು ನೋಡುವುದು ಸಮೃದ್ಧಿಯ ಸೂಚನೆಯಾಗಿದೆ.
ಇದನ್ನೂ ಓದಿ : Raksha Bandhan 2021: 474 ವರ್ಷಗಳ ನಂತರ ನಿರ್ಮಾಣವಾಗಲಿದೆ ಈ ಅದ್ಭುತ ಮಹಾ ಯೋಗ..! ಈಡೇರಲಿದೆ ಎಲ್ಲಾ ಇಚ್ಛೆಗಳು
ನದಿ: ನದಿ ಕನಸಿನಲ್ಲಿ ಬರುವುದು ಅತ್ಯಂತ ಶುಭಕರ. ಶ್ರಾವಣ ಮಾಸದಲ್ಲಿ ನದಿಯನ್ನು ಕನಸಿನಲ್ಲಿ ನೋಡುವುದು ನಿಮ್ಮ ಪ್ರಸ್ತುತ ಜೀವನವನ್ನು ಸಂಪತ್ತಿನಿಂದ ತುಂಬುವುದಲ್ಲದೆ, ಸದ್ಗುಣಿಯಾಗಿರುವುದರ ಸಂಕೇತವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ