Photo Gallery : ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 13 ವರ್ಷ ಪೂರೈಸಿದ ವಿರಾಟ್ ಕೊಹ್ಲಿ..!

ವಿರಾಟ್ ಕೊಹ್ಲಿ ತಮ್ಮ ಮೊದಲ ಏಕದಿನ ಶತಕ ಗಳಿಸಲು 14 ಮ್ಯಾಚ್ ಕಾಯಬೇಕಾಯಿತು. ಅಂದಿನಿಂದ ಇಲ್ಲಿಯವರೆಗೆ ಕೊಹ್ಲಿ 43 ಏಕದಿನ ಶತಕಗಳನ್ನು ಗಳಿಸಿದ್ದಾರೆ

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ 13 ವರ್ಷಗಳ ಹಿಂದೆ ಇದೇ ದಿನ - ಆಗಸ್ಟ್ 18 ರಂದು ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಆರಂಭಿಸಿದರು. ಅಂದಿನಿಂದ ಕೊಹ್ಲಿ 438 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ (ಟೆಸ್ಟ್, ಏಕದಿನ ಮತ್ತು ಟಿ 20) ಮತ್ತು 22,937 ರನ್ ಗಳಿಸಿದ್ದಾರೆ. ಈ ಫೋಟೋಗಳಲ್ಲಿ ನೋಡಿ, ನಾವು ಕೊಹ್ಲಿಯ 13 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಪ್ರಯಾಣ ಹೇಗಿದೆ ನೋಡಿ.. 
 

1 /5

ವಿರಾಟ್ ಕೊಹ್ಲಿ ತಮ್ಮ ಮೊದಲ ಏಕದಿನ ಶತಕ ಗಳಿಸಲು 14 ಮ್ಯಾಚ್ ಕಾಯಬೇಕಾಯಿತು. ಅಂದಿನಿಂದ ಇಲ್ಲಿಯವರೆಗೆ ಕೊಹ್ಲಿ 43 ಏಕದಿನ ಶತಕಗಳನ್ನು ಗಳಿಸಿದ್ದಾರೆ. (ಮೂಲ: ಟ್ವಿಟರ್)

2 /5

ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನ 37 ಟೆಸ್ಟ್ ಪಂದ್ಯಗಳನ್ನ ಗೆಲುವಿನತ್ತ ಮುನ್ನಡೆಸಿದ್ದಾರೆ, ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ಇತ್ತೀಚಿನ ಜಯದೊಂದಿಗೆ ವೆಸ್ಟ್ ಇಂಡಿಸ್ ಆಟಗಾರ ಕ್ಲೈವ್ ಲಾಯ್ಡ್ ಅವರ 36-ಗೆಲುವಿನ ದಾಖಲೆಯನ್ನು ಮೀರಿಸಿದರು. (ಮೂಲ: ಟ್ವಿಟರ್)

3 /5

ಕೊಹ್ಲಿ ಇಲ್ಲಿಯವರೆಗೆ 94 ಟೆಸ್ಟ್‌ಗಳಲ್ಲಿ 7609 ರನ್ ಗಳಿಸಿದ್ದಾರೆ, 51 ರ ಸರಾಸರಿಯಲ್ಲಿ 27 ಶತಕ ಗಳಿಸಿದ್ದಾರೆ. ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಔಟಾಗದೆ 254 ರನ್ ಗಳಿಸಿದ್ದಾರೆ. (ಮೂಲ: ಟ್ವಿಟರ್)

4 /5

ವಿರಾಟ್ ಕೊಹ್ಲಿ 59.07 ಸರಾಸರಿಯಲ್ಲಿ 12,169 ರನ್ ಗಳಿಸಿದ್ದಾರೆ ಮತ್ತು ಪಾಕಿಸ್ತಾನದ ವಿರುದ್ಧ ಅವರ ಗರಿಷ್ಠ ಸ್ಕೋರ್ 183 ಆಗಿದೆ. ಕೊಹ್ಲಿಯ 43 ಏಕದಿನ ಶತಕಗಳ ಮೊತ್ತವು ಸಚಿನ್ ತೆಂಡೂಲ್ಕರ್ ನಂತರ ಎರಡನೇ ಸ್ಥಾನದಲ್ಲಿದೆ. (ಮೂಲ: ಟ್ವಿಟರ್)

5 /5

ವಿರಾಟ್ ಕೊಹ್ಲಿ 13 ವರ್ಷಗಳ ಹಿಂದೆ ಕೊಲಂಬೊದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಬ್ಯಾಟಿಂಗ್ ಆರಂಭಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. (ಮೂಲ: ಟ್ವಿಟರ್)