Afghanistan crisis in pics : ತಾಲಿಬಾನ್ ಗಳ ಕಪಿ ಮುಷ್ಟಿಯಲ್ಲಿರುವ ಅಫ್ಘಾನಿಸ್ತಾನದ ಮಹಿಳೆಯರು, ಮಕ್ಕಳ ಸ್ಥಿತಿ ಹೇಗಿದೆ ಫೋಟೋ ನೋಡಿ 

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಸಾವಿರಾರು ಜನರು ಸೋಮವಾರ ಅಫ್ಘಾನಿಸ್ತಾನದ ರಾಜಧಾನಿಯ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದು ಅಲ್ಲಿಂದ ಹೊರಡುವ ಪ್ರತಿ ವಿಮಾನವು ತುಂಬಿ ತುಳುಕುತ್ತಿವೆ.

  • Aug 17, 2021, 13:23 PM IST

ಮೇ ತಿಂಗಳಿನಿಂದ, ಸುಮಾರು 250,000 ಜನರು ತಮ್ಮ ಮನೆಗಳಿಂದ ಬಲವಂತವಾಗಿ ಹೊರಬಂದಿದ್ದಾರೆ; ಅವರಲ್ಲಿ ಶೇ.80 ರಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ವಕ್ತಾರ ಶಾಬಿಯಾ ಮಂಟೂ ಹೇಳಿದ್ದಾರೆ.
 


 

1 /6

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಸಾವಿರಾರು ಜನರು ಸೋಮವಾರ ಅಫ್ಘಾನಿಸ್ತಾನದ ರಾಜಧಾನಿಯ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದು ಅಲ್ಲಿಂದ ಹೊರಡುವ ಪ್ರತಿ ವಿಮಾನವು ತುಂಬಿ ತುಳುಕುತ್ತಿವೆ. ಅಲ್ಲದೆ ಜನ ನಿಂತಿರುವ ವಿಮಾನವನ್ನ ತಳ್ಳಲು ಪ್ರಯತ್ನಿಸಿರುವ ಘಟನೆ ಕೂಡ ನಡೆದಿದೆ.

2 /6

ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಮೇ ಅಂತ್ಯದ ನಂತರ ಸುಮಾರು 250,000 ಅಫ್ಘಾನಿಯನ್ನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಹೇಳಿದ್ದು, ತಾಲಿಬಾನಿಗಳು ಇಸ್ಲಾಂ ಧರ್ಮದ ಬಗ್ಗೆ ತಮ್ಮ ಕಟ್ಟುನಿಟ್ಟಾದ ಮತ್ತು ನಿರ್ದಯವಾದ ವ್ಯಾಖ್ಯಾನವನ್ನು ಪುನರುಜ್ಜೀವನಗೊಳಿಸುತ್ತಾರೆ, ಆದರೆ ಮಹಿಳೆಯರ ಹಕ್ಕುಗಳನ್ನು ಹೊರತು ಪಡಿಸಿದ್ದಾರೆ.

3 /6

ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ದೇಶ ಬಿಟ್ಟು ಓದಿ ಹೋಗುತ್ತಿದ್ದಾರೆ. ಅದಕ್ಕೆ ಜನರು ಕಾಬೂಲ್‌ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನುಗ್ಗಲು ಪ್ರಯತ್ನಿಸುತ್ತಿರುವ ಮತ್ತು ನುಗ್ಗಿರುವ ವಿಡಿಯೋಗಲಿ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

4 /6

ವಿಶ್ವಸಂಸ್ಥೆಯಿಂದ ಕಳೆದ ತಿಂಗಳು ಬಿಡುಗಡೆಯಾದ ವರದಿಯು ಮೇ ಮತ್ತು ಜೂನ್ ನಲ್ಲಿ ಕೊಲ್ಲಲ್ಪಟ್ಟ ಮತ್ತು ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿದ್ದರೆ. ಇದು ಯುಎಸ್ ಮತ್ತು ಇತರ ಅಂತಾರಾಷ್ಟ್ರೀಯ ಪಡೆಗಳು ಈ ಪ್ರದೇಶವನ್ನು ತೊರೆಯಲು ಆರಂಭಿಸಿತು. ಇಲ್ಲಿ, ಅಫ್ಘಾನಿಸ್ತಾನದಲ್ಲಿ ವಾಸವಿದ್ದ ನವದೆಹಲಿಯ ಲಜಪತ್ ನಗರದ ಮಹಿಳೆ ಅಲ್ಲಿ ಆಗುತ್ತಿರು ಘನ ಘೋರ ಘಟನೆಗಳನ್ನ ಹೇಳಿ ಕಣ್ಣೀರು ಹಾಕಿದ್ದಾರೆ.

5 /6

ಕೋವಿಡ್ -19 ಇನ್ನೂ ಹೆಚ್ಚಾಗುತ್ತಿರುವುದರಿಂದ, ಯುಎನ್ ಅಧಿಕಾರಿಗಳು ದಿನಕ್ಕೆ 100 ಕ್ಕೂ ಹೆಚ್ಚು  ಜನ ಸಾವನ್ನಪ್ಪಿದ್ದಾರೆ ಮತ್ತು ದಿನಕ್ಕೆ 2,000 ಹೊಸ ಪ್ರಕರಣಗಳು ವರದಿ ಆಗುತ್ತಿವೆ. 

6 /6

ಅಫ್ಘಾನಿಸ್ತಾನದಲ್ಲಿ 5 ವರ್ಷದೊಳಗಿನ ಇಬ್ಬರು ಮಕ್ಕಳಲ್ಲಿ ಒಬ್ಬರು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಯುನಿಸೆಫ್‌ನ ಕ್ಷೇತ್ರ ಕಾರ್ಯಾಚರಣೆಯ ಮುಖ್ಯಸ್ಥ ಮುಸ್ತಫಾ ಬೆನ್ ಮೆಸ್ಸೌಡ್ ಹೇಳಿದರು.