Viral Video: ಭೂಮಿಗಪ್ಪಳಿಸಿದ Asteroid, ಬಾಹ್ಯಾಕಾಶ ತಲುಪಿದ ಡೈನೋಸಾರ್ಗಳು

Viral Video - @WEIRDPHYSICS ಟ್ವಿಟ್ಟರ್ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಕಂಡು ಜನರು ದಂಗಾಗಿದ್ದಾರೆ.

Written by - Nitin Tabib | Last Updated : Aug 14, 2021, 05:48 PM IST
  • ಟ್ವಿಟ್ಟರ್ ನಲ್ಲಿ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ.
  • ವಿಡಿಯೋದಲ್ಲಿ ನ್ಯೂಟನ್ ನ First Law of Motion ತೋರಿಸಲಾಗಿದೆ.
  • ಈ ವಿಡಿಯೋ ಅನ್ನು ಇದುವರೆಗೆ ಸುಮಾರು 1.4 ಮಿಲಿಯನ್ ಬಾರಿಗೆ ವೀಕ್ಷಿಸಲಾಗಿದೆ.
Viral Video: ಭೂಮಿಗಪ್ಪಳಿಸಿದ Asteroid, ಬಾಹ್ಯಾಕಾಶ ತಲುಪಿದ ಡೈನೋಸಾರ್ಗಳು title=

ವಾಶಿಂಗ್ಟನ್: Viral Video - ಭೂಮಿಯಿಂದ ಡೈನೋಸಾರ್ ಗಳ (Dinosaur) ಅಳಿವಿನ ಕುರಿತು ಹೆಚ್ಚಿನ ವಿಜ್ಞಾನಿಗಳು ಕ್ಷುದ್ರಗ್ರಹ ಅಪ್ಪಳಿಸುವಿಕೆ ಕಾರಣ ಇರಬಹುದು ಎಂದು ನಂಬುತ್ತಾರೆ. ಭೂಮಿಗೆ ಕ್ಷುದ್ರಗ್ರಹದ (Astroid) ಅಪ್ಪಳಿಸುವಿಕೆ ಎಷ್ಟೊಂದು ತೀವ್ರವಾಗಿತ್ತೆಂದರೆ, ಡೈನೋಸಾರ್ ಗಳ ಅವಶೇಷಗಳು ಬ್ಯಾಹ್ಯಾಕಾಶಕ್ಕೆ ತಲುಪಿವೆ ಎನ್ನಲಾಗುತ್ತದೆ.

ನಿಜವಾದ ಡೈನೋಸಾರ್ ಗಳ ಜೊತೆಗೆ ಇದೇ ರೀತಿ ಸಂಭಿವಿಸಿರಬೇಕು
ಇತ್ತೀಚೆಗಷ್ಟೇ ಟ್ವಿಟ್ಟರ್ ನಲ್ಲಿ ಇಂತಹುದೇ ಒಂದು ವಿಡಿಯೋ (Twitter Video) ಅನ್ನು ಹಂಚಿಕೊಳ್ಳಲಾಗಿದೆ. @WEIRDPHYSICS ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಳ್ಳಳಾಗಿರುವ ಈ ವಿಡಿಯೋನಲ್ಲಿ ಒಂದು ಟಾಯ್ ಡೈನೋಸಾರ್ ನೋಡಬಹುದಾಗಿದೆ. ಈ ಡೈನೋಸಾರ್ ಅನ್ನು ಟ್ಯಾಂಪಲೀನ್ ಮೇಲೆ ನಿಲ್ಲಿಸಲಾಗಿದೆ. ಅಷ್ಟರಲ್ಲಿ ಒಂದು ದೊಡ್ಡ ಗಾತ್ರದ ವಸ್ತುವೊಂದು ಟ್ಯಾಂಪಲೀನ್ ಗೆ ಅಪ್ಪಳಿಸುತ್ತದೆ. ಆಗ ಟ್ಯಾಂಪಲೀನ್ ಮೇಲೆ ನಿಲ್ಲಿಸಲಾಗಿರುವ ಡೈನೋಸಾರ್ ಮೇಲಕ್ಕೆ ಚಿಮ್ಮುತ್ತದೆ. ಈ ವಿಡಿಯೋಗೆ ಈಗಾಗಲೇ 1.4 ಮಿಲಿಯನ್ ವೀಕ್ಷಣೆಗಳು ದೊರೆತಿವೆ. 

ವಿಡಿಯೋ ನಲ್ಲಿ ನ್ಯೂಟನ್ First Law of Motion (Newton's First Law Of Motion) ತೋರಿಸಲಾಗಿದೆ. ಈ ವಿಡಿಯೋಗೆ (Viral News) ಕಾಮೆಂಟ್ ಮಾಡಿರುವ ಟ್ವಿಟ್ಟರ್ ಬಳಕೆದಾರನೊಬ್ಬ. ನಿಜದಲ್ಲಿ ಡೈನೋಸಾರ್ ಗಳ ಜೊತೆಗೆ ಇದೆ ರೀತಿ ಸಂಭವಿಸಿರಬಹುದೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ-ಈ ದೇಶದಲ್ಲಿ ಸೈನ್ಯಕ್ಕೆ ಸೇರುವ ಮಹಿಳೆಯೆರಿಗೆ ಮಾಡಲಾಗುತ್ತೆ Virginity Test : ಈ ಬದಲಾವಣೆಗೆ ಮುಂದಾದ ಸರ್ಕಾರ

ಅಸ್ಟ್ರಾಯಿಡ್ ಭೂಮಿಗೆ ಅಪ್ಪಳಿಸುವಿಕೆ 
ವರ್ಷ 2017ರಲ್ಲಿ ಪ್ರಕಟಗೊಂಡ ಪೀಟರ್ ಬ್ರೈನನ್ ಪುಸ್ತಕ 'ದಿ ಎಂಡ್ ಆಫ್ ವೊರ್ಲ್ದ್'ನಲ್ಲಿ ಜಿಯೋಫಿಸಿಕ್ಸ್ ಮಾರಿಯೋ ರೆಬೋಲೆಡೋ  ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಅವರ ಪ್ರಕಾರ ಅಸ್ಟ್ರಾಯಿಡ್ ಗಳ ಅಟ್ಮಾಸ್ಫೆರಿಕ್ ಪ್ರೆಶರ್ ನಿಂದಲೇ ಭೂಮಿಲ್ಲಿ ಆಳವಾದ ತಗ್ಗು ಬೀಳಲಾರಂಭಿಸಿತ್ತು, ಆಗ ಇನ್ನೂ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿರಲಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ-OMG ! ಈ ದೇಶದಲ್ಲಿ Ladies Fingerಗಳನ್ನು ಬೆಂಡೆಯಂತೆ ಕತ್ತರಿಸಿ ಸುಡುತ್ತಾರಂತೆ !

ಚಂದ್ರನ ಮೇಲೆ ಡೈನೋಸಾರ್ ಗಳ ಪಳಿಯುಳಿಕೆ 
ಪೀಟರ್ ಬ್ರೈನನ್ ಓರ್ವ ಪ್ರಶಸ್ತಿ ವಿಜೇತ ಸೈನ್ಸ್ ಪತ್ರಕರ್ತರಾಗಿದ್ದಾರೆ. 'ಮಾರಿಯೋ ರೆಬೋಲೆಡೋ ಪ್ರಕಾರ ಈ ಕ್ಷುದ್ರಗ್ರಹ ಎಷ್ಟೊಂದು ವಿಶಾಲವಾಗಿತ್ತೆಂದರೆ, ಸಂಪೂರ್ಣ ವಾಯುಮಂಡಲ ಪ್ರವೇಶದ ಬಳಿಕವೂ ಕೂಡ ಅದಕ್ಕೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ ಹಾಗೂ ಅದು ಸಂಪೂರ್ಣವಾಗಿ ಭೂಮಿಗೆ ಅಪ್ಪಳಿಸಿರಬಹುದು' ಎಂದು ತಮ್ಮ ಪುಸ್ತಕದಲ್ಲಿ ಪೀಟರ್ ಉಲ್ಲೇಖಿಸಿದ್ದಾರೆ. 'ಅಸ್ಟ್ರಾಯಿಡ್ ನಿಂದ ನಿರ್ಮಾಣಗೂಂಡ ಒತ್ತಡದ ಕಾರಣ ಆಗಸದಲ್ಲಿ ವ್ಯಾಕ್ಯೂಮ್ ಉತ್ಪತ್ತಿಯಾಗಿ, ಆ ನಿರ್ವಾತವನ್ನು ತುಂಬಲು ಗಾಳಿ ಮೇಲೇಳಲು ಆರಂಭಿಸುತ್ತಿದ್ದಂತೆ ಭೂಮಿಯ ತುಣುಕುಗಳು ಬಾಹ್ಯಾಕಾಶವನ್ನು ದಾಟಿ ಮುಂದಕ್ಕೆ ಹೋಗಿವೆ' ಎಂದು ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇದಲ್ಲದೆ, ಭೂಮಿಯ ಮೇಲಿದ್ದ ಡೈನೋಸಾರ್ ಪಳಿಯುಳಿಕೆಗಳೂ ಕೂಡ ಚಂದ್ರನ (Moon) ಮೇಲೆ ತಲುಪಿರುವ ಸಾಧ್ಯತೆಯನ್ನು ರೆಬೋಲೆಡೋ ವರ್ತಿಸಿದ್ದಾರೆ ಎಂದು ಪೀಟರ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ-Cosmic Ghosts: ಬ್ರಹ್ಮಾಂಡದಲ್ಲಿ ಕುಣಿಯುತ್ತಿರುವ ಈ ದೆವ್ವಗಳನ್ನು ನೀವೆಂದಾದರೂ ನೋಡಿದ್ದೀರಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News