Independence Day: ಆಗಸ್ಟ್ 15 ರಂದು ದೆಹಲಿಯಿಂದ ಕಾಶ್ಮೀರದವರೆಗೆ ಹೈ ಅಲರ್ಟ್, ಗಡಿಗಳಲ್ಲಿ ತೀವ್ರ ನಿಗಾ

Independence Day: ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯಿಂದ ಕಾಶ್ಮೀರದವರೆಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಗುಪ್ತಚರ ಸಂಸ್ಥೆಗಳು ಭಯೋತ್ಪಾದಕರ ಪಿತೂರಿಯ ಬಗ್ಗೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಎಚ್ಚೆತ್ತುಕೊಂಡಿವೆ. ದೆಹಲಿ ಪೊಲೀಸರು ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಇದರ ಹೊರತಾಗಿ, ಕೆಂಪು ಕೋಟೆಯಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ.

Written by - Yashaswini V | Last Updated : Aug 14, 2021, 08:20 AM IST
  • ಸ್ವಾತಂತ್ರ್ಯ ದಿನಾಚರಣೆಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ
  • ದೆಹಲಿ ಗಡಿಗಳ ಮೇಲೆ ತೀವ್ರ ನಿಗಾ
  • ಜಮ್ಮು ಮತ್ತು ಕಾಶ್ಮೀರದ ಎಲ್ಲೆಡೆ ಸೈನಿಕರನ್ನು ನಿಯೋಜಿಸಲಾಗಿದೆ
Independence Day: ಆಗಸ್ಟ್ 15 ರಂದು ದೆಹಲಿಯಿಂದ ಕಾಶ್ಮೀರದವರೆಗೆ ಹೈ ಅಲರ್ಟ್, ಗಡಿಗಳಲ್ಲಿ ತೀವ್ರ ನಿಗಾ title=
High Alert In Independence Day (Image courtesy: Reuters)

ನವದೆಹಲಿ: Independence Day- ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ  ಯಾವುದೇ ತೊಂದರೆಯಾಗದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜಧಾನಿ ದೆಹಲಿಯಿಂದ ಕಾಶ್ಮೀರದವರೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭದ್ರತಾ ಪಡೆ ಸಿಬ್ಬಂದಿ ದೆಹಲಿಯ ಎಲ್ಲೆಡೆ ಬೀಡುಬಿಟ್ಟಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ (Independence Day) ದೃಷ್ಟಿಯಿಂದ, ಅನೇಕ ಸಾಂಪ್ರದಾಯಿಕ ಮಾರ್ಗಗಳನ್ನು ಮುಚ್ಚಲಾಗಿದೆ ಮತ್ತು ದೆಹಲಿ ಗಡಿಯಲ್ಲಿ ಕಟ್ಟುನಿಟ್ಟಾದ ನಿಗಾ ವಹಿಸಲಾಗಿದೆ. ಇದರ ಹೊರತಾಗಿ, ಡ್ರೋನ್ ವಿರೋಧಿ ವ್ಯವಸ್ಥೆಯನ್ನು (Anti-drone System) ಸಹ ನಿಯೋಜಿಸಲಾಗಿದೆ.

PAK ಪಿತೂರಿಯ ಅಪಾಯ:
ಜಮ್ಮು ಮತ್ತು ಕಾಶ್ಮೀರದಲ್ಲಿಯೂ  (Jammu & Kashmir) ಸ್ವಾತಂತ್ರ್ಯ ದಿನಾಚರಣೆಯ (Independence Day) ಬಗ್ಗೆ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ. ರಸ್ತೆಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ.. ವಾಸ್ತವವಾಗಿ, ಪಾಕಿಸ್ತಾನವು ಯಾವುದೇ ಪಿತೂರಿಯನ್ನು ಕಾರ್ಯಗತಗೊಳಿಸಲು ಯೋಜಿಸಬಹುದು ಎಂಬ ಆತಂಕವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಪಡೆಗಳು ಕಣಿವೆಯಲ್ಲಿ ವಿಶೇಷ ನಿಗಾ ವಹಿಸುತ್ತಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ- Independence Day 2021: ಈ ಸ್ವಾತಂತ್ರ್ಯ ದಿನದಂದು, ಪ್ಲಾಸ್ಟಿಕ್ ಧ್ವಜಕ್ಕೆ ಹೇಳಿ 'NO'

ಗುಪ್ತಚರ ಮಾಹಿತಿ ಮೇರೆಗೆ ಪೊಲೀಸರು ಎಚ್ಚರಿಸಿದ್ದಾರೆ:
ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಮತ್ತು ಆಚರಣೆಯ ದಿನದಂದು, ರಾಷ್ಟ್ರ ರಾಜಧಾನಿ ದೆಹಲಿಯ ಮೇಲೆ ಭಯೋತ್ಪಾದಕ ದಾಳಿಯ (Terrorist Attack) ಬೆದರಿಕೆ ಇದೆ. ಈ ನಿಟ್ಟಿನಲ್ಲಿ ಗುಪ್ತಚರ ಸಂಸ್ಥೆಗಳಿಂದ ಎಚ್ಚರಿಕೆಯನ್ನೂ ನೀಡಲಾಗಿದೆ. ಈ ನಿಟ್ಟಿನಲ್ಲಿ, ಶುಕ್ರವಾರ ಮಧ್ಯಾಹ್ನ ದೆಹಲಿ ಪೊಲೀಸರ ಉನ್ನತ ಅಧಿಕಾರಿಗಳ ಸಭೆ ನಡೆಯಿತು, ಇದರಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಮೆಟ್ರೋ, ಮಾರುಕಟ್ಟೆ, ಮಾಲ್ ಇತ್ಯಾದಿಗಳ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಇದರ ಹೊರತಾಗಿ, ದೆಹಲಿಯ ಗಡಿಯಲ್ಲಿ ವಿಶೇಷ ಜಾಗರೂಕತೆಯನ್ನು ಸಹ ತೆಗೆದುಕೊಳ್ಳಲಾಗಿದೆ. ಹಾದುಹೋಗುವ ಪ್ರತಿಯೊಂದು ವಾಹನವನ್ನು ಪರಿಶೀಲಿಸಲಾಗುತ್ತಿದೆ.

ಖಲಿಸ್ತಾನ್ ಬೆಂಬಲಿಗರ ಮೇಲೆ ಕಣ್ಣಿಡಿ:
ಅದೇ ಸಮಯದಲ್ಲಿ, ಖಲಿಸ್ತಾನಿ ಬೆಂಬಲಿಗರು (Khalistan Supporters) ಕೂಡ ಆಗಸ್ಟ್ 15 ರಂದು ಏನಾದರೂ ತೊಂದರೆ ಮಾಡುವ ನಿರೀಕ್ಷೆಯಿದೆ. ದೆಹಲಿ ಮತ್ತು ಪಂಜಾಬ್‌ನ ಐತಿಹಾಸಿಕ ಕಟ್ಟಡಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಖಲಿಸ್ತಾನಿಗಳು ಖಲಿಸ್ತಾನಿ ಧ್ವಜವನ್ನು ಹಾರಿಸಬಹುದೆಂದು ಭದ್ರತಾ ಏಜೆನ್ಸಿಗಳು ಮಾಹಿತಿ ನೀಡಿವೆ. ಈ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಖಲಿಸ್ತಾನಿಯು ರೈತರನ್ನು ಪ್ರಚೋದಿಸಬಹುದು ಮತ್ತು ಉಗ್ರ ಪ್ರದರ್ಶನವನ್ನು ನಡೆಸಬಹುದು ಎಂಬ ಆತಂಕವೂ ಇದೆ. ಖಲಿಸ್ತಾನ್ ಬೆಂಬಲಿಗರು ಆಗಸ್ಟ್ 14 ರ ಮಧ್ಯರಾತ್ರಿ 12 ರಿಂದ ಆಗಸ್ಟ್ 15 ರವರೆಗಿನ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಸಮಯದಲ್ಲಿ ಅಥವಾ ನಂತರ ಅಡ್ಡಿಪಡಿಸಬಹುದು ಎಂದು ಗುಪ್ತಚರ ಎಚ್ಚರಿಕೆ ತಿಳಿಸಿದೆ.

ಇದನ್ನೂ ಓದಿ- Drone Attack: ಸ್ವಾತಂತ್ರ್ಯೋತ್ಸವಕ್ಕೆ ಉಗ್ರರ ಕರಿನೆರಳು, ದೆಹಲಿಯಲ್ಲಿ ಹೈ ಅಲರ್ಟ್!

ಐತಿಹಾಸಿಕ ಸ್ಥಳಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ:
ಭಯೋತ್ಪಾದಕ ದಾಳಿಯ ಒಳಹರಿವಿನ ನಡುವೆ ಖಲಿಸ್ತಾನಿ ಬೆಂಬಲಿಗರ ಬಗ್ಗೆ ಪಡೆದ ಗುಪ್ತಚರ ಎಚ್ಚರಿಕೆಯಿಂದ ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ. ಪೊಲೀಸರು ತನ್ನ ಗುಪ್ತಚರ ವಿಭಾಗದ ವಿಶೇಷ ಘಟಕವನ್ನು ಎಚ್ಚರಿಸಿದ್ದಾರೆ. ಮಾಹಿತಿಯ ಪ್ರಕಾರ, ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಸರಳ ಸಮವಸ್ತ್ರದಲ್ಲಿರುವ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಇದರ ಹೊರತಾಗಿ, ಆಗಸ್ಟ್ 15 ರ ದೃಷ್ಟಿಯಿಂದ, ಆಕಾಶಬುಟ್ಟಿಗಳು ಮತ್ತು ಡ್ರೋನ್‌ಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ ಮತ್ತು ಇಡೀ ದೆಹಲಿಯಲ್ಲಿ ಸೆಕ್ಷನ್ 144 ಅನ್ನು ವಿಧಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News