ನವದೆಹಲಿ: ಭಾರತದ ಯುವ ಗಾಲ್ಫರ್ ಅದಿತಿ ಅಶೋಕ್(Aditi Ashok) ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಸಾಧನೆ ಮಾಡಿದ್ದಾರೆ. ಬೆಂಗಳೂರು ಮೂಲದ 23 ವರ್ಷದ ಅದಿತಿ ಅವರು ಟೋಕಿಯೊ ಒಲಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ. ವೈಯಕ್ತಿಕ ವಿಭಾಗದ ಗಾಲ್ಫ್ ಸ್ಪರ್ಧೆ(Olympics Golf)ಯಲ್ಲಿ ಅದಿತಿ ಕೂದಲೆಳೆ ಅಂತರದಲ್ಲಿ ಪದಕ ಮಿಸ್ ಮಾಡಿಕೊಂಡಿದ್ದು, 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟ(Tokyo Olympics 2020)ದಲ್ಲಿ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಅದಿತಿ ಭಾರತಕ್ಕೆ ಮತ್ತೊಂದು ಪದಕ ತಂದುಕೊಡುವ ಭರವಸೆ ಮೂಡಿಸಿದ್ದರು. ಮೊದಲ 3 ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಅದಿತಿ ದಿಗ್ಗಜ ಗಾಲ್ಫರ್ ಗಳಿಗೆ ಸಖತ್ ಪೈಪೋಟಿ ನೀಡಿದ್ದರು. ಆದರೆ ಕೊನೆಯ ಹಂತದಲ್ಲಿ ವಿಫಲವಾಗುವ ಮೂಲಕ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ಅದಿತಿಯವರು ಕೊನೆಯಲ್ಲಿ 18ನೇ ಹೋಲ್ ಅನ್ನು ಪೂರ್ಣಗೊಳಿಸಬೇಕಾಗಿತ್ತು. ಆದರೆ ಕೂದಲೆಳೆ ಅಂತರದಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶ ಮಿಸ್ ಆಗಿದೆ.
This time you have won our hearts Aditi ♥️ | Next time it would be a medal we are sure.
Love & respect all the way @aditigolf pic.twitter.com/ip8OPuBh6t— India_AllSports (@India_AllSports) August 7, 2021
ಇದನ್ನೂ ಓದಿ: Tokyo Olympics: ಕೈ ಜಾರಿದ ಕಂಚಿನ ಪದಕ, ಭಾರತೀಯ ಮಹಿಳಾ ಹಾಕಿ ತಂಡದ ಕನಸು ಭಗ್ನ
ವಿಶ್ವ ರ್ಯಾಕಿಂಗ್ ನಲ್ಲಿ 200ನೇ ಸ್ಥಾನದಲ್ಲಿರುವ ಅದಿತಿ ತಮ್ಮ ಅತ್ತುತ್ಯಮ ಪ್ರದರ್ಶನದ ಮೂಲಕ ಒಲಂಪಿಕ್ಸ್ ನಲ್ಲಿ 4ನೇ ಸ್ಥಾನ ಗಳಿಸುವ ಮೂಲಕ ಪ್ರತಿಯೊಬ್ಬರ ಗಮನ ಸೆಳೆದಿದ್ದಾರೆ. ಅಮೆರಿಕದ ನೆಲ್ಲಿ ಕೊರ್ಡಾ ಚಿನ್ನದ ಪದಕ ಪಡೆದರೆ, ಜಪಾನ್‌ನ ಇನೋಮ್ ಮೊನೆ ಮತ್ತು ನ್ಯೂಜಿಲೆಂಡ್‌ನ ಲಿಡಿಯಾ ಕೋ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಇಬ್ಬರು ಆಟಗಾರ್ತಿಯರು ಬೆಳ್ಳಿ ಮತ್ತು ಕಂಚಿನ ಪದಕಗಳಿಗಾಗಿ ಸ್ಪರ್ಧಿಸಲಿದ್ದಾರೆ.
💔💔💔
Aditi Ashok misses medal by a whisker. Finishes at 4th spot.
Absolute proud of you Aditi the way you have performed in last 4 days.
More power to you ♥️ #Tokyo2020 #Tokyo2020withIndia_AllSports pic.twitter.com/LHmJUUTWZB— India_AllSports (@India_AllSports) August 7, 2021
ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿರುವ ಅಮೆರಿಕದ ನೆಲ್ಲಿ ಕೊರ್ಡಾರಂತಹ ಆಟಗಾರ್ತಿ ವಿರುದ್ಧ ಕನ್ನಡತಿ ಅದಿತಿ(Aditi Ashok) ಭರ್ಜರಿ ಪೈಪೋಟಿ ನೀಡಿದ್ದರು. ಶನಿವಾರ ಮಳೆಯಾದ ಪರಿಣಾಮ ಕೆಲಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಮಳೆ ನಿಲ್ಲುವ ಮುನ್ನ ನ್ಯೂಜಿಲ್ಯಾಂಡ್‌ನ ಲೋ ಕೈಡಿಯಾ ಜೊತೆ ಅದಿತಿ ಅಶೋಕ್ 3ನೇ ಸ್ಥಾನದಲ್ಲಿದ್ದರು. ಒಟ್ಟಾರೆಯಾಗಿ ಅವರು ಉತ್ತಮ ಸ್ಕೋರ್ ಹೊಂದಿದ್ದರು.
Well played, Aditi Ashok! One more daughter of India makes her mark!
You have taken Indian golfing to new heights by today's historic performance. You have played with immense calm and poise. Congratulations for the impressive display of grit and skills.
— President of India (@rashtrapatibhvn) August 7, 2021
Well played @aditigolf! You have shown tremendous skill and resolve during #Tokyo2020. A medal was narrowly missed but you’ve gone farther than any Indian and blazed a trail. Best wishes for your future endeavours.
— Narendra Modi (@narendramodi) August 7, 2021
ಇದನ್ನೂ ಓದಿ: Tokyo Olympics 2020 : ಬೆಳ್ಳಿಗೆ ಮುತ್ತಿಟ್ಟ ಕುಸ್ತಿಪಟು ರವಿ ದಹಿಯಾ
ಅದಿತಿ ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ವಿಭಾಗದಲ್ಲಿ 3 ಸುತ್ತು ಪೂರ್ಣಗೊಳಿಸಿ 2ನೇ ಪಡೆದುಕೊಂಡಿದ್ದರು. ಕೊನೆಯ ಸುತ್ತಿನಲ್ಲಿ ಕೊಂಚ ಯಡವಟ್ಟು ಮಾಡಿಕೊಂಡ ಅವರು 2ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದರು. ಈ ಮೂಲಕ ಕೂದಲೆಳೆ ಅಂತರದಲ್ಲಿ ಅವರು ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. 2016ರ ರಿಯೋ ಒಲಂಪಿಕ್ಸ್(Rio Olympics)ನಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ಅದಿತಿ 41ನೇ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ತಮ್ಮ 2ನೇ ಒಲಂಪಿಕ್ಸ್ ಜರ್ನಿಯಲ್ಲಿಯೇ ಅವರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ. ಅದಿತಿ ಸಾಧನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ(Narendra Modi) ಸೇರಿದಂತೆ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ