Benefits of Raisins : ದಿನದ ಈ ಸಮಯದಲ್ಲಿ 12 ಒಣದ್ರಾಕ್ಷಿ ಸೇವಿಸಿ : ಆರೋಗ್ಯಕ್ಕೆ ಪಡೆಯಿರಿ ಅದ್ಭುತ ಪ್ರಯೋಜನ!

ನೀವು ದೈಹಿಕ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಒಣದ್ರಾಕ್ಷಿಗಳನ್ನು ಸೇವಿಸಿ, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಮೂಳೆಗಳನ್ನು ಬಲಿಷ್ಠವಾಗಿಸುತ್ತದೆ. ಒಣದ್ರಾಕ್ಷಿ ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

Written by - Channabasava A Kashinakunti | Last Updated : Aug 4, 2021, 09:38 PM IST
  • ಇಂದು ನಾವು ನಿಮಗೆ ಒಣದ್ರಾಕ್ಷಿಯ ಪ್ರಯೋಜನಗಳನ್ನು ತಂದಿದ್ದೇವೆ
  • ಒಣದ್ರಾಕ್ಷಿ ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ
  • ನೆನೆಸಿದ ಒಣದ್ರಾಕ್ಷಿ ತೂಕ ಇಳಿಸುವಲ್ಲಿ ಪರಿಣಾಮಕಾರಿ
Benefits of Raisins : ದಿನದ ಈ ಸಮಯದಲ್ಲಿ 12 ಒಣದ್ರಾಕ್ಷಿ ಸೇವಿಸಿ : ಆರೋಗ್ಯಕ್ಕೆ ಪಡೆಯಿರಿ ಅದ್ಭುತ ಪ್ರಯೋಜನ! title=

ನವದೆಹಲಿ : ಇಂದು ನಾವು ನಿಮಗೆ ಒಣದ್ರಾಕ್ಷಿಯ ಪ್ರಯೋಜನಗಳನ್ನು ತಂದಿದ್ದೇವೆ. ಹೌದು, ಸಿಹಿಯಾದ ಒಣದ್ರಾಕ್ಷಿ ತಿನ್ನಲು ಬಹಳ ರುಚಿಯಾಗಿರುತ್ತೆ. ದೇಹದಲ್ಲಿ ಉಂಟಾಗುವ ನಿಶ್ಯಕ್ತಿಯನ್ನು ತೆಗೆದುಹಾಕುವುದರಿಂದ ಹಿಡಿದು ಅನೇಕ ರೋಗಗಳಿಗೆ ಪರಿಹಾರ ನೀಡಲು ಇದು ತುಂಬಾ ಉಪಯುಕ್ತವಾಗಿದೆ. ನೀವು ದೈಹಿಕ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಒಣದ್ರಾಕ್ಷಿಗಳನ್ನು ಸೇವಿಸಿ, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಮೂಳೆಗಳನ್ನು ಬಲಿಷ್ಠವಾಗಿಸುತ್ತದೆ. ಒಣದ್ರಾಕ್ಷಿ ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಒಣದ್ರಾಕ್ಷಿಯಲ್ಲಿ ಕಂಡುಬರುವ ಪೋಷಕಾಂಶಗಳು :

ಒಣದ್ರಾಕ್ಷಿ(Raisins)ಯಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ, ಪೊಟ್ಯಾಶಿಯಂ, ತಾಮ್ರ, ವಿಟಮಿನ್-ಬಿ 6 ಮತ್ತು ಮ್ಯಾಂಗನೀಸ್ ಹಾಗೂ ನಮ್ಮ ದೇಹಕ್ಕೆ ಬೇಕಾದ ಹಲವು ಅಗತ್ಯ ಪೋಷಕಾಂಶಗಳಿವೆ. ಒಣದ್ರಾಕ್ಷಿಯಲ್ಲಿ ಕಂಡುಬರುವ ಈ ಎಲ್ಲಾ ಅಗತ್ಯ ಪೋಷಕಾಂಶಗಳು ನಮ್ಮ ದೇಹಕ್ಕೆ ಅಗತ್ಯವಾಗಿವೆ.

ಇದನ್ನೂ ಓದಿ : How To Increase Hemoglobin: ದೇಹದಲ್ಲಿ ಹಿಮೊಗ್ಲೋಬಿನ್ ಹೆಚ್ಚಿಸಲು ಸೇವಿಸಿ ಈ ಆಹಾರ

ಆಯುರ್ವೇದ ತಜ್ಞರು ಏನು ಹೇಳುತ್ತಾರೆ?

ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ ಕಬ್ಬಿಣ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫೈಬರ್ ಒಣದ್ರಾಕ್ಷಿಯಲ್ಲಿ ಕಂಡುಬರುತ್ತವೆ. ನೀವು ಪ್ರತಿದಿನ 10 ರಿಂದ 12 ಒಣದ್ರಾಕ್ಷಿಗಳನ್ನು ಸೇವಿಸಬಹುದು. ಇದರಲ್ಲಿರುವ ಎಲ್ಲಾ ಪೋಷಕಾಂಶಗಳು ಆರೋಗ್ಯ(Health)ಕರ ದೇಹಕ್ಕೆ ಬಹಳ ಪ್ರಯೋಜನಕಾರಿ. ಒಣದ್ರಾಕ್ಷಿ ಪುರುಷರ ಲೈಂಗಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಒಣದ್ರಾಕ್ಷಿಯ ಅದ್ಭುತ ಪ್ರಯೋಜನಗಳು :

1. ಒಣದ್ರಾಕ್ಷಿಯಲ್ಲಿ ರಂಜಕ, ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಕಂಡುಬರುತ್ತವೆ, ಇದು ಮಕ್ಕಳ(Childers) ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.

2. ನೆನೆಸಿದ ಒಣದ್ರಾಕ್ಷಿ ತೂಕ ಇಳಿಸುವಲ್ಲಿ ಪರಿಣಾಮಕಾರಿ. ಇದು ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಫೈಬರ್ ನಂತಹ ಗುಣಗಳನ್ನು ಹೊಂದಿದ್ದು ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

3. ಮೂಳೆಗಳಿಗೆ ಮತ್ತೆ ಹಲ್ಲುಗಳಿಗೆ(Teeth) ಇದರಲ್ಲಿರುವ ಕ್ಯಾಲ್ಸಿಯಂ ನಮ್ಮ ಆರೋಗ್ಯಕ್ಕೆ ತುಂಬಾ ಸಹಾಯಕವಾಗಿದೆ. ಅರ್ಧ ಕಪ್ ಒಣದ್ರಾಕ್ಷಿಯೊಳಗೆ 45 ಮಿಗ್ರಾಂ ಕ್ಯಾಲ್ಸಿಯಂ ಇರುತ್ತದೆ ಎಂದರೆ  ನಂಬತೀರಾ? ನಂಬಲೇಬೇಕು. ಇದು ನಿಮ್ಮ ದೈನಂದಿನ ಕ್ಯಾಲ್ಸಿಯಂ ಸೇವನೆಯ 4 ಪ್ರತಿಶತಕ್ಕೆ ಸಮನಾಗಿರುತ್ತದೆ.

4. ಕಡಿಮೆ ವೀರ್ಯಾಣುಗಳ ಸಮಸ್ಯೆ ಇರುವ ಪುರುಷರು ಒಣದ್ರಾಕ್ಷಿ ಮತ್ತು ಜೇನುತುಪ್ಪ(Honey)ವನ್ನು ಸೇವಿಸಬೇಕು. ಇದು ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

5. ಒಣದ್ರಾಕ್ಷಿಯೊಳಗೆ ಫೈಟೊನ್ಯೂಟ್ರಿಯಂಟ್‌ಗಳು ಕಂಡುಬರುತ್ತವೆ. ಇದು ನಿಮ್ಮ ಹಲ್ಲು ಮತ್ತು ಒಸಡುಗಳಿಗೆ ಪ್ರಯೋಜನಕಾರಿ. ಇದರ ನಿಯಮಿತ ಬಳಕೆಯಿಂದ, ನಿಮಗೆ ಕುರುಹ ಸಮಸ್ಯೆ ಕೂಡ ಬರುವುದಿಲ್ಲ.

ಇದನ್ನೂ ಓದಿ : Health Benefits Clay and Copper Water: ನೀರನ್ನು ಈ ರೀತಿ ಸಂಗ್ರಹಿಸಿ ಸೇವಿಸಿದರೆ ಆರೋಗ್ಯಕ್ಕೆ ಹೆಚ್ಚು ಲಾಭಕಾರಿ

ಒಣದ್ರಾಕ್ಷಿ ತಿನ್ನಲು ಸರಿಯಾದ ಸಮಯ :

ಒಣದ್ರಾಕ್ಷಿಗಳನ್ನು ನೆನೆಸಿ ತಿನ್ನಬೇಕು ಏಕೆಂದರೆ ಇದು ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಒಣದ್ರಾಕ್ಷಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿರಿ. ಇದರೊಂದಿಗೆ ನೀವು ರೋಗಗಳಿಂದಲೂ ರಕ್ಷಿಸಲ್ಪಡುತ್ತೀರಿ ಮತ್ತು ಇದು ನಿಮ್ಮನ್ನು ದಿನವಿಡೀ ಶಕ್ತಿಯುತವಾಗಿರಿಸುತ್ತದೆ.

ವಿವಾಹಿತ ಪುರುಷರಿಗೆ ಒಣದ್ರಾಕ್ಷಿ ಪ್ರಯೋಜನಕಾರಿ :

ಡಾ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಒಣದ್ರಾಕ್ಷಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ವಿವಾಹಿತ ಪುರುಷರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಒಂದು ಸಂಶೋಧನೆಯ ಪ್ರಕಾರ, ಒಣದ್ರಾಕ್ಷಿ ಪುರುಷ ಫಲವತ್ತತೆಯನ್ನು ಸುಧಾರಿಸುವ ಗುಣವನ್ನು ಹೊಂದಿದೆ ಎಂದು ಅವರು ಹೇಳಿದರು. ವೀರ್ಯ ಚಲನಶೀಲತೆಯನ್ನು ಹೆಚ್ಚಿಸುವ ಕ್ರಿಯೆಯು ಒಣದ್ರಾಕ್ಷಿಯಲ್ಲಿ ಸಕ್ರಿಯವಾಗಿ ಕಂಡುಬರುತ್ತದೆ. ಆದ್ದರಿಂದ ಒಣದ್ರಾಕ್ಷಿಯನ್ನು ಹಾಲಿನೊಂದಿಗೆ ಸೇವಿಸಲು ಸೂಚಿಸಲಾಗಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News