Garam Masala Benefits and Side Effects: ಎಲ್ಲಾ ಆಹಾರಗಳಲ್ಲಿ ಗರಂ ಮಸಾಲೆ ಬಳಸುವ ಮುನ್ನ ತಿಳಿದುಕೊಳ್ಳಿ ಈ ವಿಚಾರ

 ಅತಿಯಾಗಿ ಅಥವಾ ನಿರಂತರವಾಗಿ ಬಳಸುವ ಕಾರಣದಿಂದಾಗಿ ಈ ಮಸಾಲೆಗಳು ಹಾನಿಯನ್ನು ಉಂಟುಮಾಡಬಹುದು.

ನವದೆಹಲಿ : ಗರಂ ಮಸಾಲೆ ಆಹಾರದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಜೀರ್ಣಕ್ರಿಯೆ ಉತ್ತಮಗೊಳ್ಳಲು ಗರಂ ಮಸಾಲೆ ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳಿಗೂ ಇದು ಪ್ರಯೋಜನಕಾರಿಯಾಗಿದೆ. ಆದರೆ, ಕೆಲವೊಮ್ಮೆ ಅತಿಯಾಗಿ ಅಥವಾ ನಿರಂತರವಾಗಿ ಬಳಸುವ ಕಾರಣದಿಂದಾಗಿ ಈ ಮಸಾಲೆಗಳು ಹಾನಿಯನ್ನು ಉಂಟುಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಶೀತ ಮತ್ತು ಕೆಮ್ಮಿನ ಸಂದರ್ಭದಲ್ಲಿ, ಇದರಿಂದ ಕಷಾಯವನ್ನು ತಯಾರಿಸಬಹುದು. ಲವಂಗ, ಕರಿಮೆಣಸು ಮತ್ತು ದಾಲ್ಚಿನ್ನಿ ಮುಂತಾದವುಗಳಿಂದ ಚಹಾ ಮಾಡಿ ಕುಡಿಯುವುದು ರುಚಿಯಾಗಿಯೂ ಇರುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಕೂಡಾ ಬಲಪಡಿಸುತ್ತದೆ.  

2 /5

 ಮಳೆಗಾಲದಲ್ಲಿ ಹೆಚ್ಚು ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಗರಂ ಮಸಾಲೆಗಳನ್ನು ಸೇವಿಸಬಹುದು. ಇದರಲ್ಲಿರುವ ಫೈಬರ್ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಾಲು ಸಹಾಯ ಮಾಡುತ್ತದೆ. ಮಲಬದ್ಧತೆಯ ಸಮಸ್ಯೆ ನಿವಾರಣೆಯಲ್ಲೂ ಇದು ಕೆಲಸ ಮಾಡುತ್ತದೆ.  

3 /5

ಗರಂ ಮಸಾಲೆಗಳು ಆ್ಯಂಟಿ ಇನ್ ಫ್ಲಮೆಟರಿ ಗುಣಗಳನ್ನು ಹೊಂದಿವೆ. ಇದು ನೋವು ಮತ್ತು ಊತವನ್ನು ಕಡಿಮೆ ಮಾಡುತ್ತವೆ.  ದೇಹದಿಂದ ದೀರ್ಘಕಾಲದ ನೋವನ್ನು ತೆಗೆದುಹಾಕಲು ಸಹ ಇದು ಸಹಾಯ ಮಾಡುತ್ತದೆ.    

4 /5

ಇದರ ಬಳಕೆಯು ಮಧುಮೇಹದಲ್ಲಿಯೂ ಪ್ರಯೋಜನಕಾರಿಯಾಗಿದೆ. ಗರಂ ಮಸಾಲೆಯು ಜೀರಿಗೆಯನ್ನು ಹೊಂದಿದೆ. ಇದು ಆ್ಯಂಟಿ ಡಯಾಬೆಟಿಕ್ ಏಜೆಂಟ್ ಅನ್ನು ಹೊಂದಿದೆ. ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.  

5 /5

ಗರಂ ಮಸಾಲೆಗಳು ಉಷ್ಣ ಗುಣವನ್ನು ಹೊಂದಿರುತ್ತದೆ. ಆದ್ದರಿಂದ ಗರಂ ಮಸಾಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನಿರಂತರವಾಗಿ ಸೇವಿಸುವುದರಿಂದ ಹಾನಿ ಉಂಟಾಗಬಹುದು. ಎದೆಯುರಿ, ಅಸಿಡಿಟಿ , ಹೊಟ್ಟೆಯಲ್ಲಿ ಉರಿಯುವಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.