ದೇಹದಲ್ಲಿ ಪ್ರೋಟೀನ್ ಕೊರತೆಯಿಂದ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸಬಹುದು. ಇದು ಎಡಿಮಾಗೆ ಕಾರಣವಾಗಬಹುದು.
ನವದೆಹಲಿ : ನಿಮ್ಮ ದೇಹದಲ್ಲಿ ಪ್ರೋಟೀನ್ ಕೊರತೆಯಿದ್ದರೆ, ಅದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ರೋಟೀನ್ ಕೊರತೆಯಿಂದಾಗಿ, ಕೆಲವು ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆ ಲಕ್ಷಣಗಳನ್ನು ಖಂಡಿತವಾಗಿಯೂ ನಿರ್ಲಕ್ಷಿಸಬಾರದು. ನಮ್ಮ ಮೂಳೆಗಳು, ಚರ್ಮ, ಕೂದಲು ಮತ್ತು ಇಮ್ಯುನ್ ಸಿಸ್ಟಮ್ ಅನ್ನು ಉತ್ತಮವಾಗಿಡಲು ಪ್ರೋಟೀನ್ ಅತ್ಯಗತ್ಯ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ದೇಹದಲ್ಲಿ ಪ್ರೋಟೀನ್ ಕೊರತೆಯಿಂದ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸಬಹುದು. ಇದು ಎಡಿಮಾಗೆ (Edema)ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೇಹದ ಯಾವುದೇ ಭಾಗದಲ್ಲಿ ಊತ ಆರಂಭವಾಗುತ್ತದೆ. ತಜ್ಞರ ಪ್ರಕಾರ, ಹ್ಯುಮನ್ ಸೀರಮ್ ಅಲ್ಬುಮಿನ್ ಕೊರತೆಯಿಂದಾಗಿ ಇದು ಸಂಭವಿಸುತ್ತದೆ. ಆಲ್ಬುಮಿನ್ ರಕ್ತ ಅಥವಾ ರಕ್ತ ಪ್ಲಾಸ್ಮಾದಲ್ಲಿರುವ ಪ್ರೋಟೀನ್ ಆಗಿದೆ.
ಪ್ರೋಟೀನ್ ಕೊರತೆಯಿಂದ ಕೂದಲು ಉದುರಲು ಆರಂಭವಾಗುತ್ತದೆ. ಪ್ರೊಟಿನ್ ಕೊರತೆಯು ಚರ್ಮ ಮತ್ತು ಉಗುರುಗಳ ಮೇಲೂ ಪರಿಣಾಮ ಬೀರುತ್ತದೆ. ಪ್ರೋಟೀನ್ ಕೊರತೆಯಿಂದಾಗಿ, ಚರ್ಮವು ಬಿರುಕು ಬಿಡುತ್ತದೆ ಮತ್ತು ತ್ವಚೆಯ ಮೇಲೆ ಕೆಂಪು ಗುರುತುಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಉಗುರುಗಳು ಸಹ ದುರ್ಬಲಗೊಳ್ಳುತ್ತವೆ.
ಪ್ರೋಟೀನ್ ಕೊರತೆಯು ದೇಹದಲ್ಲಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಇದು ಇಮ್ಯುನ್ ಸಿಸ್ಟಮ್ ಮೇಲೆ ಪರಿಣಾಮ ಬೀರುತ್ತದೆ, ಈ ಕಾರಣದಿಂದಾಗಿ ಸುಲಭವಾಗಿ ಸೋಂಕಿಗೆ ಒಳಗಾಗಬಹುದು.
ಪ್ರೋಟೀನ್ ಕೊರತೆಯು ಮೂಳೆ ಮುರಿತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಅವುಗಳನ್ನು ಮುರಿಯುವ ಅಪಾಯವನ್ನು ಹೆಚ್ಚಿಸುತ್ತದೆ.
ಪ್ರೋಟೀನ್ ಕೊರತೆಯಿಂದಾಗಿ ಫ್ಯಾಟಿ ಲಿವರ್ ಸಮಸ್ಯೆಗೂ ಕಾರಣವಾಗಬಹುದು. ಇದರಲ್ಲಿ, ಯಕೃತ್ತಿನ ಕೋಶಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದು ಯಕೃತ್ತಿನ ಊತ, ಅಥವಾ ಯಕೃತ್ತಿನ ವೈಫಲ್ಯದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಫ್ಯಾಟಿ ಲಿವರ್ ಸಮಸ್ಯೆ ಸ್ಥೂಲಕಾಯದ ಜನರು ಮತ್ತು ಹೆಚ್ಚು ಆಲ್ಕೊಹಾಲ್ ಸೇವಿಸುವ ಜನರಲ್ಲಿ ಕಂಡುಬರುತ್ತದೆ.