Rice Water And Aloevera: ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹೆಣ್ಣು. ಪ್ರತೀ ಹೆಣ್ಣು ಕೂಡ ತಾನು ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾಳೆ. ಸುಂದರವಾಗಿ ಕಾಣುವುದು ಎಂದರೆ ಮಾರುಕಟ್ಟೆಯಲ್ಲಿ ಸಿಗುವ ಬಗೆ-ಬಗೆಯ ಕ್ರೀಂ ಅನ್ನು ಮುಖಕ್ಕೆ ಹಚ್ಚುವುದು ಅಥವಾ ಪಾರ್ಲರ್ಗೆ ಹೋಗಿ ತಯಾರಾಗುವುದು ಎಂದರ್ಥವಲ್ಲ. ನಿಮ್ಮ ಮನೆಯಲ್ಲಿಯೇ, ಹಿತ್ತಲಲ್ಲಿಯೇ ಇರುವ ಹಲವು ಪದಾರ್ಥಗಳನ್ನು ಬಳಸಿ ಸುಂದರ, ಆಕರ್ಷಕ ತ್ವಚೆಯನ್ನು ನಿಮ್ಮದಾಗಿಸಬಹುದು.
ಸಾಮಾನ್ಯವಾಗಿ ತಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಮಹಿಳೆಯರು ತಿಂಗಳಿಗೆ ಪಾರ್ಲರ್ನಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಇನ್ನೊಂದೆಡೆ ಪಾರ್ಲರ್ಗೆ ಹೋಗಲು ಅಥವಾ ತಮ್ಮ ಚರ್ಮದ ಆರೈಕೆಗಾಗಿ (Skin Care) ಸಮಯವೇ ಸಿಗದ ಅನೇಕ ಮಹಿಳೆಯರು ಸಹ ಇದ್ದಾರೆ. ಆದರೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಸಿಗುವ ಅಕ್ಕಿ ನೀರು ಮತ್ತು ಅಲೋವೆರಾ ಬಹಳ ಉಪಯುಕ್ತವಾಗಿದೆ ಎಂದು ನಿಮಗೆ ತಿಳಿದಿದೆಯೇ? ಅಕ್ಕಿ ನೀರು ಮತ್ತು ಅಲೋವೆರಾ ನಿಮ್ಮ ಮುಖದ ಮೇಲಿನ ಕಲೆಗಳನ್ನು ನಿವಾರಿಸುವುದರ ಜೊತೆಗೆ ನೀವು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
ಇದನ್ನೂ ಓದಿ- Home Remedies: ವಾರಕ್ಕೆ 2-3 ಬಾರಿ ಈ ಕೆಲಸ ಮಾಡಿದರೆ ಮುಖದ ಮೇಲಿನ ಬ್ಲ್ಯಾಕ್ಹೆಡ್ಸ್, ವೈಟ್ಹೆಡ್ಸ್ ಕಣ್ಮರೆಯಾಗುತ್ತೆ
ಸುಂದರ ತ್ವಚೆಯನ್ನು ಪಡೆಯಲು ಅಲೋವೆರಾ ಮತ್ತು ಅಕ್ಕಿ ನೀರನ್ನು ಬಳಸುವುದು ಹೇಗೆ?
ಅಕ್ಕಿ ನೀರು ಮತ್ತು ಅಲೋವೆರಾ:-
ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಅರ್ಧ ಟೀಸ್ಪೂನ್ ಅಕ್ಕಿ ನೀರನ್ನು 1 ಟೀಸ್ಪೂನ್ ಅಲೋವೆರಾ (Aloevera) ಜೆಲ್ ಅನ್ನು ಚೆನ್ನಾಗಿ ಬೆರೆಸಿ. ಮಲಗುವ ಮುನ್ನ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ. ಬೆಳಿಗ್ಗೆ ಎದ್ದ ಬಳಿಕ ಸ್ವಚ್ಚವಾಗಿರುವ ನೀರಿನಿಂದ ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ. ನೀವು ಬಯಸಿದರೆ ನೀವು ಇದನ್ನು ಪ್ರತಿದಿನ ಮಾಡಬಹುದು. ಹೀಗೆ ಮಾಡುವುದರಿಂದ ಹೊಳೆಯುವ ಕಾಂತಿಯುತ ಚರ್ಮ ನಿಮ್ಮದಾಗುತ್ತದೆ.
ಇದನ್ನೂ ಓದಿ- Hair Care Tips: ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಈ ಟಿಪ್ಸ್ ಅನುಸರಿಸಿ
ಅಲೋವೆರಾವನ್ನು ಚರ್ಮದ ಮೇಲೆ ಈ ರೀತಿ ಹಚ್ಚಿ:
ಇದಕ್ಕಾಗಿ, ಮೊದಲು ನಿಮ್ಮ ಮುಖಕ್ಕೆ ಸ್ಟೀಮ್ ತೆಗೆದುಕೊಳ್ಳಿ. ಮುಖಕ್ಕೆ ಸ್ಟೀಮ್ ನೀಡುವುದರಿಂದ ರಂಧ್ರಗಳು ತೆರೆದುಕೊಳ್ಳುತ್ತವೆ. ಇದರೊಂದಿಗೆ ಕೊಳಕು ಹೊರಬರುತ್ತದೆ. ಸ್ಟೀಮ್ ನೀಡಿದ ನಂತರ, ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿ ಮತ್ತು ಕೈಗಳಿಂದ ಲಘುವಾಗಿ ಮಸಾಜ್ ಮಾಡಿ. ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಈ ರೀತಿ ಮಾಡುವುದರಿಂದ ಉತ್ತಮ ತ್ವಚೆಯನ್ನು ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ