ಮಹಿಳಾ ಡಬಲ್ಸ್ ಮೊದಲ ಸುತ್ತಿನಲ್ಲೇ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಜೋಡಿ ಹೊರಬಿದ್ದಿದೆ.
ಟೋಕಿಯೊ ಒಲಂಪಿಕ್ಸ್ ಪ್ರಾರಂಭವಾಗಿ ಕೆಲ ದಿನಗಳಷ್ಟೇ ಕಳೆದಿವೆ. ಆದರೆ ಈ ಬಾರಿ ಪದಕದ ನಿರೀಕ್ಷೆ ಮೂಡಿಸಿದ್ದ ಕೆಲ ಟಾಪ್ ಆಟಗಾರರು ಹೀನಾಯ ಸೋಲು ಕಾಣುವ ಮೂಲಕ ಬಹುಬೇಗನೆ ಕ್ರೀಡಾಕೂಟದಿಂದ ನಿರ್ಗಮಿಸಿದ್ದಾರೆ. ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಬ್ರಿಟನ್ ಮೂಲದ ಆಂಡಿ ಮುರ್ರೆ ಸೇರಿದಂತೆ ಅನೇಕ ಟಾಪ್ ಆಟಗಾರರು ಸೋತು ಅಭಿಮಾನಿಗಳಿಗೆ ದೊಡ್ಡ ನಿರಾಸೆ ಮೂಡಿಸಿದ್ದಾರೆ. ಪದಕದ ನಿರೀಕ್ಷೆ ಹುಟ್ಟುಹಾಕಿ ಬಹುಬೇಗನೆ ಕ್ರೀಡಾಕೂಟದಿಂದ ಹೊರಬಿದ್ದಿರುವ ಕೆಲ ಆಟಗಾರರ ಮಾಹಿತಿ ಇಲ್ಲಿದೆ ನೋಡಿ…
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಭಾರತದ ಖ್ಯಾತ ಟೆನಿಸ್ ತಾರೆ, 4 ಬಾರಿಯ ಒಲಿಂಪಿಯನ್ ಸಾನಿಯಾ ಮಿರ್ಜಾ ಮೇಲೆ ಈ ಬಾರಿ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಟೋಕಿಯೊ ಒಲಿಂಪಿಕ್ಸ್ 2020ರ ಮಹಿಳಾ ಡಬಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲಿಯೇ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಜೋಡಿ ಹೊರಬಿದ್ದಿದೆ. ಉಕ್ರೇನ್ ನ ಅವಳಿ ಸಹೋದರಿಯರಾದ ನಾಡಿಯಾ ಮತ್ತು ಲಿಯುಡ್ಮಿಲಾ ಕಿಚೆನೋಕ್ ವಿರುದ್ಧ ಈ ಜೋಡಿ 6-0, 6-7, 8-10 ರಿಂದ ಪರಾಭವಗೊಂಡಿದೆ. ಮಹಿಳಾ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿಯೇ ಸಾನಿಯಾ-ಅಂಕಿತಾ ಜೋಡಿ ಸೋಲು ಕಾಣುವ ಮೂಲಕ ಭಾರೀ ನಿರಾಸೆ ಮೂಡಿಸಿದೆ.
ಬ್ರಿಟನ್ ಮೂಲದ ಖ್ಯಾತ ಟೆನಿಸ್ ಆಟಗಾರ, 2 ಬಾರಿಯ ಹಾಲಿ ಚಾಂಪಿಯನ್ ಆಂಡಿ ಮುರ್ರೆ ಟೋಕಿಯೊ ಒಲಂಪಿಕ್ಸ್ ನಿಂದ ಬಹುಬೇಗನೆ ನಿರ್ಗಮಿಸಿದ್ದಾರೆ. ಸ್ನಾಯುಸೆಳೆತದಿಂದ ಅವರು ಸಿಂಗಲ್ಸ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ಆಂಡಿ ಮುರ್ರೆ ಅವರ ಆಟವನ್ನು ಕಣ್ತುಂಬಿಕೊಳ್ಳಬೆಕೆಂದು ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ಅಲ್ಲದೆ ದೇಶಕ್ಕೆ ಪದಕವೂ ಕೈತಪ್ಪಿದಂತಾಗಿದೆ.
ಜಪಾನಿನ ಖ್ಯಾತ ಜಿಮ್ನಾಸ್ಟ್ ಕೊಹೆ ಉಚಿಮುರಾ ಕೂಡ ಈ ಬಾರಿ ನಿರಾಸೆ ಮೂಡಿಸಿದ್ದಾರೆ. 2 ಬಾರಿ ಒಲಿಂಪಿಕ್ ಆಲ್ರೌಂಡ್ ಚಾಂಪಿಯನ್ ಮತ್ತು 7 ಬಾರಿಯ ಒಲಿಂಪಿಕ್ ಪದಕ ವಿಜೇತ ಉಚಿಮುರಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಫೈನಲ್ ತಲುಪಲು ವಿಫಲರಾಗಿದ್ದಾರೆ.
ಜಪಾನ್ನ ಖ್ಯಾತ ಈಜುಪಟು, 200 ಮೀಟರ್ ವೈಯಕ್ತಿಕ ಮೆಡ್ಲೆ ಈಜು ಸ್ಪರ್ಧೆಯ ಚಿನ್ನದ ಪದಕ ವಿಜೇತ ಡೈಯಾ ಸೆಟೊ ಟೋಕಿಯೊ ಒಲಂಪಿಕ್ಸ್ ನಲ್ಲಿ ಫೈನಲ್ ತಲುಪಲು ವಿಫಲರಾದರು. ಈ ಬಾರಿಯೂ ಅವರು ದೇಶಕ್ಕೆ ಪದಕ ತಂದುಕೊಡುತ್ತಾರೆಂದು ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆಯುಂಟಾಗಿದೆ.
ವಿಂಬಲ್ಡನ್ ಚಾಂಪಿಯನ್ ಮತ್ತು ವಿಶ್ವದ ನಂಬರ್ 1 ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ ಕೂಡ ಬಹುಬೇಗನೆ ಕ್ರೀಡಾಕೂಟದಿಂದ ನಿರ್ಗಮಿಸಿ ನಿರಾಸೆ ಮೂಡಿಸಿದ್ದಾರೆ. ಪದಕ ನಿರೀಕ್ಷೆ ಮೂಡಿಸಿದ್ದ ಆಶ್ಲೇ ಬಾರ್ಟಿ ಟೋಕಿಯೊ ಒಲಂಪಿಕ್ಸ್ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ. ಬಾರ್ಟಿ 4-6, 3-6 ನೇರ ಸೆಟ್ಗಳಿಂದ ಸ್ಪೇನ್ನ ಸಾರಾ ಸೊರಿಬ್ಸ್ ಟಾರ್ಮೊ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ.