Kisan Bonus: ಆಗಸ್ಟ್ ನಲ್ಲಿ ಈ ರೈತರ ಖಾತೆ ಸೇರಲಿದೆ 2 ಲಕ್ಷ 25 ಸಾವಿರ ರೂಪಾಯಿ...! ತಿಳಿಯಿರಿ ಸಂಪೂರ್ಣ ಮಾಹಿತಿ

Kisan Bonus : ಬನಾಸ್ ಡೈರಿತನ್ನ ರೈತರಿಗೆ ಲಕ್ಷ ರೂಪಾಯಿಗಳ ಬೋನಸ್ ಘೋಷಿಸಿದೆ. ಇದರ ಅಡಿಯಲ್ಲಿ ಬನಾಸ್ ಡೈರಿ ಪ್ರತಿ ರೈತನ ಖಾತೆಗೆ ಲಕ್ಷಾಂತರ ರೂಪಾಯಿ ಬೋನಸ್ ಹಾಕಲಿದೆ. 

Written by - Ranjitha R K | Last Updated : Jul 25, 2021, 09:14 AM IST
  • ರೈತರಿಗೆ ಸಿಗಲಿದೆ ಭರ್ಜರಿ ಬೋನಸ್
  • ತನ್ನ ರೈತರಿಗೆ ಲಕ್ಷ ರೂಪಾಯಿಗಳ ಬೋನಸ್ ಘೋಷಿಸಿದ ಬನಾಸ್ ಡೈರಿ
  • ಮುಂದಿನ ತಿಂಗಳು ಅಂದರೆ ಆಗಸ್ಟ್‌ನಲ್ಲಿ ರೈತರ ಖಾತೆಗೆ ಹಣ ವರ್ಗ
Kisan Bonus: ಆಗಸ್ಟ್ ನಲ್ಲಿ ಈ ರೈತರ ಖಾತೆ ಸೇರಲಿದೆ 2 ಲಕ್ಷ 25 ಸಾವಿರ ರೂಪಾಯಿ...! ತಿಳಿಯಿರಿ ಸಂಪೂರ್ಣ ಮಾಹಿತಿ  title=
ರೈತರಿಗೆ ಸಿಗಲಿದೆ ಭರ್ಜರಿ ಬೋನಸ್ (file photo)

ನವದೆಹಲಿ :  Kisan Bonus : ಕರೋನಾ ಎರಡನೇ ಅಲೆಯ ಪರಿಣಾಮ ಕೃಷಿ ಕ್ಷೇತರ ವನ್ನು ಬಿಟ್ಟಿಲ್ಲ.  ಈ ಮಧ್ಯೆ, ಲಕ್ಷಾಂತರ ರೈತರಿಗೆ ಒಂದು ಸಿಹಿ ಸುದ್ದಿ ಇದೆ. ಬನಾಸ್ ಡೈರಿ (Banas Dairy) ತನ್ನ ರೈತರಿಗೆ ಲಕ್ಷ ರೂಪಾಯಿಗಳ ಬೋನಸ್ ಘೋಷಿಸಿದೆ. ಇದರ ಅಡಿಯಲ್ಲಿ ಬನಾಸ್ ಡೈರಿ ಪ್ರತಿ ರೈತನ ಖಾತೆಗೆ ಲಕ್ಷಾಂತರ ರೂಪಾಯಿ ಬೋನಸ್ (Bonus) ಹಾಕಲಿದೆ. 

1128 ಕೋಟಿ ರೂ. ಗಳ ಬೋನಸ್ : 
ಬನಾಸ್ ಕಂಠ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ (Banas Dairy) ಅಧ್ಯಕ್ಷ ಶಂಕರ್‌ಭಾಯ್ ಚೌಧರಿ,  ಜಾನುವಾರು ಸಾಕುವ ತನ್ನ 5 ಲಕ್ಷಕ್ಕೂ ಹೆಚ್ಚು ರೈತರಿಗೆ 1128 ಕೋಟಿ ರೂ.ಗಳ ಬೋನಸ್ ಘೋಷಿಸಿದ್ದಾರೆ. ಮುಂದಿನ ತಿಂಗಳು ಆಗಸ್ಟ್‌ನಲ್ಲಿ ಈ ಬೋನಸ್ (Kisan Bonus) ಮೊತ್ತವನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.

ಇದನ್ನೂ ಓದಿ : Petrol-Diesel Price : ಕಳೆದ 42 ದಿನಗಳಲ್ಲಿ ಪೆಟ್ರೋಲ್ ಬೆಲೆ ₹11.52 ದುಬಾರಿ : ಇಂದಿನ ಬೆಲೆ ಎಷ್ಟಿದೆ ಇಲ್ಲಿ ಪರಿಶೀಲಿಸಿ!

ರೈತರ ಖಾತೆಗೆ ಬರಲಿದೆ 2,25,600 ರೂಪಾಯಿ :
ಇದುವರೆಗೆ ದೇಶದ ಸಹಕಾರಿ ಡೈರಿಯೊಂದು ಘೋಷಿಸಿರುವ ಅತಿದೊಡ್ಡ ಬೋನಸ್ ಇದಾಗಿದೆ. ಈ ಬೋನಸ್ ಯೋಜನೆಯಡಿ ಸುಮಾರು 2, 25,600 ರೂ.ಗಳನ್ನು ಪ್ರತಿ ರೈತನ ಖಾತೆಗೆ (Farmer account) ಕಳುಹಿಸಲಾಗುವುದು. ಇದು ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕಾರಿಯಾಗಲಿದೆ. 

ಬನಾಸ್ ಡೈರಿಯ ಆದಾಯ:
2020-21ರ ಆರ್ಥಿಕ ವರ್ಷದಲ್ಲಿ ಬನಸ್ ಡೈರಿಯ ಆದಾಯವು ಶೇಕಡಾ 11 ರಷ್ಟು ಏರಿಕೆ ಕಂಡಿದ್ದು, ಸುಮಾರು 13,000 ಕೋಟಿ ರೂಗಳಷ್ಟಾಗಿದೆ.  ಹಾಲು ಮತ್ತುಹಾಲು ಉತ್ಪನ್ನಗಳು, ಎಣ್ಣೆ, ಜೇನುತುಪ್ಪ (Honey) ಮುಂತಾದವುಗಳ ವ್ಯಾಪಾರವು ಬನಾಸ್ ಡೈರಿಯ ಆದಾಯಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಬನಾಸ್ ಡೈರಿ ತನ್ನ ಒಟ್ಟು ಆದಾಯದ 82.28 ಪ್ರತಿಶತವನ್ನು ಹಾಲು ಉತ್ಪಾದಕರಿಗೆ ನೀಡುತ್ತದೆ.

ಇದನ್ನೂ ಓದಿ : Missed Call ಮತ್ತು WhatsApp Message ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಸುಲಭ ವಿಧಾನ ತಿಳಿಯಿರಿ

ಡೈರಿ ರೈತರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ
ಗಮನಿಸಬೇಕಾದ ಅಂಶವೆಂದರೆ ಬನಸ್ ಡೈರಿಗಿಂತ ದೊಡ್ಡದಾದ ಡೈರಿ ಕೂಡ ತನ್ನ ರೈತರಿಗೆ ಅಷ್ಟೊಂದು ಲಾಭವನ್ನು ನೀಡುವುದಿಲ್ಲ. ಅರ್ಜೆಂಟೀನಾ ತನ್ನ ರೈತರಿಗೆ ಲೀಟರ್‌ಗೆ 22 ರೂ. ಬ್ರೆಜಿಲ್‌ ಲೀಟರ್ 31 ರೂ., ನ್ಯೂಜಿಲೆಂಡ್ ಮತ್ತು ಅಮೆರಿಕ 30 ರೂ. ನೀಡಿದರೆ ಬನಾಸ್ ಡೈರಿ ತನ್ನ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 41.30 ರೂ.ಗಳನ್ನೂ ನೀಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News