Tokyo Olympics 2020: ಖಾತೆ ತೆರೆದ ಭಾರತ, ಮೀರಾಬಾಯಿ ಚಾನುಗೆ ಒಲಿದ ಬೆಳ್ಳಿ

Tokyo Olympics 2020 - ಅಪಾಯಕಾರಿ ಕೊರೊನಾ ವೈರಸ್ ಮಹಾಮಾರಿಯ (Corona Pandemic) ನಡುವೆ ಹಲವು ನಿರ್ಬಂಧನೆಗಳ ನಡುವೆ ಜುಲೈ 23ರಂದು ಟೋಕಿಯೋ ಒಲಿಂಪಿಕ್ಸ್ 2020 ಕ್ರೀಡಾಕೂಟ (Tokyo Olympics 2020) ಆರಂಭಗೊಂಡಿದೆ. ಆದರೆ, ಕ್ರೀಡಾಕೂಟದ ಮೊದಲ ದಿನವಾದ ನಿನ್ನೆ ಭಾರತಕ್ಕೆ ಯಾವುದೇ ಯಶಸ್ಸು ಲಭಿಸಿರಲಿಲ್ಲ. ಆದರೆ ಶನಿವಾರ ಟೋಕಿಯೋ ಒಲಿಂಪಿಕ್ಸ್ ನಲ್ಲಿ (Tokyo Olympics) ಭಾರತ ತನ್ನ ಖಾತೆ ತೆರೆದಿದೆ.

Written by - Nitin Tabib | Last Updated : Jul 24, 2021, 01:12 PM IST
  • ಒಲಿಂಪಿಕ್ಸ್ ಕ್ರೀಡಾಕೂಟ 2020 ರಲ್ಲಿ ಖಾತೆ ತೆರೆದ ಭಾರತ.
  • ಭಾರ ಎತ್ತುವ ಸ್ಪರ್ಧೆಯ 49 ಕೆ.ಜಿ ವರ್ಗದಲ್ಲಿ ಮೀರಾಬಾಯಿ ಚಾನುಗೆ ಒಲಿದ ಬೆಳ್ಳಿ.
  • ಒಲಿಂಪಿಕ್ಸ್ ಕ್ರೀಡಾಕೂಟದ ಈ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಮಹಿಳೆ ಮೀರಾಬಾಯಿ ಚಾನು.
Tokyo Olympics 2020: ಖಾತೆ ತೆರೆದ ಭಾರತ, ಮೀರಾಬಾಯಿ ಚಾನುಗೆ ಒಲಿದ ಬೆಳ್ಳಿ  title=
Tokyo Olympics 2020 (File Photo)

Tokyo Olympics 2020 - ಅಪಾಯಕಾರಿ ಕೊರೊನಾ ವೈರಸ್ ಮಹಾಮಾರಿಯ (Corona Pandemic) ನಡುವೆ ಹಲವು ನಿರ್ಬಂಧನೆಗಳ ನಡುವೆ ಜುಲೈ 23ರಂದು ಟೋಕಿಯೋ ಒಲಿಂಪಿಕ್ಸ್ 2020 ಕ್ರೀಡಾಕೂಟ (Tokyo Olympics 2020) ಆರಂಭಗೊಂಡಿದೆ. ಆದರೆ, ಕ್ರೀಡಾಕೂಟದ ಮೊದಲ ದಿನವಾದ ನಿನ್ನೆ ಭಾರತಕ್ಕೆ ಯಾವುದೇ ಯಶಸ್ಸು ಲಭಿಸಿರಲಿಲ್ಲ. ಆದರೆ ಶನಿವಾರ ಟೋಕಿಯೋ ಒಲಿಂಪಿಕ್ಸ್ ನಲ್ಲಿ (Tokyo Olympics) ಭಾರತ ತನ್ನ ಖಾತೆ ತೆರೆದಿದೆ. ವೇಟ್ ಲಿಫ್ಟರ್ ಮೀರಾಬಾಯಿ ಚಾನು (Weightlifter Mirabai Chanu) ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದರೆ. ಮೀರಾಬಾಯಿ ಚಾನು ಮಹಿಳೆಯರ 49 ಕೆ.ಜಿ ವರ್ಗದಲ್ಲಿ ಬೆಳ್ಳಿ ಪದಕದ ಮೇಲೆ ತಮ್ಮ ಹಕ್ಕು ಮಂಡಿಸಿದ್ದಾರೆ. 

ಒಲಿಂಪಿಕ್ಸ್ (Tokyo Olympics) ಕ್ರೀಡಾಕೂಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ (Weight Lifting Competition) ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮೀರಾ ಪಾತ್ರರಾಗಿದ್ದಾರೆ. ಇದಲ್ಲದ ಭಾರತದ ಸ್ಟಾರ್ ಶೂಟರ್ ಸೌರವ್ ಚೌಧರಿ (Star Shooter Sourav Choudhary) ಅವರು ತಮ್ಮ ಅದ್ಭುತ ಪ್ರದರ್ಶನ ಮೆರೆದು, ಕ್ವಾಲಿಫೈಯಿಂಗ್ ರೌಂಡ್ ನಲ್ಲಿ ಟಾಪ್ ಪೋಸಿಶನ್ ಪಡೆದು ಫೈನಲ್ ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಇದಲ್ಲದೆ ಇಂದು ಭಾರತೀಯ ಪುರುಷರ ಹಾಕಿ ತಂಡ (Indian Hockey Team) ಕೂಡ ನ್ಯೂಜಿಲೆಂಡ್ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಿ ಗೆಲುವು ದಾಖಲಿಸಿದೆ.

ಇದನ್ನೂ ಓದಿ- Tokyo Olympics 2020: ಗೆಲುವಿನ ನಗೆ ಬೀರಿ ಶುಭಾರಂಭ ಮಾಡಿದ ಭಾರತದ ಪುರುಷರ ಹಾಕಿ ತಂಡ

ಭಾರ ಎತ್ತುವ ಸ್ಪರ್ಧೆಯಲ್ಲಿ ಮೀರಾಬಾಯಿ ಸ್ನ್ಯಾಚ್ ನಲ್ಲಿ 87 ಹಾಗೂ ಕ್ಲೀನ್ ಅಂಡ್ ಜರ್ಕ್ ನಲ್ಲಿ 115 ಕಿ.ಗ್ರಾಂ ಭಾರ ಎತ್ತಿ ಈ ಇತಿಹಾಸ ರಚಿಸಿದ್ದಾರೆ. ಚೀನಾದ ಹೋ ಜಿಹುಯಿ ಸ್ನ್ಯಾಚ್ ನಲ್ಲಿ 94 ಮತ್ತು ಕ್ಲೀನ್ ಅಂಡ್ ಜರ್ಕ್ ನಲ್ಲಿ 116 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಕೋರಳಿಗೆರಿಸಿಕೊಂಡಿದ್ದಾರೆ. 

ಇದನ್ನೂ ಓದಿ- Tokyo Olympics 2020: ಅನಿಮೇಟೆಡ್ ಐಸ್ಲ್ಯಾಂಡ್ ಗೇಮ್ಸ್ ಜೊತೆಗೆ ಗೂಗಲ್ ಡೂಡಲ್ ಸಂಭ್ರಮ

ಇದಲ್ಲದೆ ಇಂದು ಭಾರತ ಹಾಗೂ ಕೊರಿಯಾ ತಂಡಗಳ ನಡುವೆ ನಡೆದ ಬಿಲ್ಲುಗಾರಿಕೆ ಸ್ಪರ್ಧೆಯ ಮಿಕ್ಸಡ್ ಟೀಂ ಇವೆಂಟ್ ನ ಕ್ವಾರ್ಟರ್ ಫೈನಲ್ ಪಂದ್ಯ ಕೂಡ ಮುಕ್ತಾಯಗೊಂಡಿದೆ. ಇದರಲ್ಲಿ ಭಾರತದ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಜಾಧವ ಅವರ ಜೋಡಿ ಕೊರಿಯಾ ಜೋಡಿ ವಿರುದ್ಧ 2-6ರಿಂದ ಸೋಲನ್ನು ಅನುಭವಿಸಿದೆ. ಇದರೊಂದಿಗೆ ಇಂದಿನ ದಿನ ಈ ಸ್ಪರ್ಧೆಯಲ್ಲಿ ಭಾರತ ಪದಕ ಗೆಲ್ಲುವ ಅವಕಾಶ ಮುಂದಕ್ಕೆ ಹೋದಂತಾಗಿದೆ.

ಇದನ್ನೂ ಓದಿ-Tokyo Olympic 2020: ವಿಡಿಯೋ ಶೇರ್ ಮಾಡಿ ಭಾರತೀಯ ಕ್ರೀಡಾಪಟುಗಳಿಗೆ ಅನಿಲ್ ಕಪೂರ್ ಶುಭಾಶಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News