"ನನ್ನ ಜೊತೆ ಸೆಲ್ಫಿ ತೆಗೆಸಿಕೊಳ್ಳಲು 100 ರೂಪಾಯಿ ನೀಡಬೇಕು"- ಬಿಜೆಪಿ ಸಚಿವೆ

ಮಧ್ಯಪ್ರದೇಶದ ಬಿಜೆಪಿ ಸಚಿವೆ ಉಷಾ ಠಾಕೂರ್ ಅವರು ಶನಿವಾರ (ಜುಲೈ 17) ತಮ್ಮೊಂದಿಗೆ ಸೆಲ್ಫಿ ಕ್ಲಿಕ್ ಮಾಡಲು ಬಯಸುವವರು 100 ರೂಪಾಯಿ ನೀಡಬೇಕು, ಇದನ್ನು ಪಕ್ಷದ ಕೆಲಸಕ್ಕಾಗಿ ಠೇವಣಿ ಇಡಲಾಗುವುದು ಎಂದು ಹೇಳಿದರು.

Written by - Zee Kannada News Desk | Last Updated : Jul 18, 2021, 08:48 PM IST
  • ಮಧ್ಯಪ್ರದೇಶದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಚಿವ ಉಷಾ ಠಾಕೂರ್ ಅವರು ಶನಿವಾರ (ಜುಲೈ 17) ತಮ್ಮೊಂದಿಗೆ ಸೆಲ್ಫಿ ಕ್ಲಿಕ್ ಮಾಡಲು ಬಯಸುವವರು 100 ರೂಪಾಯಿ ನೀಡಬೇಕು, ಇದನ್ನು ಪಕ್ಷದ ಕೆಲಸಕ್ಕಾಗಿ ಠೇವಣಿ ಇಡಲಾಗುವುದು ಎಂದು ಹೇಳಿದರು.
  • ಸೆಲ್ಪಿ ತೆಗೆದುಕೊಳ್ಳುವ ಪ್ರಕ್ರಿಯೆ ತನ್ನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಿಳಂಬವಾಗುತ್ತದೆ ಎಂದು ಅವರು ಹೇಳಿದ್ದಾರೆ.
"ನನ್ನ ಜೊತೆ ಸೆಲ್ಫಿ ತೆಗೆಸಿಕೊಳ್ಳಲು 100 ರೂಪಾಯಿ ನೀಡಬೇಕು"- ಬಿಜೆಪಿ ಸಚಿವೆ  title=

ನವದೆಹಲಿ: ಮಧ್ಯಪ್ರದೇಶದ ಬಿಜೆಪಿ ಸಚಿವೆ ಉಷಾ ಠಾಕೂರ್ ಅವರು ಶನಿವಾರ (ಜುಲೈ 17) ತಮ್ಮೊಂದಿಗೆ ಸೆಲ್ಫಿ ಕ್ಲಿಕ್ ಮಾಡಲು ಬಯಸುವವರು 100 ರೂಪಾಯಿ ನೀಡಬೇಕು, ಇದನ್ನು ಪಕ್ಷದ ಕೆಲಸಕ್ಕಾಗಿ ಠೇವಣಿ ಇಡಲಾಗುವುದು ಎಂದು ಹೇಳಿದರು.

ಸೆಲ್ಪಿ ತೆಗೆದುಕೊಳ್ಳುವ ಪ್ರಕ್ರಿಯೆ ತನ್ನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಿಳಂಬವಾಗುತ್ತದೆ ಎಂದು ಅವರು ಹೇಳಿದ್ದಾರೆ."ಸೆಲ್ಫಿಗಳನ್ನು ಕ್ಲಿಕ್ ಮಾಡುವುದರಲ್ಲಿ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ,ಮತ್ತು ಆಗಾಗ್ಗೆ ನಾವು ನಮ್ಮ ಕಾರ್ಯಕ್ರಮಗಳಿಗೆ ಗಂಟೆಗಟ್ಟಲೆ ತಡವಾಗುತ್ತೇವೆ.ಪಕ್ಷದ ದೃಷ್ಟಿಕೋನದಿಂದ, ನಾವು ಯಾವುದೇ ವ್ಯಕ್ತಿಯು ಸೆಲ್ಫಿ ಕ್ಲಿಕ್ ಮಾಡಿದರೂ ಬಿಜೆಪಿ ಸ್ಥಳೀಯ ಘಟಕದಲ್ಲಿ ನೂರು ರೂಪಾಯಿ ಠೇವಣಿ ಇಡಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ನಿಧಾನಗತಿಯ ಕೊರೊನಾ ಲಸಿಕೆ ದರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ

ಇದಲ್ಲದೆ, ಅವರು ಹೂಗುಚ್ಛಗಳನ್ನು ಸ್ವೀಕರಿಸುವುದಿಲ್ಲ, ಅದರ ಬದಲಾಗಿದೆ ಪುಸ್ತಕ ಸ್ವೀಕರಿಸಲು ಸಿದ್ಧ ಎಂದು ಅವರು ಹೇಳಿದರು.

'ಹೂವುಗಳೊಂದಿಗೆ ಜನರನ್ನು ಸ್ವಾಗತಿಸುವ ಮಟ್ಟಿಗೆ, ಲಕ್ಷ್ಮಿದೇವಿಯು ಅವರಲ್ಲಿ ವಾಸಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ.ಆದ್ದರಿಂದ ಭಗವಾನ್ ವಿಷ್ಣು ಹೊರತುಪಡಿಸಿ ಬೇರೆ ಯಾರೂ ಹೂವುಗಳನ್ನು ಸ್ವೀಕರಿಸುವುದಿಲ್ಲ.ಆದ್ದರಿಂದ, ನಾನು ಹೂಗಳನ್ನು ಸ್ವೀಕರಿಸುವುದಿಲ್ಲ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೂವಿನ ಹೂಗುಚ್ಛಗಳ ಬದಲು ಪುಸ್ತಕಗಳನ್ನು ಸ್ವೀಕರಿಸಬೇಕು ಎಂದು ಹೇಳಿದ್ದಾರೆ 'ಎಂದು ಸಚಿವರು ಖಂಡ್ವಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ : 'ಮಹಾ'ಸೂತ್ರಕ್ಕೆ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದ ಅಠವಾಳೆಗೆ ಶಿವಸೇನಾ ಹೇಳಿದ್ದೇನು?

ಪ್ರಾಸಂಗಿಕವಾಗಿ, 2015 ರಲ್ಲಿ, ಠಾಕೂರ್ ಅವರ ಕ್ಯಾಬಿನೆಟ್ ಸಹೋದ್ಯೋಗಿ ಕುನ್ವರ್ ವಿಜಯ್ ಷಾ ತಮ್ಮೊಂದಿಗೆ ಸೆಲ್ಪಿ ತೆಗೆದುಕೊಳ್ಳಲು 10 ರೂ.ನೀಡಬೇಕು ಎಂದು ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News