Anil Deshmukh Corruption Case: Maharashtra ಮಾಜಿ ಗೃಹ ಸಚಿವ Anil Deshmukh ವಿರುದ್ಧ ED ಕ್ರಮ, ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ 4.20 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

Anil Deshmukh Corruption Case - ಮಹಾರಾಷ್ಟ್ರ (Maharashtra) ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ (Anil Deshmukh) ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (Enforcement Directorate) ಅವರ 4.20 ಕೋಟಿ ರೂ.  ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

Written by - Nitin Tabib | Last Updated : Jul 16, 2021, 04:38 PM IST
  • ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಇಡಿ ಕ್ರಮ.
  • ಅನಿಲ್ ದೇಶ್ಮುಖ್ ಮತ್ತು ಅವರ ಕುಟುಂಬದ 4.20 ಕೋಟಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿದೆ.
  • ಪಿಎಂಎಲ್‌ಎ ಅಡಿಯಲ್ಲಿ ಪ್ರಾಥಮಿಕ ಲಗತ್ತು ಆದೇಶಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Anil Deshmukh Corruption Case: Maharashtra ಮಾಜಿ ಗೃಹ ಸಚಿವ Anil Deshmukh ವಿರುದ್ಧ ED ಕ್ರಮ, ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ 4.20 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು title=
Anil Deshmukh Corruption Case (File Photo)

ಮುಂಬೈ: Anil Deshmukh Corruption Case - ಮನಿ ಲಾಂಡರಿಂಗ್ (Money Laundring Case) ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ (Former Home Minister Maharashtra Anil Deshmukh) ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಕ್ರಮ ಕೈಗೊಂಡಿದೆ. ಅನಿಲ್ ದೇಶ್ಮುಖ್ ಮತ್ತು ಅವರ ಕುಟುಂಬದ 4.20 ಕೋಟಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿದೆ. ಪಿಎಂಎಲ್‌ಎ (Prevention Of Money Laundring Act) ಅಡಿಯಲ್ಲಿ ಪ್ರಾಥಮಿಕ ಲಗತ್ತು ಆದೇಶಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆಗಾಗಿ ಇಡಿ ವತಿಯಿಂದ ಸಲ್ಲಿಸಲಾಗಿದ್ದ ಮೂರು ಸಮನ್ಸ್ ಗಳ ಹೊರತಾಗಿಯೂ ಕೂಡ ಅನಿಲ್ ದೇಶ್ಮುಖ್ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ.

ಕೇಂದ್ರೀಯ ತನಿಖಾ ಸಂಸ್ಥೆ ದೇಶ್ಮುಖ್ ಅವರ ಪುತ್ರ ಹೃಷಿಕೇಶ್ (Hrushikesh Deshmukh) ಹಾಗೂ ಅವರ ಪತ್ನಿಗೂ ಕೂಡ ಸಮನ್ಸ್ ಜಾರಿಗೊಳಿಸಿತ್ತು. ಆದರೆ, ಅವರೂ ಕೂಡ ತಮ್ಮ ಹೇಳಿಕೆಗಳನ್ನು ದಾಖಲಿಸಲು ನಿರಾಕರಿಸಿದ್ದಾರೆ. ಮಹಾರಾಷ್ಟ್ರ ಪೊಲೀಸರಿಗೆ ಸಂಬಂಧಿಸಿದ 100 ಕೋಟಿ ರೂ.ಗಳ ಹಫ್ತಾ ವಸೂಲಿ (Hafta Vasooli Case) ಪ್ರಕರಣಕ್ಕೆ ಸಂಬಂಧಿಸಿದಂತೆ PMLA ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸಮನ್ಸ್ ಜಾರಿಗೊಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ದೇಶ್ಮುಖ್ ಅವರು ಕಳೆದ ಏಪ್ರಿಲ್ ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇದಕ್ಕೂ ಮೊದಲು ಎನ್‌ಸಿಪಿ ನಾಯಕರಾಗಿರುವ ಅನಿಲ್ ದೇಶ್ಮುಖ್ ತಮ್ಮ (NCP Leader Anil Deshmukh) ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ್ದು ತಾವು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ ಮತ್ತು ಅವರ ವಿರುದ್ಧ ಇಡಿ ಕೈಗೊಂಡ ಕ್ರಮವನ್ನು ಅವರ ವಕೀಲರು ಅನುಚಿತವೆಂದು ಹೇಳಿದ್ದಾರೆ. ಇತ್ತೀಚೆಗಷ್ಟೇ  ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದ ಮಾಜಿ ಸಚಿವರು ಇಡಿ ಕೈಗೊಳ್ಳುವ  ಯಾವುದೇ ದಂಡಾತ್ಮಕದ  ಕ್ರಮದಿಂದ ರಕ್ಷಣೆ ಒದಗಿಸಬೇಕು ಎಂದು ಕೋರಿದ್ದರು.

ಈ ವರ್ಷದ ಆರಂಭದಲ್ಲಿ, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ (Former Mumbai Police Commissioner Param Bir Singh) ಅವರ ದೂರಿನ ಮೇರೆಗೆ ಸಿಬಿಐ (CBI) ಮತ್ತು ಇಡಿ (ED) ದೇಶಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪಗಳ (Corruption Case) ಹಿನ್ನೆಲೆ ಪ್ರಕರಣ ದಾಖಲಿಸಿದ್ದವು. ಪರಂಭೀರ್ ಸಿಂಗ್ ತಮ್ಮ ಆರೋಪಗಳಲ್ಲಿ  ದೇಶ್ಮುಖ್ ಅವರು ಕನಿಷ್ಠ 100 ಕೋಟಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ-ಆಫ್ಘಾನಿಸ್ತಾನದಲ್ಲಿ ಪುಲಿಟ್ಜರ್ ಪ್ರಶಸ್ತಿ ವಿಜೇತ ಭಾರತೀಯ ಪತ್ರಕರ್ತ ಡ್ಯಾನಿಶ್ ಸಿದ್ಧಕಿ ಹತ್ಯೆ

ಈ ಹಿಂದೆ ಜುಲೈ 14 ರಂದು ಹೇಳಿಕೆ ನೀಡಿದ್ದ  ಅನಿಲ್ ದೇಶ್ಮುಖ್ ಅವರ ಪರ ವಕೀಲರು ಮನಿ ಲಾಂಡರಿಂಗ್ (Money Laundering Case) ಪ್ರಕರಣದಲ್ಲಿ ತಮ್ಮ ವಿರುದ್ಧ ಇಡಿ ತನಿಖೆ ಸೂಕ್ತವಲ್ಲ ಎಂದು ತಮ್ಮ ಕ್ಲೈಂಟ್ ಭಾವಿಸಿದ್ದಾರೆ ಮತ್ತು ಇದೇ ಕಾರಣದಿಂದ ಅವರು ತನಿಖೆಯ ಭಾಗವಾಗಲು ನಿರಾಕರಿಸಿದ್ದಾರೆ ಎಂದು ಹೇಳಿದ್ದರು. ಇಡಿ (ED) ತನಿಖೆ, ಒಂದು ತನಿಖೆಗಿಂತ ಹೆಚ್ಚಾಗಿ "ಕಿರುಕುಳ" ದಂತೆ ಕಾಣುತ್ತದೆ ಎಂದು ದೇಶಮುಖ್ ಪರ ವಕೀಲ ಕಮಲೇಶ್ ಘುಮ್ರೆ ಆರೋಪಿಸಿದ್ದರು.

ಇದನ್ನೂ ಓದಿ-ಉಚಿತ ವೃತ್ತಿ ತರಬೇತಿ ಪಡೆಯುವುದಕ್ಕಾಗಿ ಸರ್ಕಾರದ ಈ ಯೋಜನೆಯಡಿ ನೋಂದಾಯಿಸಿಕೊಳ್ಳಿ, ಯುವಕರ ಮುಂದಿದೆ ಸುವರ್ಣಾವಕಾಶ

ಇದಕ್ಕೂ ಮೊದಲು ಅನಿಲ್ ದೇಶ್ಮುಖ್ ಅವರಿಗೆ ಹಲವು ಸಮನ್ಸ್ ಗಳನ್ನು ಜಾರಿಗೊಳಿಸಿದ್ದ ಜಾರಿ ನಿರ್ದೇಶನಾಲಯ ತಮ್ಮ ಹೇಳಿಕೆಗಳನ್ನು ದಾಖಲಿಸಲು ಸೂಚಿಸಿತ್ತು. ಆದರೆ, 'ಕೊವಿಡ್-19'ಗೆ (Covid-19) ತಾವು ಸೂಕ್ಷ್ಮರಾಗಿರುವುದಾಗಿ ಹೇಳಿ ದೇಶ್ಮುಖ್ ವಿಚಾರಣೆಯಿಂದ ಜಾರಿಕೊಂಡಿದರು. ಇದಲ್ಲದೆ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವುದಾಗಿ ಅವರು ಕೇಂದ್ರೀಯ ಏಜೆನ್ಸಿಗೆ ಹೇಳಿದ್ದರು. ಈ ವೇಳೆ ಹೇಳಿಕೆ ನೀಡಿದ್ದ ಅವರ ಪರ ವಕೀಲ ಘುಮರೆ, 'ಈ ತನಿಖೆ ಉಚಿತವಲ್ಲ ಎಂಬುದು ತಮ್ಮ ಕ್ಲೈಂಟ್ ಅಭಿಪ್ರಾಯವಾಗಿದೆ. ಹೀಗಾಗಿ ಅವರು ವಿಚಾರಣೆಗೆ ಹಾಜರಾಗುತ್ತಿಲ್ಲ. ತನಿಖಾ ಸಂಸ್ಥೆಯೇ ಯಾವ ದಾಖಲೆಗಳು ಬೇಕಾಗಿವೆ ಎಂಬುದನ್ನು ಸಂಸ್ಥೆ ತಿಳಿಸಲಿ" ಎಂದಿದ್ದರು.

ಇದನ್ನೂ ಓದಿ-Coronavirus Latest Update: Corona ಮೂರನೇ ಅಲೆ , ಎರಡನೇ ಅಲೆಗಿಂತ ಹೆಚ್ಚು ವ್ಯಾಪಕವಾಗುವ ಸಾಧ್ಯತೆ, AIIMS ನಿರ್ದೇಶಕರ ಗಂಭೀರ ಎಚ್ಚರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News