Prithvi Shaw: ಇಂಟ್ರಾ ಸ್ಕ್ವಾಡ್ ಪಂದ್ಯದಲ್ಲಿ ಪೃಥ್ವಿಯ ಅಬ್ಬರಕ್ಕೆ ಹುಬ್ಬೆರಿಸಿದ ಹಿರಿಯ ಬೌಲರ್‌ಗಳು

ಪೃಥ್ವಿ ಶಾ (Prithvi Shaw) ಅವರು ಭಾರತದ ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ (Intra-Squad Match) ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಆದ್ದರಿಂದ ಅವರು ಏಕದಿನ ಮತ್ತು ಟಿ 20 ಸರಣಿಯಲ್ಲಿ ನಾಯಕ ಶಿಖರ್ ಧವನ್ (Shikhar Dhawan) ಅವರ ಆರಂಭಿಕ ಪಾಲುದಾರರಾಗಿದ್ದಾರೆ ಎಂದು ನಂಬಲಾಗಿದೆ.

Written by - Yashaswini V | Last Updated : Jul 12, 2021, 11:48 AM IST
  • ಭಾರತ ಮತ್ತು ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿ
  • ಪೃಥ್ವಿ ಶಾ ಅವರ ಅದ್ಭುತ ಪ್ರದರ್ಶನ
  • ಪೃಥ್ವಿ ಶಾ ಬ್ಯಾಟಿಂಗ್ ಗೆ ಬೆರಗಾದ ಹಿರಿಯ ಬೌಲರ್‌ಗಳು
Prithvi Shaw: ಇಂಟ್ರಾ ಸ್ಕ್ವಾಡ್ ಪಂದ್ಯದಲ್ಲಿ ಪೃಥ್ವಿಯ ಅಬ್ಬರಕ್ಕೆ ಹುಬ್ಬೆರಿಸಿದ ಹಿರಿಯ ಬೌಲರ್‌ಗಳು title=
Image courtesy: SLC

ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿ ಇನ್ನೂ ಪ್ರಾರಂಭವಾಗಿಲ್ಲ, ಆದರೆ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ (Prithvi Shaw) ಈಗಾಗಲೇ ಆರಂಭಿಕ ಪಂದ್ಯದ ಹಕ್ಕು ಸಲ್ಲಿಸಿದ್ದಾರೆ.

ಪೃಥ್ವಿ ಶಾ ಬ್ಯಾಂಟಿಂಗ್ ಕಂಡು ಉಬ್ಬೆರಿಸಿದ ಭಾರತೀಯ ಬೌಲರ್‌ಗಳು:
ಶ್ರೀಲಂಕಾ ಕ್ರಿಕೆಟ್ (Sri Lanka Cricket) ಯುಟ್ಯೂಬ್‌ನಲ್ಲಿ ಭಾರತದ ಇಂಟ್ರಾ-ಸ್ಕ್ವಾಡ್ ಪಂದ್ಯದ (Intra-Squad Match) ಮುಖ್ಯಾಂಶಗಳನ್ನು ಹಂಚಿಕೊಂಡಿದ್ದು, ಇದರಲ್ಲಿ 21 ವರ್ಷದ ಪೃಥ್ವಿ ಶಾ (Prithvi Shaw), ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಲ್ ಅವರ ಬ್ಯಾಟಿಂಗ್ ಅಬ್ಬರವನ್ನು ಕಾಣಬಹುದು.

ಇದನ್ನೂ ಓದಿ- Stunning Catch: ಹರ್ಲೀನ್ ಡಿಯೋಲ್ ಅದ್ಭುತ ಕ್ಯಾಚ್‌ಗೆ ಪ್ರಧಾನಿ ಮೋದಿ ಸೇರಿ ದಿಗ್ಗಜರ ಮೆಚ್ಚುಗೆ

ಫಿಫ್ಟಿ ಹೊಡೆದರೇ ಪೃಥ್ವಿ ?
ಈ ಪಂದ್ಯದ ಪೂರ್ಣ ಸ್ಕೋರ್ ಬಿಡುಗಡೆಯಾಗದಿದ್ದರೂ, ವೀಡಿಯೊದಲ್ಲಿ, ಪೃಥ್ವಿ ಶಾ (Prithvi Shaw) ಬ್ಯಾಟ್ ಎತ್ತುವ ಮೂಲಕ ಆಚರಿಸಿದರು ಮತ್ತು ಸ್ಟ್ರೈಕರ್ ಅಲ್ಲದ ತುದಿಯಲ್ಲಿ ನಿಂತಿದ್ದ ಅವರ ಸಹ ಬ್ಯಾಟ್ಸ್‌ಮನ್ ಅವರನ್ನು ಅಭಿನಂದಿಸಿದರು. ವಿಡಿಯೋ ನೋಡಿದಾಗ ಪೃಥ್ವಿ ಅರ್ಧಶತಕ ಬಾರಿಸಿದ್ದಾರೆ ಎಂದು ತೋರುತ್ತದೆ.

ಇದನ್ನೂ ಓದಿ- Wimbledon 2021:ನೊವಾಕ್ ಜೊಕೊವಿಕ್ ಗೆ ಆರನೇ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಕೀರಿಟ

ಪೃಥ್ವಿ ಶಾ ಓಪನಿಂಗ್ ಆಗಿ ಪಂದ್ಯ ಆರಂಭಿಸಬಹುದೇ?
ಸೀಮಿತ ಓವರ್‌ಗಳ ಸರಣಿಯಲ್ಲಿ ಪೃಥ್ವಿ ಶಾ ನಾಯಕ ಶಿಖರ್ ಧವನ್ (Shikhar Dhawan) ಅವರ ಆರಂಭಿಕ ಪಾಲುದಾರರಾಗಲಿದ್ದಾರೆ ಎಂದು ನಂಬಲಾಗಿದೆ. ಏಕೆಂದರೆ ಅವರು ತಮ್ಮ ಹಿಂದಿನ ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ದೆಹಲಿ ಕ್ಯಾಪಿಟಲ್ಸ್ (Delhi Capitals) ತಂಡದಲ್ಲಿ ಧವನ್ ಅವರೊಂದಿಗೆ ಇನ್ನಿಂಗ್ಸ್ ಅನ್ನು ಪ್ರಾರಂಭಿಸುತ್ತಾರೆ.

 
 
 
 

 
 
 
 
 
 
 
 
 
 
 

A post shared by PRITHVI SHAW (@prithvishaw)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News