Solar Storm Approaching Earth - ಮುಂದಿನ ಎರಡು ದಿನಗಳು ಭೂಮಿಗೆ ಪಾಲಿಗೆ ತುಂಬಾ ಮಹತ್ವದ್ದಾಗಿವೆ. ಇದಕ್ಕೆ ಕಾರಣ ಸೌರ ಬಿರುಗಾಳಿ. ಸೂರ್ಯನಿಂದ ಬರುತ್ತಿರುವ ಈ ಚಂಡಮಾರುತವು ಗಂಟೆಗೆ ಸುಮಾರು 1.6 ಲಕ್ಷ ವೇಗದಲ್ಲಿ ಭೂಮಿಯ ಕಡೆಗೆ ಚಲಿಸುತ್ತಿದೆ. ಇದು ಇಂದು ಅಥವಾ ನಾಳೆಯಿಂದ ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಸ್ಪೇಸ್ವೆದರ್ ವೆದರ್.ಕಾಮ್ ಉಲ್ಲೇಖಿಸಿದ ವರದಿಯ ಪ್ರಕಾರ, ಭೂಮಿಯ ಜೊತೆಗಿನ ಈ ಘರ್ಷಣೆಯಿಂದ ಸುಂದರವಾದ ಬೆಳಕು ಹೊರಹೊಮ್ಮಲಿದೆ . ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸಿಸುವ ಜನರು ರಾತ್ರಿಯ ಸಮಯದಲ್ಲಿ ಈ ಬೆಳಕನ್ನು ನೋಡಲು ಸಾಧ್ಯವಾಗಲಿದೆ. ಈ ಸೌರ ಚಂಡಮಾರುತ (Solar Storm) ಸಂಭವಿಸಿದಾಗ ಭೂಮಿಯ ಮೇಲಿನ ಜಿಪಿಎಸ್ (GPS Network), ಮೊಬೈಲ್ ಫೋನ್ (Mobile Phone Network) ಮತ್ತು ಉಪಗ್ರಹ ಟಿವಿಗಳು (Satellite TV Network) ಪ್ರಭಾವಕ್ಕೆ ಒಳಗಾಗಲಿವೆ ಮತ್ತು ಇತರೆ ರೇಡಿಯೋ ಫ್ರಿಕ್ವೆನ್ಸ ಸಂಚಾಲಿತ ಸಾಧನಗಳೂ ಕೂಡ ಇದರ ಪ್ರಭಾವಕ್ಕೆ ಒಳಗಾಗಲಿವೆ.
ಏನಿದು ಸೌರ ಬಿರುಗಾಳಿ?
ಭೂಮಿಯ ಕಾಂತೀಯ ಮೇಲ್ಮೈ ನಮ್ಮ ಕಾಂತಕ್ಷೇತ್ರದಿಂದ ರಚಿತವಾಗಿದೆ ಮತ್ತು ಇದು ಸೂರ್ಯನಿಂದ ಹೊರಹೊಮ್ಮುವ ಅಪಾಯಕಾರಿ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ. ಹೆಚ್ಚಿನ ವೇಗದ ಕಿರಣಗಳು ಭೂಮಿಯ ಕಡೆಗೆ ಬಂದಾಗಲೆಲ್ಲಾ ಅದು ಕಾಂತೀಯ ಮೇಲ್ಮೈಗೆ ಡಿಕ್ಕಿ ಹೊಡೆಯುತ್ತವೆ. ಈ ಸೌರ ಕಾಂತಕ್ಷೇತ್ರವು ದಕ್ಷಿಣದಲ್ಲಿದ್ದರೆ, ಅದು ಭೂಮಿಯ ಎದುರು ಇರುವ ಕಾಂತಕ್ಷೇತ್ರವನ್ನು ಸೇರುತ್ತೆ. ನಂತರ ಭೂಮಿಯ ಕಾಂತಕ್ಷೇತ್ರವು ಈರುಳ್ಳಿ ಸಿಪ್ಪೆಗಳಂತೆ ತೆರೆದುಕೊಳ್ಳುತ್ತದೆ ಮತ್ತು ಸೌರ ಮಾರುತದ ಕಣಗಳು ಧ್ರುವಗಳಿಗೆ ಚಲಿಸುತ್ತವೆ. ಈ ಕಾರಣದಿಂದಾಗಿ, ಭೂಮಿಯ ಮೇಲ್ಮೈಯಲ್ಲಿ ಕಾಂತೀಯ ಚಂಡಮಾರುತವು ಸಂಭವಿಸುತ್ತದೆ ಮತ್ತು ಭೂಮಿಯ ಕಾಂತಕ್ಷೇತ್ರದಲ್ಲಿ ತೀಕ್ಷ್ಣವಾದ ಕುಸಿತ ಕಂಡುಬರುತ್ತದೆ. ಇದು ಸುಮಾರು 6 ರಿಂದ 12 ಗಂಟೆಗಳ ಕಾಲ ಹಾಗೇ ಉಳಿಯುತ್ತದೆ. ಕೆಲ ದಿನಗಳ ನಂತರ, ಈ ಆಯಸ್ಕಾಂತೀಯ ಕ್ಷೇತ್ರವು ತನ್ನದೇ ಆದ ರೀತಿಯಲ್ಲಿ ಚೇತರಿಸಿಕೊಳ್ಳಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ-Male Pregnancy: ಇನ್ಮುಂದೆ ಪುರುಷರೂ ಕೂಡ ಗರ್ಭಧರಿಸಬಹುದಂತೆ, ತಲೆಕೆಟ್ಟ ಚೀನಾ ವಿಜ್ಞಾನಿಗಳಿಂದ ವಿಲಕ್ಷಣ ಆವಿಷ್ಕಾರ
ಈ ರೀತಿ ಪ್ರಭಾವ ಬೀರುತ್ತದೆ (Effect Of Solar Storm)
ಇಂದು ಎಲ್ಲ ಸಂಗತಿಗಳು ತಂತ್ರಜ್ಞಾನವನ್ನು ಆಧರಿಸಿವೆ. ಹವಾಮಾನ ಕೆಟ್ಟದಾಗಿದ್ದಾಗ ಯಾವುದೇ ತಂತ್ರಜ್ಞಾನವು ಸೂಕ್ತವಾಗಿ ಕಾರ್ಯನಿರ್ವಹಿಸುವುದಿಲ್ಲ. ಸೌರ ಚಂಡಮಾರುತದ ಸಮಯದಲ್ಲಿ, ಬಲವಾದ ವಿದ್ಯುತ್ ಪ್ರವಾಹವು ಭೂಮಿಯ ಮೇಲ್ಮೈಗೆ ಹರಿಯುತ್ತದೆ. ಇದರಿಂದಾಗಿ ಹಲವು ಬಾರಿ ಪವರ್ ಗ್ರಿಡ್ ವಿಫಲಗೊಳ್ಳುತ್ತದೆ. ಕೆಲವು ಸ್ಥಳಗಳಲ್ಲಿ, ತೈಲ ಮತ್ತು ಅನಿಲ ಪೈಪ್ಲೈನ್ಗಳ ಮೇಲೂ ಅವುಗಳ ಪರಿಣಾಮ ಉಂಟಾಗುತ್ತದೆ. ಹೆಚ್ಚಿನ ಆವರ್ತನ ರೇಡಿಯೊ ಸಂವಹನದ ಮೇಲೆ ಅದರ ಪರಿಣಾಮದಿಂದಾಗಿ, ಜಿಪಿಎಸ್ ಇತ್ಯಾದಿಗಳು ಸಹ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಸೌರ ಚಂಡಮಾರುತವು ಎಷ್ಟು ಕಾಲ ಉಳಿಯುತ್ತದೆ ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ. ಇದು ಕೆಲವು ನಿಮಿಷಗಳಿಂದ ಕೆಲ ಗಂಟೆಗಳವರೆಗೆ ಇರುತ್ತದೆ. ಆದರೆ ಭೂಮಿಯ ಕಾಂತೀಯ ಮೇಲ್ಮೈ ಮತ್ತು ವಾತಾವರಣದಲ್ಲಿ ಇದರ ಪರಿಣಾಮವು ಹಲವು ದಿನಗಳು ಅಥವಾ ವಾರಗಳವರೆಗೆ ಇರುತ್ತದೆ.
ಇದರ ಹಿಂದಿನ ವಿಜ್ಞಾನ ಯಾವುದು?
ಸೌರ ಬಿರುಗಾಳಿಗಳು ಭೂಮಿಯ ಕಾಂತಕ್ಷೇತ್ರ ಮತ್ತು ಅಲೆಗಳು ಅಥವಾ ಮೋಡದ ಕಾಂತಕ್ಷೇತ್ರದ ನಡುವಿನ ಘರ್ಷಣೆಯಿಂದ ಉಂಟಾಗುತ್ತವೆ. ಬ್ರಹ್ಮಾಂಡದ (Universe) ಆರಂಭದಲ್ಲಿ, ಸೂರ್ಯನ ಮೇಲೆ ಬಿರುಗಾಳಿಗಳು ಇದ್ದವು. ಜೀವನದ ಉತ್ಪತ್ತಿಗೂ ಕೂಡ ಇವು ಕಾರಣವಾಗಿವೆ ಎಂದು ಹೊಸ ಸಂಶೋಧನೆಗಳು ಸೂಚಿಸುತ್ತವೆ. ಇಂದು ನಾವು ನೋಡುತ್ತಿರುವ ಸೂರ್ಯನ ಪ್ರಕಾಶದ ಮುಕ್ಕಾಲು ಭಾಗ ಮಾತ್ರ ಸುಮಾರು 4 ಶತಕೋಟಿ ವರ್ಷಗಳ ಹಿಂದೆ ಕಾಣಿಸುತ್ತಿತ್ತು. ಆದರೆ ಅದರ ಮೇಲ್ಮೈಯಲ್ಲಿ ಘರ್ಷಣೆಯಿಂದ ಉತ್ಪತ್ತಿಯಾಗುವ ಸೌರ್ಯ ಪದಾರ್ಥ ಬಾಹ್ಯಾಕಾಶದಲ್ಲಿ ಕಿರಣಗಳನ್ನು ಉಂಟುಮಾಡಿವೆ. ಈ ಶಕ್ತಿಯುತ ಸೌರ ಸ್ಫೋಟಗಳು ಭೂಮಿಯನ್ನು ಬಿಸಿಮಾಡುವ ಶಕ್ತಿಯನ್ನು ನೀಡಿತು. ನಾಸಾ ತಂಡವು ನಡೆಸಿದ ಸಂಶೋಧನೆಯ ಪ್ರಕಾರ, ಈ ಶಕ್ತಿಯು ಸರಳ ಅಣುಗಳನ್ನು ಆರ್ಎನ್ಎ ಮತ್ತು ಡಿಎನ್ಎಯಂತಹ ಸಂಕೀರ್ಣಅಣುಗಳಳನ್ನಾಗಿ ಪರಿವರ್ತಿಸಲು ಕಾರಣವಾಯಿತು, ಮತ್ತು ಇವು ಜೀವ ಸೃಷ್ಟಿಗೆ ತುಂಬಾ ಅವಶ್ಯಕವಾಗಿತ್ತು. ಈ ಸಂಶೋಧನೆ ನೇಚರ್ ಜಿಯೋ ಸೈನ್ಸ್ ಮ್ಯಾಗಜಿನ್ ನಲ್ಲಿ 23 ಮೇ 2016 ರಂದು ಪ್ರಕಟಗೊಂಡಿತ್ತು.
ಇದನ್ನೂ ಓದಿ-BIG Discovery: ಬಾಹ್ಯಾಕಾಶದಲ್ಲಿ ದೊರೆತ ಭೂಮಿಯ ಪರ್ಯಾಯ ಆಯ್ಕೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ