Group Health Insurance: ಶೇ.30 ರಷ್ಟು ದುಬಾರಿಯಾದ ಗ್ರೂಪ್ ಹೆಲ್ತ್ ಇನ್ಸುರೆನ್ಸ್ ಪಾಲಸಿ, ಕಂಪನಿಗಳು ಹೇಳಿದ್ದೇನು?

Group Health Insurance: ಬಹುತೇಕ ಆರೋಗ್ಯವಿಮಾ ಕಂಪನಿಗೆಳು ತಮ್ಮ ಗ್ರೂಪ್ ಹೆಲ್ತ್ ಇನ್ಸುರೆನ್ಸ್ ಕಂಪನಿಗಳು  ತಮ್ಮ ಆರೋಗ್ಯ ವಿಮೆಯ ಪ್ರಿಮಿಯಂ ಮೊತ್ತದಲ್ಲಿ ಶೇ.30 ರಷ್ಟು ಏರಿಕೆ ಮಾಡಿವೆ. 

Written by - Nitin Tabib | Last Updated : Jul 8, 2021, 08:26 PM IST
  • ಗುಂಪು ಆರೋಗ್ಯ ವಿಮಾ ಪಾಲಸಿಹೊಂದಿರುವವರಿಗೆ ಕಹಿ ಸುದ್ದಿ.
  • ತನ್ನ ಪ್ರಿಮಿಯಂ ಮೊತ್ತದಲ್ಲಿ ಶೇ.25-ಶೇ.30ರಷ್ಟು ಏರಿಕೆ ಮಾಡಿದ ಆರೋಗ್ಯ ವಿಮಾ ಕಂಪನಿಗಳು.
  • ಅಂದರೆ, ಕಂಪನಿ ವತಿಯಿಂದ ನಿಮಗೆ ನೀಡಲಾಗಿರುವ ಪಾಲಸಿ ಪ್ರಿಮಿಯಂ ಮೊತ್ತ ಏರಿಕೆಯಾಗಲಿದೆ.
Group Health Insurance: ಶೇ.30 ರಷ್ಟು ದುಬಾರಿಯಾದ ಗ್ರೂಪ್ ಹೆಲ್ತ್ ಇನ್ಸುರೆನ್ಸ್ ಪಾಲಸಿ, ಕಂಪನಿಗಳು ಹೇಳಿದ್ದೇನು? title=
Group Health Insurance (File Photo)

Group Health Insurance: ಒಂದು ವೇಳೆ ನೀವೂ ಕೂಡ ನಿಮ್ಮ ಉದ್ಯೋಗದಾತರು ನೀಡುವ ಗುಂಪು ಆರೋಗ್ಯ ವಿಮಾ ರಕ್ಷಣೆಯ ಪಾಲಸಿ ತೆಗೆದುಕೊಂಡಿದ್ದರೆ, ಈ ಸುದ್ದಿ ತಪ್ಪದೆ ಓದಿ. ಏಕೆಂದರೆ, ಇನ್ಮುಂದೆ ನೀವು ಹೆಚ್ಚಿನ ಪ್ರಿಮಿಯಂ ಪಾವತಿಸಬೇಕಾಗಲಿದೆ. ಬಹುತೇಕ ಆರೋಗ್ಯ ವಿಮಾ ಪಾಲಸಿ (Health Insurance) ಕಂಪನಿಗಳು ತಮ್ಮ ಪ್ರಿಮಿಯಂ ಮೊತ್ತವನ್ನು ಶೇ.25 ರಿಂದ ಶೇ.30ಕ್ಕೆ ಏರಿಕೆ ಮಾಡಿವೆ. ಕೊವಿಡ್ ಕಾರಣ ಹೆಚ್ಚಾಗುತ್ತಿರುವ ಕ್ಲೇಮ್ ರೇಟ್ ಹಾಗೂ ಗುಂಪು ವಿಮಾ ಪಾಲಸಿ ವ್ಯವಹಾರದಲ್ಲಿ ನಷ್ಟದ ಅನುಪಾತ ನಿರಂತರ ಹೆಚ್ಚಾಗುತ್ತಿರುವ ಕಾರಣ ಗುಂಪು ಆರೋಗ್ಯ ವಿಮಾ ಪಾಲಸಿಯ ಪ್ರಿಮಿಯಂ ಮೊತ್ತದಲ್ಲಿ ಏರಿಕೆ ಮಾಡಲಾಗಿದೆ ಎಂದು ಕಂಪನಿಗಳು ಹೇಳಿವೆ. ಇದರರ್ಥ ಉದ್ಯೋಗದಾತರವತಿಯಿಂದ ನಿಮಗೆ ನೀಡಲಾಗಿರುವ ಪಾಲಸಿಗೆ ನೀವು ಹೆಚ್ಚಿನ ಪ್ರಿಮಿಯಂ ಪಾವತಿಸಬೇಕಾಗಲಿದೆ ಎಂದರ್ಥ.

ವರದಿಗಳ ಪ್ರಕಾರ ಹೆಚ್ಚುವರಿ ವಿಮಾ ಕಂಪನಿಗಳು ಗ್ರೂಪ್ ಇನ್ಸೂರೆನ್ಸ್ ಕವರ್ ಪಾಲಸಿಗಳ ಪ್ರಿಮಿಯಂ ಮೊತ್ತದಲ್ಲಿ ಶೇ.30ರಷ್ಟು ಹೆಚ್ಚಳ ಮಾಡಿವೆ. ಲಾಸ್ ರೆಶ್ಯೋದಲ್ಲಿ (Insurance Policy Loss Ratio) ಹೆಚ್ಚಳ ಹಾಗೂ ಕೊವಿಡ್ ಕಾಲದಲ್ಲಿ ಕ್ಲೇಮ್ ರೇಟ್ (Health Insurance Claim) ನಲ್ಲಿ ಹೆಚ್ಚಳದ ಕಾರಣ ಈ ಪ್ರಿಮಿಯಂ ದರ ಏರಿಕೆ ಮಾಡಲಾಗಿದೆ ಎಂದು ಕಂಪನಿಗಳು ಹೇಳಿವೆ. ವಾಸ್ತವದಲ್ಲಿ ಗ್ರೂಪ್ ಇನ್ಸುರನ್ಸ್ ಪಾಲಸಿಗಳಲ್ಲಿ ಪ್ರಿಮಿಯಂ ಮೊತ್ತವನ್ನು ಹೆಚ್ಚಳ ಮಾಡಲು ವಿಮಾ ಕಂಪನಿಗಳಿಗೆ IRDAI ಅನುಮತಿ ಬೇಕಾಗುವುದಿಲ್ಲ. ಆದರೆ, ವೈಯಕ್ತಿಕ ಆರೋಗ್ಯ ಪಾಲಸಿ ಪ್ರಿಮಿಯಂ ಹೆಚ್ಚಳಕ್ಕೆ ಕಂಪನಿಗಳು ಕಡ್ಡಾಯವಾಗಿ IRDAI ಅನುಮತಿ ಪಡೆಯಲೇಬೇಕು. 

ಕೊರೊನಾ ಮಹಾಮಾರಿಯ (Corona Pandemic) ಕಾರಣ ಆರೋಗ್ಯ ವಿಮೆಯ ಕುರಿತು ಕಂಪನಿಗಳು ಸಾಕಷ್ಟು ಸಕ್ರೀಯವಾಗಿವೆ. ಸಾಮಾನ್ಯವಾಗಿ ದೊಡ್ಡ ದೊಡ್ಡ ಕಂಪನಿಗಳು ತಮ್ಮ ನೌಕರರಿಗೆ ಗುಂಪು ಆರೋಗ್ಯ ವಿಮೆ ಪಾಲಸಿಯ ಲಾಭ ನೀಡುತ್ತವೆ. ಆದರೆ, ಕೊವಿಡ್ ಕಾಲದಲ್ಲಿ ದೊಡ್ಡ ದೊಡ್ಡ ಕಂಪನಿಗಳು ತಮ್ಮ ನೌಕರರ ಕವರೇಜ್ ಹೆಚ್ಚಿಸುತ್ತಿವೆ. ಇನ್ನೊಂದೆಡೆ ಸಣ್ಣ ಸಣ್ಣ ಕಂಪನಿಗಳೂ ಕೂಡ ತಮ್ಮ ನೌಕರರನ್ನು ಸುರಕ್ಷತೆಗಾಗಿ ಗುಂಪು ಆರೋಗ್ಯ ವಿಮೆ ಪಾಲಸಿಯನ್ನು ತೆಗೆದುಕೊಳ್ಳುತ್ತಿವೆ.

ಇದನ್ನೂ ಓದಿ- ಕೊರೊನಾ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ, 8 ರಾಜ್ಯಗಳಿಗೆ ಅಲರ್ಟ್ ಜಾರಿಗೊಳಿಸಿದ ಕೇಂದ್ರ

ಟರ್ಮ್ ಇನ್ಸುರೆನ್ಸ್ ಕೂಡ ದುಬಾರಿಯಾಗಿದೆ
ಇತ್ತೀಚೆಗಷ್ಟೇ ಇನ್ಸೂರೆನ್ಸ್ ಅಗ್ರಿಗೆಟರ್ ಕಂಪನಿಯಾಗಿರುವ ಪಾಲಸಿ ಎಕ್ಸ್ ನೀಡಿರುವ ವರದಿಯೊಂದರ ಪ್ರಕಾರ, ಕೊರೊನಾ ವೈರಸ್ ನ ಎರಡನೇ ಅಲೆಯ ನಡುವೆ ಅಂದರೆ ಏಪ್ರಿಲ್ ನಿಂದ ಜೂನ್ ಜೂನ್ ತಿಂಗಳಿನಲ್ಲಿ ಆರೋಗ್ಯ ವಿಮಾ ಕಂಪನಿಗಳು ಟರ್ಮ್ ಇನ್ಸೂರೆನ್ಸ್ ಹಾಗೂ ಹೆಲ್ತ್ ಇನ್ಸುರನ್ಸ್ ಪಾಲಸಿಗಳ ಪ್ರಿಮಿಯಂ (Health Insurance Premium) ಅನ್ನು ಕೂಡ ಹೆಚ್ಚಿಸಿವೆ ಎಂದಿದೆ. ವರದಿಯ ಪ್ರಕಾರ, ಹೆಲ್ತ್ ಇನ್ಸೂರೆನ್ಸ್ ಪ್ರಿಮಿಯಂನಲ್ಲಿ ಶೇ. 5ರಷ್ಟು ಏರಿಕೆಯಾಗಿದ್ದರೆ. ಟರ್ಮ್ ಇನ್ಸುರೆನ್ಸ್ ಪ್ರಿಮಿಯಂ (Term Insurance Premium) ನಲ್ಲಿ ಶೇ.8 ರಷ್ಟು ಏರಿಕೆಯಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಇನ್ಸೂರೆನ್ಸ್ ಕಂಪನಿಗಳು ಪ್ರಿಮಿಯಂ ಮೊತ್ತದಲ್ಲಿ ಏರಿಕೆಯನ್ನು ಮಾಡಿರಲಿಲ್ಲ. ಕೊವಿಡ್-19 ಕಾಲದಲ್ಲಿ ಏರಿಕೆಯಾಗುತ್ತಿರುವ ಕ್ಲೇಮ್ ರೇಟ್ ಕಾರಣ ಕಂಪನಿಗಳಿಗೆ ಪ್ರಿಮಿಯಂ ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. ಇದಲ್ಲದೆ ಜೈವಿಕ ಕಾಯಿಲೆಗಳು, ಮೆಂಟಲ್ ಡಿಸಾರ್ಡರ್ ಗಳಂತಹ ಹಲವು ಕಾಯಿಲೆಗಳು ಆರೋಗ್ಯ ವಿಮೆಯಲ್ಲಿ ಶಾಮೀಲಾದ ಬಳಿಕ ಕಂಪನಿಗಳಿಗೆ ಪ್ರಿಮಿಯಂ ಮೊತ್ತ ಹೆಚ್ಚಿಸುವ ಅನಿವಾರ್ಯತೆ ಬಂದಿದೆ.

ಇದನ್ನೂ ಓದಿ- Coronaಗೆ ಬಲಿಯಾದ China Corona Vaccine ಟ್ರಯಲ್ ನ ಪ್ರಮುಖ ವಿಜ್ಞಾನಿ!

ನಿಯಮಗಳನ್ನು ಕಠಿಣಗೊಳಿಸುತ್ತಿವೆ ಕಂಪನಿಗಳು
ಕೊರೊನಾ ಎರಡನೆಯ ಅಲೆಯ ಕಾಲದಲ್ಲಿ ಕಂಪನಿಗಳ ಕ್ಲೇಮ್ ರೇಟ್ (Health Insurance Claim) ನಲ್ಲಿ ವ್ಯಾಪಕ ಏರಿಕೆ ಕಂಡು ಬಂದಿದೆ. ಹೀಗಾಗಿ ಕಂಪನಿಗಳು ರಿಸ್ಕ್ ಮ್ಯಾನೇಜ್ಮೆಂಟ್ ನಿಮ್ಮಗಳನ್ನು ಮತ್ತಷ್ಟು ಕಠಿಣಗೊಳಿಸುತ್ತಿವೆ. ಎಲ್ಲಾ ಜೀವವಿಮಾ ಪಾಲಸಿ ಜಾರಿಮಾಡುವ ಕಂಪನಿಗಳು ತನ್ನ ಅಂಡರ್ಲೈನಿಂಗ್ ನಿಯಮಗಳನ್ನು ತುಂಬಾ ಕಠಿಣಗೊಳಿಸಿವೆ. ಜೀವ ವಿಮಾ ಪಾಲಸಿ ಕಂಪನಿಗಳ ನೂತನ ನಿಯಮಗಳ ಅನುಸಾರ, ಹೋಮ್ ಐಸೊಲೆಶನ್ ನಿಂದ ಕೂಡ ಒಂದು ವೇಳೆ ಯಾವುದೇ ವ್ಯಕ್ತಿ ಕೊವಿಡ್ ನಿಂದ ಚೇತರಿಸಿಕೊಂಡಿದ್ದರೆ, ಆತ ಮುಂದಿನ 3 ತಿಂಗಳವರೆಗೆ ಯಾವುದೇ ಟರ್ಮ್ ಇನ್ಸುರನ್ಸ್ ಪಾಲಸಿ ಖರೀದಿಸುವ ಹಾಗಿಲ್ಲ. ಇದಲ್ಲದೆ, ಇದೀಗ ಕಂಪನಿಗಳು ಟೆಲಿಮೆಡಿಕಲ್ ಜಾಗದಲ್ಲಿ ಟರ್ಮ್ ಇನ್ಸೂರೆನ್ಸ್ ಗಾಗಿ ವಿಸ್ತೃತ ವೈದ್ಯಕೀಯ ತಪಾಸಣೆ ನಡೆಸುವುದರ ಮೇಲೆ ಹೆಚ್ಚಿನ ಒತ್ತು ನೀಡುತ್ತಿವೆ.

ಇದನ್ನೂ ಓದಿ-ನಿಮ್ಮ PF ಹೂಡಿಕೆಯ ಮೇಲೆ ನಿಮ್ಮ ತಂದೆ-ತಾಯಿಗೂ ಸಿಗುತ್ತದೆ ಪೆನ್ಷನ್, EPFO ಈ ನಿಯಮ ನಿಮಗೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News