ಚರಕದಿಂದ ಶ್ರಮ ಸಂಸ್ಕೃತಿಗೆ ಹೊಸ ವ್ಯಾಖ್ಯಾನ

ಕಳೆದ ಎರಡು ತಿಂಗಳಿನಿಂದ ಲಾಕ್ಡೌನ್ ನ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಚರಕ ಸಂಸ್ಥೆಯೂ ( Charaka Shramajeevi Ashram ) ಇನ್ನಿತರೆ ಗ್ರಾಮೀಣ ಸಂಸ್ಥೆಗಳ ಹಾಗೆ ಕಠಿಣ ಸವಾಲನ್ನು ಎದುರಿಸಿತು.

Written by - Zee Kannada News Desk | Last Updated : Jul 2, 2021, 09:33 PM IST
  • ಕಳೆದ ಎರಡು ತಿಂಗಳಿನಿಂದ ಲಾಕ್ಡೌನ್ ನ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಚರಕ ಸಂಸ್ಥೆಯೂ (Charaka Shramajeevi Ashram ) ಇನ್ನಿತರೆ ಗ್ರಾಮೀಣ ಸಂಸ್ಥೆಗಳ ಹಾಗೆ ಕಠಿಣ ಸವಾಲನ್ನು ಎದುರಿಸಿತು.
  • ಒಂದೆಡೆ ತನ್ನ ಅಂಗಸಂಸ್ಥೆಯಾದ ದೇಸಿ Desi Trust ಅಂಗಡಿಗಳಲ್ಲಿ ವ್ಯಾಪಾರ ನಿಂತಿತು, ಮತ್ತೊಂದೆಡೆ ಸ್ಥಳೀಯ ಗ್ರಾಮೀಣ ಮಹಿಳೆಯರಿಗೂ ಸಹ ಜೀವನೋಪಾಯದ ಸಂಕಷ್ಟ, ಉತ್ಪಾದನೆಯನ್ನು ಮಾಡಿದರೆ ಅದು ಮಾರಾಟವಾಗುವ ಯಾವ ಆಶಾಕಿರಣವು ಕರೋನಾ ಅಲೆಗಳಿಂದ ಸ್ಪಷ್ಟವಾಗುತ್ತಿರಲಿಲ್ಲ.
ಚರಕದಿಂದ ಶ್ರಮ ಸಂಸ್ಕೃತಿಗೆ ಹೊಸ ವ್ಯಾಖ್ಯಾನ title=
Photo Courtesy: Facebook

ಬೆಂಗಳೂರು: ಕಳೆದ ಎರಡು ತಿಂಗಳಿನಿಂದ ಲಾಕ್ಡೌನ್ ನ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಚರಕ ಸಂಸ್ಥೆಯೂ (Charaka Shramajeevi Ashram) ಇನ್ನಿತರೆ ಗ್ರಾಮೀಣ ಸಂಸ್ಥೆಗಳ ಹಾಗೆ ಕಠಿಣ ಸವಾಲನ್ನು ಎದುರಿಸಿತು.

ಒಂದೆಡೆ ತನ್ನ ಅಂಗ ಸಂಸ್ಥೆಯಾದ ದೇಸಿ Desi Trust ಅಂಗಡಿಗಳಲ್ಲಿ ವ್ಯಾಪಾರ ನಿಂತಿತು, ಮತ್ತೊಂದೆಡೆ ಸ್ಥಳೀಯ ಗ್ರಾಮೀಣ ಮಹಿಳೆಯರಿಗೂ ಸಹ ಜೀವನೋಪಾಯದ ಸಂಕಷ್ಟ, ಉತ್ಪಾದನೆಯನ್ನು ಮಾಡಿದರೆ ಅದು ಮಾರಾಟವಾಗುವ ಯಾವ ಆಶಾಕಿರಣವು ಕರೋನಾ ಅಲೆಗಳಿಂದ ಸ್ಪಷ್ಟವಾಗುತ್ತಿರಲಿಲ್ಲ.

ಇದರ ನಡುವೆಯೇ, ಚರಕ‌ ಸಂಸ್ಥೆ ಕೆಲಸ ಅತ್ಯಂತ ಅಗತ್ಯವಿದ್ದ ಕೆಲವು ಸದಸ್ಯರಿಗೆ ನರೇಗಾದ ಅಡಿಯಲ್ಲಿ ಚರಕದ ಆವರಣದ ಮಗ್ಗುಲಲ್ಲಿನ ವಿರೂಪಾಕ್ಷ ಕೆರೆಯ ಅಭಿವೃದ್ಧಿ ‌ಕೆಲಸದಲ್ಲಿ ತೊಡಗಿಸಿತು. ಇನ್ನು ಕೆಲವರು ಇದ್ದ ಕೈಮಗ್ಗದ ಬಟ್ಟೆಗೆ ಪ್ರಿಂಟಿಂಗ್, ಕಸೂತಿಯಲ್ಲಿ ಹೊಸ ವಿನ್ಯಾಸ,ಇತರೆ ಹೊಸ ಪದಾರ್ಥಗಳನ್ನು ಮಾಡುವ ಮೂಲಕ ಕೌಶಲ್ಯಾಭಿವೃದ್ಧಿ, ಮೌಲ್ಯಾಭಿವೃದ್ಧಿ ಮಾಡುವ ಹಲವು ಕಾರ್ಯಾಗಾರಗಳನ್ನು ಹಮ್ಮಿಕೊಂಡು, ಹಲವು ಹೊಸ ಪದಾರ್ಥಗಳನ್ನು ಹೊರತಂದಿದೆ.

ಇದನ್ನೂ ಓದಿ: ನೇಕಾರರಿಗೆ ನೆರವಾಗಲು ಕೋರಿದ ನಟಿ ಪ್ರಿಯಾಂಕಾ ಉಪೇಂದ್ರ, ಆಶಿಕಾ ರಂಗನಾಥ್

ಇದರೊಂದಿಗೆ ಸಂಕಷ್ಟ ಎದುರಿಸಲು ಇತರೆ ಸಂಸ್ಥೆಗಳ ಸಹಕಾರದಿಂದ ಸಣ್ಣಮೊತ್ತದ ಆರ್ಥಿಕ ನೆರವನ್ನು ಎಲ್ಲಾ ಸದಸ್ಯರಿಗೂ ನೀಡಲಾಯಿತು. ಸರಕಾರದೊಂದಿಗಿನ ಹೋರಾಟವನ್ನು ಜಾರಿಇಟ್ಟಿತು.ಇದರ ಮುಂದುವರೆದ ಭಾಗವಾಗಿ, ನೆನ್ನೆ ಎಂಟು ದಿನಗಳ ಹೊಲಿಗೆ ತರಭೇತಿ ಕಾರ್ಯಾಗಾರವನ್ನು,ಹೊಲಿಗೆ ವಿಭಾಗದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಮೂಲಕ ಸ್ಥಳೀಯ ಶಾಸಕರಾದ ಹರತಾಳು ಹಾಲಪ್ಪ ನವರು ಉದ್ಘಾಟಿಸಿದರು.

ಸಭೆಯಲ್ಲಿ ಧಾರವಾಡದ ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ್ ಅವರು ,ಚರಕದ ಅಧ್ಯಕ್ಷರಾದ ಗೌರಮ್ಮ ನವರು, ಕೆ.ಎಚ್.ಡಿ.ಸಿ ಯ ನಿವೃತ್ತ ಅಧಿಕಾರಿ ರಾಮಚಂದ್ರಪ್ಪನವರು, ಚರಕ ಸಂಸ್ಥೆಯ ಸಂಸ್ಥಾಪಕರಾದ ಪ್ರಸನ್ನ, ಚರಕದ ವಿನ್ಯಾಸಕಾರ ಚಂದ್ರಶೇಖರ್ Chandrashekar M.V. ಹೆಗ್ಗೊಡು ಪಂಚಾಯತಿ ಅಧ್ಯಕ್ಷೆ ಸುಮಾ ಉಪಸ್ಥಿತರಿದ್ದರು. ನೇಯ್ಗೆ ಪೂರ್ವ ವಿಭಾಗದ ಮುಖ್ಯಸ್ಥರಾದ ಪದ್ಮಶ್ರೀ ಯವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಇತ್ತೀಚೆಗೆ ಹೊರತಂದ ಹಲವು ಪ್ರಿಂಟ್ಗಳು, ಪದಾರ್ಥಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಸ್ಥರ ಮಾತುಗಳು ಇಂತಿವೆ:

ಶ್ರಮ ಸಂಸ್ಕೃತಿಯ ಬಗ್ಗೆ ಮಾತನಾಡುವುದು ಸುಲಭ, ಆದರೆ, ಅದನ್ನು ಜಾರಿಗೆ ತರುವುದು ಕಷ್ಟಸಾಧ್ಯ. ಚರಕ‌ ಸಂಸ್ಥೆ ಅದನ್ನು ಜಾರಿಗೆ ತರುವ ಜೊತೆಗೆ ಶ್ರಮ ಸಂಸ್ಕೃತಿಗೆ ಹೊಸ ವ್ಯಾಖ್ಯಾನ ಬರೆದಿದೆ - ಹರತಾಳು ಹಾಲಪ್ಪ 

ಕಾಯಕ ಸಂಸ್ಕೃತಿಯನ್ನು‌ ಉಳಿಸಿ ಬೆಳೆಸಿದ ಶ್ರೇಯಸ್ಸು ಚರಕ ಸಂಸ್ಥೆಗೆ ಸಲ್ಲುತ್ತದೆ. ಒಂದು ಗ್ರಾಮೀಣ ಉದ್ಯೋಗವನ್ನು ಯಾವರೀತಿ ಕಟ್ಟಿ ನಡೆಸಬೇಕು ಎಂಬುದಕ್ಕೆ, ಚರಕ ಒಂದು ಮಾದರಿಯಾಗಿದೆ - ಚಂದ್ರಕಾಂತ ಬೆಲ್ಲದ್

ಚರಕ ಸಂಸ್ಥೆಯ ಮಹತ್ವಾಕಾಂಕ್ಷೆಯ ಯೋಜನೆಯಾದ "ಪವಿತ್ರವಸ್ತ್ರ" ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಕರ್ನಾಟಕದಲ್ಲಿರುವ ಎಲ್ಲ ಮಠಗಳಿಗೆ ಈ ಯೋಜನೆಯಡಿ ಕಾಷಾಯ ವಸ್ತ್ರವನ್ನು ಪೂರೈಸಲಾಗುವುದು. ಇದರಿಂದಾಗಿ ಕರ್ನಾಟಕದ ಬಹುತೇಕ ಕೈಮಗ್ಗ ನೇಕಾರರಿಗೆ ವರ್ಷ ಪೂರ್ತಿ ಉದ್ಯೋಗ ದೊರಕಲಿದೆ - ಪ್ರಸನ್ನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News