ಜಮ್ಮು : ಜಮ್ಮು ಏರ್ ಪೊರ್ಸ್ ಸ್ಟೇಷನ್ ನಲ್ಲಿ ಸ್ಪೋಟದ (Jammu Air Force Station Blast) ನಂತರ, ಇದೀಗ ಎರಡು ಡ್ರೋನ್ಗಳು ಕಲುಚಕ್ ಮಿಲಿಟರಿ ನಿಲ್ದಾಣದ ಬಳಿ ಕಂಡು ಬಂದಿದೆ. ಈ ಘಟನೆ ನಿನ್ನೆ ರಾತ್ರಿ 10 ಗಂಟೆಗೆ ಮತ್ತು ಮುಂಜಾನೆ 3 ಗಂಟೆಯ ಸುಮಾರಿಗೆ ನಡೆದಿದೆ. ಭಾನುವಾರದ ಸ್ಫೋಟದ ನಂತರ ಸೇನೆ ಎಲ್ಲಾ ಕಡೆ ಕಟ್ಟೆಚ್ಚರ ವಹಿಸಿದೆ. ಡ್ರೊನ್ (Drone) ಹಾರಾಡುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಕಾರ್ಯಪ್ರವೃತವಾದ ಸೇನೆ ಗುಂಡಿನ ದಾಳಿ ನಡೆಸಿದೆ.
ಗುಂಡಿನ ದಾಳಿ ನಡೆಸಿದ ಸೇನೆ :
ಡ್ರೋನ್ಗಳು ಕಲುಚಕ್ ಮಿಲಿಟರಿ ನಿಲ್ದಾಣದ (Kaluchak Military area) ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ಗಮನಕ್ಕೆ ಬರುತ್ತಿದ್ದಂತೆಯೇ, ಗುಂಡಿನ ದಾಳಿ ನಡೆಸಿದೆ. ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದ್ದು, ಸ್ಥಳದಲ್ಲಿ ಸರ್ಚ್ ಆಪರೇಷನ್ (Search Operation) ಜಾರಿಯಲ್ಲಿದೆ. ಅಲ್ಲದೆ, ಈ ಡ್ರೋನ್ಗಳ ಮೂಲವನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. ವಾಯುಪಡೆಯ ನಿಲ್ದಾಣದ ನಂತರ, ಮಿಲಿಟರಿ ಕೇಂದ್ರದ ಮೇಲೆ ದಾಳಿ ನಡೆಸುವ ಪಿತೂರಿಯ ಭಾಗವಾಗಿ ಈ ಡ್ರೋನ್ಗಳನ್ನು ಹಾರಿಸಲಾಗಿತ್ತು ಎನ್ನಲಾಗಿದೆ.
J&K: Police personnel check vehicles in Kaluchak area of Jammu.
2 separate drone activities were spotted over Ratnuchak-Kaluchak Military area by troops on the intervening night of 27-28 June. The drones flew back after QRT engaged them with firing. Security forces on high alert pic.twitter.com/nvQnZKNOMx
— ANI (@ANI) June 28, 2021
ಇದನ್ನೂ ಓದಿ : Coronavirus Third Wave In India: ಭಾರತದಲ್ಲಿ ತಡವಾಗಿ ಬರಲಿದೆ ಮೂರನೇ ಅಲೆ, ನೆಮ್ಮದಿಯ ವರದಿ ನೀಡಿದ ICMR
Air Force Station ಮೇಲೆ ದಾಳಿ!
ಜಮ್ಮುವಿನ ಏರ್ ಫೋರ್ಟ್ ನಿಲ್ದಾಣದಲ್ಲೀ (Jammu Air Force Station Blast) ಶನಿವಾರ ಎರಡು ಸ್ಫೋಟಗಳು ಸಂಭವಿಸಿತ್ತು. ಸ್ಫೋಟದಲ್ಲಿ ಹೆಚ್ಚಿನ ಹಾನಿ ಸಂಭವಿಸಿಲ್ಲ. ಸ್ಫೋಟವನ್ನು ಕೂಡಾ ಡ್ರೋನ್ ಮೂಲಕವೇ ಗುರಿಯಾಗಿಸಿ ನಡೆಸಲಾಗಿತ್ತು ಎನ್ನಲಾಗಿದೆ. ಎನ್ಐಎ (NIA) ತಂಡ ಸೇರಿದಂತೆ ಭದ್ರತಾ ಸಂಸ್ಥೆಗಳು ಈ ಸ್ಫೋಟಗಳ ತನಿಖೆಯಲ್ಲಿ ತೊಡಗಿವೆ. ಇದೊಂದು ಭಯೋತ್ಪಾದಕ ದಾಳಿಯಾಗಿತ್ತೇ ಎನ್ನುವುದು ಇನ್ನೂ ಕೂಡಾ ದೃಢಪಟ್ಟಿಲ್ಲ. ಮೂಲಗಳ ಪ್ರಕಾರ, ದಾಳಿಕೋರರು, ವಾಯು ನಿಲ್ದಾಣದಲ್ಲಿ ಇರುವ ವಾಯುಪಡೆಯ ಹೆಲಿಕಾಪ್ಟರ್ ಅನ್ನು ಗುರಿಯಾಗಿಸಲು ಬಯಸಿದ್ದರು ಎನ್ನಲಾಗಿದೆ. ಈ ದಾಳಿಯಲ್ಲಿ ವಾಯುಪಡೆಯ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದರೆ, ಅದನ್ನು ದೊಡ್ಡ ದಾಳಿ ಎಂದು ಪರಿಗಣಿಸಬೇಕಾಗಿತ್ತು.
ಹೈಅಲರ್ಟ್ ನಲ್ಲಿ ಮಿಲಿಟರಿ ಕೇಂದ್ರಗಳು :
ಡ್ರೋನ್ ದಾಳಿಯ (Drone Attack) ಆತಂಕದ ಹಿನ್ನೆಲೆಯಲ್ಲಿ ಮಿಲಿಟರಿ ನೆಲೆಗಳನ್ನು ಕಟ್ಟೆಚ್ಚರ ವಹಿಸಲಾಗಿದೆ. ಜಮ್ಮು ಹೊರತುಪಡಿಸಿ, ಪಠಾಣ್ಕೋಟ್ನ ಪ್ರಮುಖ ಮಿಲಿಟರಿ ನೆಲೆಗಳ ಸುತ್ತ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲಾಗಿದೆ. ಐದು ವರ್ಷಗಳ ಹಿಂದೆ ಪಠಾಣ್ಕೋಟ್ ವಾಯುನೆಲೆಯ (Military Base) ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು.
ಇದನ್ನೂ ಓದಿ : Tulsi Kumari : 12 ಮಾವಿನ ಹಣ್ಣುಗಳನ್ನ ₹ 1.2 ಲಕ್ಷಕ್ಕೆ ಮಾರಾಟ ಮಾಡಿ, ಮೊಬೈಲ್ ಖರೀದಿಸಿದ ಬಾಲಕಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.