Earthquake: ಅಸ್ಸಾಂನಲ್ಲಿ ಭೂಕಂಪ, ಈಶಾನ್ಯ ಪ್ರದೇಶದಲ್ಲಿ 24 ಗಂಟೆಗಳಲ್ಲಿ 5 ಬಾರಿ ಕಂಪಿಸಿದ ಭೂಮಿ

ಅಸ್ಸಾಂನಲ್ಲಿ 4.2 ತೀವ್ರತೆಯ ಭೂಕಂಪ ಅಪ್ಪಳಿಸಿದೆ. ಕಳೆದ 24 ಗಂಟೆಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ 5 ಭಾರಿ ಭೂಕಂಪ ಸಂಭವಿಸಿದೆ.

Written by - Yashaswini V | Last Updated : Jun 19, 2021, 12:40 PM IST
  • ಶುಕ್ರವಾರ ತಡರಾತ್ರಿ ಅಸ್ಸಾಂನಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ
  • ತಡರಾತ್ರಿ 1.07 ಗಂಟೆಗೆ ಈ ಭೂಕಂಪವು ಸಂಭವಿಸಿದೆ
  • ಶುಕ್ರವಾರ, ಅಸ್ಸಾಂ ಹೊರತುಪಡಿಸಿ, ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲೂ ಭೂಕಂಪ ಸಂಭವಿಸಿದೆ
Earthquake: ಅಸ್ಸಾಂನಲ್ಲಿ ಭೂಕಂಪ, ಈಶಾನ್ಯ ಪ್ರದೇಶದಲ್ಲಿ 24 ಗಂಟೆಗಳಲ್ಲಿ 5 ಬಾರಿ ಕಂಪಿಸಿದ ಭೂಮಿ  title=
ಈಶಾನ್ಯ ಪ್ರದೇಶದಲ್ಲಿ 24 ಗಂಟೆಗಳಲ್ಲಿ 5 ಬಾರಿ ನಡುಗಿದ ಭೂಮಿ

ಗುವಾಹಟಿ: ಶುಕ್ರವಾರ ತಡರಾತ್ರಿ ಅಸ್ಸಾಂನಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಈಶಾನ್ಯ ಪ್ರದೇಶದಲ್ಲಿ ಐದು ಭಾರಿ ಭೂಕಂಪ ಸಂಭವಿಸಿದೆ. ಈವರೆಗೆ ಸಂಭವಿಸಿದ ಭೂಕಂಪದಿಂದಾಗಿ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ.

ತಡರಾತ್ರಿ 1.07 ಗಂಟೆಗೆ ಈ ಭೂಕಂಪವು (Earthquake) ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ. ಸೋನಿತ್‌ಪುರದ ಜಿಲ್ಲಾ ಕೇಂದ್ರವಾದ ತೇಜ್‌ಪುರ್‌ ಬಳಿ ಭೂಮಿಯಿಂದ 30 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದುವನ್ನು ಗುರುತಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ- ಕೊರೊನಾ ಲಸಿಕೆಯಿಂದಾಗಿ ಶೇ 80 ರಷ್ಟು ಆಸ್ಪತ್ರೆಗೆ ದಾಖಲಿಸುವ ಪ್ರಮಾಣ ಕಡಿತ

ನಿನ್ನೆ ಬೆಳಿಗ್ಗೆಯೂ ಎರಡು ಬಾರಿ ಕಂಪಿಸಿದ ಭೂಮಿ:
ಈ ಹಿಂದೆ ರಾಜ್ಯದಲ್ಲಿ ಇನ್ನೂ ಎರಡು ಭೂಕಂಪನ ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಈ ಭೂಕಂಪಗಳಲ್ಲಿ ಒಂದು 4.1 ತೀವ್ರತೆಯ ಭೂಕಂಪವಾಗಿದೆ. ಅದರ ಕೇಂದ್ರಗಳು ಸೋನಿತ್‌ಪುರ ಜಿಲ್ಲೆಯಲ್ಲೂ ಇದ್ದವು.

ಮಣಿಪುರದಲ್ಲೂ ಭೂಕಂಪ:
ಶುಕ್ರವಾರ, ಅಸ್ಸಾಂ (Assam) ಹೊರತುಪಡಿಸಿ, ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲೂ ರಿಕ್ಟರ್ ಪ್ರಮಾಣದಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ. ಅಲ್ಲದೆ, ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ 2.6 ತೀವ್ರತೆಯ ಭೂಕಂಪದ ಕೇಂದ್ರಬಿಂದುವಾಗಿದೆ. ಈ ಭೂಕಂಪಗಳಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗಳ ನಷ್ಟದ ಬಗ್ಗೆ ಯಾವುದೇ ವರದಿಯಾಗಿಲ್ಲ.

ಇದನ್ನೂ ಓದಿ- ಕಾಶ್ಮೀರದಲ್ಲಿ ಭೂಕಂಪ , ಹಿಮಾಲಯದ ಮಡಿಲಲ್ಲೇಕೆ ಭೂಮಿ ಕಂಪಿಸುತ್ತಿದೆ..?

ಈಶಾನ್ಯ ಪ್ರದೇಶವು ಆಗಾಗ್ಗೆ ಭೂಕಂಪಗಳಿಗೆ ಗುರಿಯಾಗುತ್ತದೆ. ಇದಕ್ಕೂ ಮುನ್ನ ಏಪ್ರಿಲ್ 28 ರಂದು ಅಸ್ಸಾಂನಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ ಉಂಟಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News