Child plan : ಒಂದು ಲಕ್ಷಕ್ಕೆ ಬದಲು ಸಿಕ್ಕಿತು 8 ಲಕ್ಷ ; ಮಕ್ಕಳಿಗಾಗಿ ಬೆಸ್ಟ್ ಚೈಲ್ಡ್ ಮ್ಯುಚ್ಯವಲ್ ಫಂಡ್

Child Mutual Fund:  ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಇಂತಹ ಅನೇಕ ಯೋಜನೆಗಳು ಮಕ್ಕಳ ಹೆಸರಿನಲ್ಲಿ ನಡೆಯುತ್ತಿವೆ. 

ನವದೆಹಲಿ : Child Mutual Fund:  ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಇಂತಹ ಅನೇಕ ಯೋಜನೆಗಳು ಮಕ್ಕಳ ಹೆಸರಿನಲ್ಲಿ ನಡೆಯುತ್ತಿವೆ. ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್, ಎಸಿಬಿಐ ಮ್ಯೂಚುವಲ್ ಫಂಡ್, ಆಕ್ಸಿಸ್ ಮ್ಯೂಚುಯಲ್ ಫಂಡ್, ಐಸಿಐಸಿಐ ಪ್ರುಡೆನ್ಶಿಯಲ್, ಟಾಟಾ ಮತ್ತು ಯುಟಿಐನಂತಹ ಫಂಡ್ ಹೌಸ್‌ಗಳು ಇಂತಹ ಯೋಜನೆಗಳನ್ನು ನೀಡುತ್ತಿವೆ. ಸಣ್ಣ ಉಳಿತಾಯದ ಆದಾಯವು ಕಡಿಮೆಯಾಗುತ್ತಿರುವ ಇಂದಿನ ಯುಗದಲ್ಲಿ, ಮ್ಯೂಚುವಲ್ ಫಂಡ್‌ಗಳು ಉತ್ತಮ ಹೂಡಿಕೆ ಆಯ್ಕೆಯಾಗಿರಬಹುದು. ಅಂತಹ ಅನೇಕ ಉತ್ತಮ ಯೋಜನೆಗಳಿವೆ.   
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಹೆಚ್ ಡಿಎಫ್ ಸಿ ಚಿಲ್ಡ್ರನ್ ಗಿಫ್ಟ್ ಫಂಡ್ : ಈ ಸ್ಕೀಂ ಅನ್ನು ಮಾರ್ಚ್ 2, 2001 ರಂದು ಪ್ರಾರಂಭಿಸಲಾಯಿತು. ಅಂದಿನಿಂದ ಇದು ವಾರ್ಷಿಕ ಶೇಕಡಾ 16.12 ರಂತೆ ಆದಾಯ ಯವನ್ನು ನೀಡಿದೆ.  ಈ ಸ್ಕೀಂ ನಲ್ಲಿ ಕಳೆದ 15 ವರ್ಷಗಳ ಅವಧಿಗೆ 1 ಲಕ್ಷದ ಮೊತ್ತದ ಹೂಡಿಕೆಯು ಸುಮಾರು 8.34 ಲಕ್ಷ ರೂಗಳಷ್ಟಾಗಿದೆ. ಅದೇ ವೇಳೆ, 15 ವರ್ಷಗಳ ಅವಧಿಗೆ 5000 ರೂ.ಗಳ ಮಾಸಿಕ ಎಸ್‌ಐಪಿ ಮೌಲ್ಯ 32 ಲಕ್ಷ ರೂಗಳಷ್ಟಾಗಿದೆ.   

2 /4

ಐಸಿಐಸಿಐ ಪ್ರುಡೆನ್ಶಲ್ ಚೈಲ್ಡ್ ಕೇರ್ ಫಂಡ್ : ಆಗಸ್ಟ್ 31, 2001 ರಂದು ಈ ಸ್ಕೀಂ ಪ್ರಾರಂಭವಾದಾಗಿನಿಂದ ನಿಧಿಯ ಸಿಎಜಿಆರ್ ಆದಾಯವು ಶೇಕಡಾ 15.58 ರಷ್ಟಿದೆ. 15 ವರ್ಷಗಳಲ್ಲಿ ಒಂದು ಲಕ್ಷ ರೂ.ಗಳ ಮೌಲ್ಯ 5.8 ಲಕ್ಷ ರೂ. ಮಾಸಿಕ 5000 ರೂ.ಗಳ ಎಸ್‌ಐಪಿ ಮೌಲ್ಯವು 24 ಲಕ್ಷ ರೂಗಳಷ್ಟಾಗಿದೆ.

3 /4

ಯುಟಿಐ ಚಿಲ್ಡರ್ನ್ ಕರಿಯರ್ ಫಂಡ್ : ಜುಲೈ 12, 1993 ರಲ್ಲಿ ಈ ಸ್ಕೀಮ್ ಆರಂಭವಾಯಿತು. ಈ ಸ್ಕೀಂ ಆರಂಭವಾದಾಗಿನಿಂದ ನಿಧಿಯ ಶೇಕಡಾ 10 ರಷ್ಟು ಸಿಎಜಿಆರ್ ಆದಾಯವನ್ನು ಹೊಂದಿದೆ. 15 ವರ್ಷಗಳಲ್ಲಿ 1 ಲಕ್ಷ ರೂ.ಗಳ ಮೌಲ್ಯ 4.12 ಲಕ್ಷ ರೂ.ಗಳಾಗಿದ್ದರೆ, ಮಾಸಿಕ 5000 ರೂ.ಗಳ ಎಸ್‌ಐಪಿ ಮೌಲ್ಯವು 20 ಲಕ್ಷ ರೂ.  

4 /4

ಟಾಟಾ ಯಂಗ್ ಸಿಟಿಜನ್ ಫಂಡ್ : ಈ ಸ್ಕೀಂ ಪ್ರಾರಂಭವಾದಾಗಿನಿಂದ ಈ ನಿಧಿಯು ಶೇಕಡಾ 13 ರಷ್ಟು ಸಿಎಜಿಆರ್ ಆದಾಯವನ್ನು ಹೊಂದಿದೆ. 15 ವರ್ಷಗಳಲ್ಲಿ 1 ಲಕ್ಷ ರೂ.ಗಳ ಮೌಲ್ಯ 4.76 ಲಕ್ಷ ರೂ.ಗಳಾಗಿದ್ದರೆ, ಮಾಸಿಕ 5000 ರೂ.ಗಳ ಎಸ್‌ಐಪಿ ಮೌಲ್ಯವು 22.5 ಲಕ್ಷ ರೂ.