ನವದೆಹಲಿ: Swapna Shastra - ಕನಸಿನ ಪ್ರಪಂಚ (Dream World) ಜನಸಾಮಾನ್ಯರ ಕಲ್ಪನೆಯನ್ನು ಮೀರಿದೆ. ಹಾಗೆ ನೋಡಿದರೆ, ವಾಸ್ತವ ಜಗತ್ತಿನಲ್ಲಿ ಇವು ಮಾನವನ ಜೀವನಕ್ಕೆ ನೇರ ಸಂಬಂಧ ಹೊಂದಿಲ್ಲ. ಆದರೆ, ಕನಸುಗಳು ವಾಸ್ತವಿಕ ಜೀವನದಲ್ಲಿ ನಡೆಯುವ ಘಟನೆಗಳ ಮುನ್ಸೂಚನೆಯನ್ನು (Dream Analysis) ನೀಡುತ್ತವೆ ಎಂದು ಶಾಸ್ತ್ರಗಳಲ್ಲಿ (Astrology) ಹೇಳಲಾಗುತ್ತದೆ. ಹೀಗಿರುವಾಗ ಯಾವ ಕನಸುಗಳು ನಿಮ್ಮ ಪಾಲಿಗೆ ಶುಭವಾಗಿವೆ ಹಾಗೂ ಯಾವ ಕನಸುಗಳು ಅಶುಭವಾಗಿವೆ (Bad Dreams) ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ಓದಿ-Buried Treasure: ಕನಸಿನಲ್ಲಿ ಶಂಖ ಕಾಣಿಸಿಕೊಂಡರೆ ಏನರ್ಥ? ಇದು ಶುಭ ಅಥವಾ ಅಶುಭ ಸಂಕೇತ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಈ ಕನಸುಗಳು ತುಂಬಾ ಕೆಟ್ಟ ಕನಸುಗಳಾಗಿರುತ್ತವೆ - ಸ್ವಪ್ನಶಾಸ್ತ್ರದ (Swapna Shastra) ಪ್ರಕಾರ ಒಂದು ವೇಳೆ ನಿಮಗೆ ಕನಸಿನಲ್ಲಿ ಧನ ಹಾನಿ, ಆಕಾಶದಿಂದ ಕೆಳಕ್ಕೆ ಬೀಳುತ್ತಿರುವ ಹಾಗೆ ಮತ್ತು ಕೂದಲು ಕತ್ತರಿಸುವುದು ಕಂಡುಬಂದರೆ, ಇಂತಹ ಕನಸು ನಿಮ್ಮ ಜೀವನದಲ್ಲಿ ಭವಿಷ್ಯದಲ್ಲಿ ಎದುರಾಗುವ ಯಾವುದಾದರೊಂದು ಅಶುಭ ಘಟನೆಯನ್ನು ಸಂಕೇತಿಸುತ್ತಿವೆ ಎಂದು ಭಾವಿಸಿ. ಇವುಗಳಲ್ಲದೆ ಹಲ್ಲು ಬೀಳುವುದು, ನದಿ ನೀರಿನ ಮೇಲೆ ಸೇತುವೆ, ನೆರೆ ಅಥವಾ ಸೂರ್ಯಾಸ್ತ ಕನಸಿನಲ್ಲಿ ಗೋಚರಿಸುವುದು ಕೂಡ ಕೆಟ್ಟ ಸಂಕೇತಗಳು ಎಂದು ಭಾವಿಸಲಾಗುತ್ತದೆ.
2. ಕನಸಿನಲ್ಲಿ ಬಾಹ್ಯಾಕಾಶದಲ್ಲಿ ನಕ್ಷತ್ರ ಮುಟ್ಟುವುದು ಕಂಡರೆ - ಒಂದು ವೇಳೆ ನೀವು ಕನಸಿನಲ್ಲಿ ನಕ್ಷತ್ರವನ್ನು ಮುಟ್ಟುತ್ತಿದ್ದರೆ, ಚಿಂತೆ ಬಿಡಿ. ಏಕೆಂದರೆ, ನಿಮ್ಮ ಅದೃಷ್ಟ ಕೂಡ ನಕ್ಷತ್ರದಂತೆ ಹೊಳೆಯಲಿದೆ ಎಂದರ್ಥ. ಇದು ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದರ ಸಂಕೇತ.
3. ಕರಿಯರ್ ನಲ್ಲಿ ಅಡೆತಡೆಯ ಸಂಕೇತ - ಕನಸಿನಲ್ಲಿ ಕುದುರೆಯಿಂದ ಕೆಳಕ್ಕೆ ಬೀಳುವುದು, ಮುಚ್ಚಿಹೋದ ಚರಂಡಿ, ದೋಣಿಯಲ್ಲಿ ಕೂರುವುದು ಅಥವಾ ಬೆಕ್ಕು ಕಂಡರೆ ಅದು ಅಶುಭ ಎನ್ನಲಾಗಿದೆ. ಕನಸಿನಲ್ಲಿ ಒಣಗಿದ ಅಡವಿ ತನ್ನಷ್ಟಕ್ಕೆ ತಾನೇ ಹಸ್ತಾಕ್ಷರ ಮಾಡುವುದು ಕಂಡರೆ ಅಥವಾ ಗೂಬೆ ಕಂಡರೆ, ಕರಿಯರ್ ಅಥವಾ ವ್ಯವಸಾಯದಲ್ಲಿ ನಿಮಗೆ ಹಾನಿಯಾಗಲಿದೆ ಎಂಬುದರ ಸಂಕೇತ.
4. ಒಂದು ವೇಳೆ ಇಂತಹ ಕನಸು ಬಿದ್ದರೆ? - ಕನಸಿನಲ್ಲಿ ಇದ್ದಿಲು, ಚೂರಿ ಜಲಾಯಿಸುವುದು, ಕತ್ತರಿ ಚಲಾಯಿಸುವುದು ಅಥವಾ ಯಾರಿಗಾದರು ಕಪಾಳಮೋಕ್ಷ ಮಾಡುವ ಕನಸು ಬಿದ್ದರೆ, ಇವು ಉತ್ತಮ ಸಂಕೇತವಲ್ಲ. ದಾಂಪತ್ಯ ಜೀವನಕ್ಕೆ ಇಂತಹ ಕನಸು ತುಂಬಾ ಅಪಾಯಕಾರಿ ಎನ್ನಲಾಗುತ್ತದೆ.
5. ಈ ಉಪಾಯಗಳನ್ನು ಅನುಸರಿಸಿ (Tips To Get Rid Of Bad Dreams) - ಕೆಟ್ಟ ಕನಸುಗಳು ಬಿದ್ದರೆ, ಬೆಳಿಗ್ಗೆ ಎದ್ದಾಕ್ಷಣ ಎಲ್ಲಕ್ಕಿಂತ ಮೊದಲು ದೇವಾದಿದೇವ ಮಹಾದೇವನಿಗೆ ಪೂಜೆ ಸಲ್ಲಿಸಿ, ಶಿವನಿಗೆ ರುದ್ರಾಭಿಷೇಕ ನೆರವೇರಿಸಿ. ಪೂಜೆ ಮಾಡುವಾಗ ಮನಸ್ಸಿನಲ್ಲಿ ನಿಮ್ಮನ್ನು ರಕ್ಷಿಸಲು ಶಿವನನ್ನು ಪ್ರಾರ್ಥಿಸಿ. ಇದಲ್ಲದೆ ದುರ್ಗಾಸಪ್ತಶತಿ ಪಠಿಸಿ. ಇಂತಹ ಅಶುಭ ಕನಸುಗಳು ಬಿದ್ದ ಮೇಲೆ ಒಂದು ವೇಳೆ ನಿಮ್ಮ ಮನಸ್ಸಿನಲ್ಲಿ ಯಾವುದಾದರು ಶಂಕೆ ಅಥವಾ ಮನಸ್ಸು ಸರಿಯಾಗಿಲ್ಲ ಎಂದಾದರೆ, ಈ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆ ಪಡೆಯಲು ಮರೆಯಬೇಡಿ.