Mantra For Marriage: ಹಿಂದೂ ಧರ್ಮ ಶಾಸ್ತ್ರಗಳಲ್ಲಿ (Astrology) ಪ್ರತಿಯೊಂದು ಸಮಸ್ಯೆಗೆ ಪರಿಹಾರ ಸೂಚಿಸಲಾಗಿದೆ. ಈ ಪರಿಹಾರಗಳನ್ನು ಅನುಸರಿಸಿ ನೀವು ದೊಡ್ಡ ದೊಡ್ಡ ಸಮಸ್ಯೆಗಳನ್ನು ಪರಿಹರಿಸಬಹುದು. ಹಿಂದೂ ಧರ್ಮದಲ್ಲಿ ವಿವಾಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಪವಿತ್ರ ಕಾರ್ಯಗಳಲ್ಲಿ ಇದೂ ಕೂಡ ಒಂದು ಎನ್ನಲಾಗಿದೆ. ಕೆಲವರ ವಿವಾಹ ಬೇಗ ನೆರವೇರುತ್ತದೆ. ಆದರೆ. ಹಲವರು ವಿವಾಹಕ್ಕಾಗಿ ವಧುವಿನ ಹುಡುಕಾಟದಲ್ಲಿ ತೊಂದರೆ ಅನುಭವಿಸುತ್ತಾರೆ. ಇಂದಿನ ಕಾಲದಲ್ಲಿ ಜನರು ವಧುವಿನಲ್ಲಿ ಎಲ್ಲ ರೀತಿಯ ಗುಣಗಳನ್ನು ಬಯಸುತ್ತಾರೆ. ಈ ಗುಣಗಳಲ್ಲಿ ಸುಂದರತೆ ಕೂಡ ಒಂದು. ಅಂದರೆ, ವಧು ಸುಂದರವಾಗಿರಬೇಕು. ಹಾಗೆ ನೋಡುವುದಾದರೆ, ಜನರಿಗೆ ವಧುವಿನಲ್ಲಿ ಹಲವಾರು ಗುಣಗಳು ಬೇಕಾಗುತ್ತವೆ. ಆದರೆ, ಸುಂದರತೆ ಈ ಕಾಲದಲ್ಲಿ ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿದೆ.
ವಿವಾಹ (Marriage Mantra) ಮಾಡಿಕೊಳ್ಳಲು ಯಾವುದೇ ಓರ್ವ ಯುವಕ ಯುವತಿಯನ್ನು ನೋಡುವಾಗ ಮೊದಲು ಸುಂದರತೆಗೆ ಹೆಚ್ಚು ಪ್ರಾತಿನಿಧ್ಯ ನೀಡುತ್ತಾನೆ ಹಾಗೂ ನಂತರ ಯುವತಿಯ ಇತರೆ ಗುಣಗಳ ಕಡೆಗೆ ಗಮನ ಹರಿಸುತ್ತಾನೆ. ಇಂದಿನ ಕಾಲದ ಪುರುಷರ ಬಗ್ಗೆ ಹೇಳುವುದಾದರೆ. ಸುಂದರತೆ ಅವರ ಪಾಲಿಗೆ ಭಾರಿ ಪ್ರಮುಖವಾಗಿದೆ. ಸುಂದರ ವಧು ಸಿಗುವವರೆಗೂ ವರ ಮದುವೆ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಒಂದು ವೇಳೆ ನೀವೂ ಕೂಡ ವಿವಾಹ ಮಾಡಿಕೊಳ್ಳಲು ಸುಂದರ ಕನ್ಯೆಯ ಹುಡುಕಾಟದಲ್ಲಿದ್ದರೆ, ಇಂದು ನಾವು ನಿಮಗೆ ಉಪಾಯವೊಂದನ್ನು ಹೇಳಲಿದ್ದೇವೆ. ಇದನ್ನು ಅನುಸರಿಸಿದರೆ ನಿಮ್ಮ ನಿರೀಕ್ಷೆ ಬೇಗ ಪೂರ್ಣಗೊಳ್ಳಲಿದೆ. ವಿವಾಹಕ್ಕಾಗಿ ಸುಂದರ ಯುವತಿ ಪಡೆಯಲು ನಾವು ನಿಮಗೆ ಮಂತ್ರವೊಂದನ್ನು ಹೇಳಿಕೊಡಲಿದ್ದೇವೆ. ಜೊತೆಗೆ ಬೇಗ ವಿವಾಹಕ್ಕಾಗಿ ಟಿಪ್ಸ್ ಕೂಡ ನೀಡಲಿದ್ದೇವೆ. ಹಾಗಾದರೆ ತಡಮಾಡದೇ ಈ ಕುರಿತು ತಿಳಿದುಕೊಳ್ಳೋಣ.
ಇದನ್ನೂ ಓದಿ-Sun Transit In Gemini 2021: ಮಿಥುನ ರಾಶಿಗೆ ಸೂರ್ಯನ ಪ್ರವೇಶ, ಯಾವ ರಾಶಿಗಳ ಮೇಲೆ ಏನು ಪ್ರಭಾವ?
ಸುಂದರ ವಧುವಿಗೆ ಇಲ್ಲಿದೆ ಮಂತ್ರ (Mantra For Beautiful Wife)
ಪತ್ನಿ ಮನೋರಮಾಃ ಮನೋವ್ರುತ್ತಾನಸಾರಿಣಿಂ. ತಾರೀಣಿಂ ದುರ್ಗಾಸಂಸಾರಸಾಗರಸ್ಯ ಕುಲೋಧ್ಭವಾಂ.
ಇದನ್ನೂ ಓದಿ- Palmistry: ನೀವು ಯಾವ ಕೆಲಸದಲ್ಲಿ ಪ್ರಾವಿಣ್ಯತೆ ಹೊಂದಿರುವಿರಿ? ನಿಮ್ಮ ಕೈಗಳನ್ನು ನೋಡಿ ತಿಳಿದುಕೊಳ್ಳಿ
ಶೀಗ್ರ ಕಂಕಣ ಭಾಗ್ಯ ಕೂಡಿ ಬರಲು ಉಪಾಯ (Tips For Marriage)
- ಮೇಲೆ ನೀಡಲಾಗಿರುವ ಮಂತ್ರವನ್ನು ನವರಾತ್ರಿಯ ಸಂದರ್ಭಗಳಲ್ಲಿ ದೇವಿ ದುರ್ಗೆಯ ಧ್ಯಾನ ಮಾಡುತ್ತಾ ಪಠಿಸಿ.
- ಮಂತ್ರವನ್ನು ಆರಂಭಿಸಿದ ನಂತರ ದೇವಿ ದುರ್ಗೆಯ ಪ್ರತಿ ಸಂಪೂರ್ಣ ಸಮರ್ಪಿತ ಭಾವದಿಂದ ಧ್ಯಾನ ಮಾಡುತ್ತಾ ಮಂತ್ರವನ್ನು ಜಪಿಸಿ.
- ಮಂತ್ರದ ಉಚ್ಚಾರಣೆ ಮದುವೆಯ ಮೊದಲು ಮಾತ್ರ ಮಾಡಿ. ಮದುವೆಯ ಬಳಿಕ ಈ ಮಂತ್ರ ಯಾವುದೇ ಪ್ರಭಾವ ಬೀರುವುದಿಲ್ಲ.
ಇದನ್ನೂ ಓದಿ-Saturday Born Child: ಈ ದಿನ ಜನಿಸಿದವರ ಮೇಲೆ ಶನಿದೇವ ವಿಶೇಷ ಕೃಪೆ ತೋರುತ್ತಾನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.