ಮಕ್ಕಳ ಆನ್ ಲೈನ್ ತರಗತಿಗಳಿಗೆ ಹೊಂದುವಂಥಹ ಕಡಿಮೆ ಬೆಲೆಯ ಲಾಪ್ ಟಾಪ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಲಾಪ್ ಟಾಪ್ ಗಳಲ್ಲಿ ಇಂಟರ್ ನೆಟ್ ಬ್ರೌಸಿಂಗ್, ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ಇತರ ಮೂಲಭೂತ ಕಾರ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.
ನವದೆಹಲಿ : ಕರೋನ ಕಾಲದಲ್ಲಿ ಎಲ್ಲಾ ಶಾಲೆಗಳೂ ಆನ್ ಲೈನ್ ಕ್ಲಾಸ್ ಗಳನ್ನೇ ನಡೆಸುತ್ತಿದೆ. ಆನ್ ಲೈನ್ ಕ್ಲಾಸ್ ಗಳಿಗೆ ಲಾಪ್ ಟಾಪ್ ಅಥವಾ ಸ್ಮಾರ್ಟ್ ಫೋನ್ ಇರುವುದು ಅನಿವಾರ್ಯ. ಸ್ಮಾರ್ಟ್ ಪೋನ್ ಗಳಲ್ಲಿ ಬಹಳ ಹೊತ್ತು ತರಗತಿ ನಡೆಸುವುದು ಕೂಡಾ ಕಷ್ಟ. ಹೀಗಿರುವಾಗ ಮಕ್ಕಳ ಆನ್ ಲೈನ್ ತರಗತಿಗಳಿಗೆ ಹೊಂದುವಂಥಹ ಕಡಿಮೆ ಬೆಲೆಯ ಲಾಪ್ ಟಾಪ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಲಾಪ್ ಟಾಪ್ ಗಳಲ್ಲಿ ಇಂಟರ್ ನೆಟ್ ಬ್ರೌಸಿಂಗ್, ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ಇತರ ಮೂಲಭೂತ ಕಾರ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಬೆಲೆ ಮೂವತ್ತು ಸಾವಿರ ರೂಪಾಯಿಗಳಿಗಿಂತ ಕಡಿಮೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಎ 12 ಬಯೋನಿಕ್ ಚಿಪ್ ಹೊಂದಿರುವ 2020 ಆಪಲ್ ಐಪ್ಯಾಡ್ 29,900 ರೂಗಳಿಗೆ ಸಿಗುತ್ತಿವೆ. 10.2 ಇಂಚು ಡಿಸ್ ಪ್ಲೇ ಹೊಂದಿದೆ. 32 ಜಿಬಿ ಸ್ಟೋರೇಜ್ ಹೊಂದಿರುವ ವೈ-ಫೈ ಓನ್ಲಿ ಮಾಡೆಲ್ ಇದಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎ 8.0 ಆಂಡ್ರಾಯ್ಡ್ ಟ್ಯಾಬ್ಲೆಟ್ ಬೆಲೆ 12,350 ರೂಗಳಿಂದ ಪ್ರಾರಂಭವಾಗುತ್ತದೆ. ಇದು ವೈ-ಫೈ ಮತ್ತು 4 ಜಿ ಸಂಪರ್ಕದ ಸೌಲಭ್ಯವನ್ನು ಹೊಂದಿದೆ. ಇದು 8 ಇಂಚಿನ ಸ್ಕ್ರೀನ್ ನೊಂದಿಗೆ ಬರುತ್ತಿದೆ. ಇದು 2 ಜಿಬಿ RAM ಮತ್ತು 32 ಜಿಬಿ ಇಂಟರ್ ನೆಲ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಮೈಕ್ರೊ ಎಸ್ಡಿ ಕಾರ್ಡ್ ಸೌಲಭ್ಯವೂ ಇದರಲ್ಲಿದೆ.
Acer One 14 Windows laptop 4 ಜಿಬಿ RAM, 1 ಟಿಬಿ ಎಚ್ಡಿಡಿ ಸ್ಟೋರೇಜ್, 14 ಇಂಚಿನ ಡಿಸ್ಪ್ಲೇ, AMD Radeon ಇಂಟಿಗ್ರೇಟೆಡ್ ಗ್ರಾಫಿಕ್ಸ್, AMD A6 ಪ್ರೊಸೆಸರ್ ಮತ್ತು 64 ಬಿಟ್ ವಿಂಡೋಸ್ 10 ಹೋಮ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದರ ಬೆಲೆ 22,990 ರೂ.
ಲೆನೊವೊ ಯೋಗ ಸ್ಮಾರ್ಟ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಬೆಲೆ 20,999 ರೂ. ಈ ಟ್ಯಾಬ್ಲೆಟ್ ನ RAM 4 ಜಿಬಿ ಆಗಿದೆ. ಇದರ ಇಂಟರ್ ನೆಲ್ ಸ್ಟೋರೇಜ್ 64 ಜಿಬಿ. ಇದರ ಸ್ಕ್ರೀನ್ 10.1 ಇಂಚುಗಳು.
HP Chromebook 14a-na0002TU ಲ್ಯಾಪ್ಟಾಪ್ Google Chrome ಸಾಫ್ಟ್ವೇರ್ ಹೊಂದಿದೆ. ಇದು ಇಂಟೆಲ್ನ ಸೆಲೆರಾನ್ ಎನ್ 4020 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. 4 ಜಿಬಿ RAM ನೊಂದಿಗೆ 64 ಜಿಬಿ ಸ್ಟೋರೇಜ್ ಇದೆ. ಇದರ ಡಿಸ್ ಪ್ಲೆ 4 ಇಂಚುಗಳು. ಇದರ ಬೆಲೆ 25,990.
ಇದು 4 ಜಿಬಿ RAM, 1 ಟಿಬಿ ಸ್ಟೋರೇಜ್, AMD Ryzen 3 ಪ್ರೊಸೆಸರ್, ವಿಂಡೋಸ್ 10 ಹೋಮ್ ಆಪರೇಟಿಂಗ್ ಸಿಸ್ಟಮ್ ಮತ್ತು 15.6 ಇಂಚಿನ ಸ್ಕ್ರೀನ್ ಹೊಂದಿದೆ. ಈ ಲ್ಯಾಪ್ಟಾಪ್ನ ಬೆಲೆ 29,690 ರೂ.
ಎಚ್ಪಿ 15 ಎಸ್ ವಿಂಡೋಸ್ 10 ಲ್ಯಾಪ್ಟಾಪ್ ಇಂಟೆಲ್ನ ಸೆಲೆರಾನ್ ಎನ್ 4020 ಪ್ರೊಸೆಸರ್ ಹೊಂದಿದೆ. ಇದು 4 ಜಿಬಿ RAM ಹೊಂದಿದೆ. 1 ಟಿಬಿ ಎಚ್ಡಿಡಿ ಸಂಗ್ರಹವಿದೆ. ಇದರ ಬೆಲೆ 26,990 ರೂ.
ಲೆನೊವೊ ಐಡಿಯಾಪ್ಯಾಡ್ ಎಸ್ 145 ವಿಂಡೋಸ್ 10 ಲ್ಯಾಪ್ಟಾಪ್ 15.6 ಇಂಚಿನ ಎಫ್ಹೆಚ್ಡಿ ಡಿಸ್ಪ್ಲೇ ಹೊಂದಿದೆ. 4 ಜಿಬಿ RAM, 1 ಟಿಬಿ ಶೇಖರಣಾ ಸಾಮರ್ಥ್ಯವಿದೆ. ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಅನ್ನು ಸ್ಥಾಪಿಸಲಾಗಿದೆ. ಇದರ ಬೆಲೆ 28,990 ರೂ.