Google search ಮಾಡುವ ವೇಳೆ ನಿಮ್ಮ ಎದುಉ ಅನೇಕ ಆಯ್ಕೆಗಳು ಬರುತ್ತವೆ. ಹೀಗಿರುವಾಗ ಯಾವ ವೆಬ್ ಸೈಟ್ ಅಸಲಿ ಯಾವುದು ನಕಲಿ ಎಂದು ಕಂಡುಹಿಡಿಯುವುದು ಬಹಳ ಕಷ್ಟ.
ನವದೆಹಲಿ : Google search ಮಾಡುವ ವೇಳೆ ನಿಮ್ಮ ಎದುಉ ಅನೇಕ ಆಯ್ಕೆಗಳು ಬರುತ್ತವೆ. ಹೀಗಿರುವಾಗ ಯಾವ ವೆಬ್ ಸೈಟ್ ಅಸಲಿ ಯಾವುದು ನಕಲಿ ಎಂದು ಕಂಡುಹಿಡಿಯುವುದು ಬಹಳ ಕಷ್ಟ. ಈ ಸಮಸ್ಯೆಯನ್ನು ಬಗೆಹರಿಸಲು, ಗೂಗಲ್ ನಲ್ಲಿ ಈಗ “About this result” ಎಂಬ ಫೀಚರ್ ಇದೆ. ಗೂಗಲ್ ಈ ಫೀಚರ್ ಅನ್ನು 2021ರಲ್ಲಿ ಅಮೆರಿಕಾದಲ್ಲಿ ಪರಿಚಯಿಸಲಾಯಿತು. ಇದೀಗ ವಿಶ್ವಾದ್ಯಂತ ಇಂಗ್ಲೀಷ್ ನಲ್ಲಿ ಸರ್ಚ್ ಮಾಡಲಾದ ಎಲ್ಲಾ ಫಲಿತಾಂಶಗಳಿಗೂ ಈ About this result ಅನ್ವಯವಾಗಲಿದೆ ಎಂದು ಕಂಪನಿ Google I/O ಇವೆಂಟ್ ನಲ್ಲಿ ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನೀವು Google ನಲ್ಲಿ ಸರ್ಚ್ ಮಾಡಿದಾಗ, ಸರ್ಚ್ ರಿಸಲ್ಟ್ ನಲ್ಲಿ ಮೂರು ಡಾಟ್ ಬಟನ್ ಕಾಣಿಸುತ್ತದೆ. ಇದನ್ನು ಕ್ಲಿಕ್ ಮಾಡಿದರೆ, About this result ಕಾರ್ಡ್ ತೆರೆಯುತ್ತದೆ. ಇದರಲ್ಲಿ ಮಾಹಿತಿಯನ್ನು ಒದಗಿಸುವ ವೆಬ್ಸೈಟಿನ ಸಂಪೂರ್ಣ ಮಾಹಿತಿ ಸಿಗಲಿದೆ. ಈ ಮಾಹಿತಿಯ ಮೂಲ Wikipedia ಆಗಿರುತ್ತದೆ.
ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರು ಸೈಟ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಇದಕ್ಕಾಗಿ ವಿಕಿಪೀಡಿಯಾ ಪೇಜ್ ನ ಲಿಂಕ್ ಕೂಡಾ ನೀಡಲಾಗಿರುತ್ತದೆ. ಇದಕ್ಕಾಗಿ ಕಂಪನಿಯು ವಿಕಿಪೀಡಿಯಾದೊಂದಿಗೆ ಕೆಲಸ ಮಾಡುತ್ತಿದೆ. ಅದರಲ್ಲಿ ನೀಡಲಾದ ಮಾಹಿತಿಯ Up to date ವೆರಿಫಿಕೆಶನ್ ಮತ್ತು ಮೂಲ ಮಾಹಿತಿಯಾಗಿರುತ್ತದೆ.
ಈ ವೆಬ್ಸೈಟ್ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು Google ತಿಳಿಸುತ್ತದೆ. ಅಲ್ಲದೆ, ನೀವು ಓದಲು ಬಯಸುವ ಲಿಂಕ್ ಗೆ ಹಣ ಪಾವತಿಸಬೇಕೆ ಇಲ್ಲವೇ ಎಂಬುದ ನ್ನು ಕೂಡಾ ತಿಳಿಸುತ್ತದೆ.
ವಿಕಿಪೀಡಿಯಾದಲ್ಲಿ ಯಾವ ವೆಬ್ ಸೈಟ್ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲವೋ, ಗೂಗಲ್ ಇದರ ಬಗ್ಗೆ ಬೇರೆ ಮಾಹಿತಿಯನ್ನು ಒದಗಿಸುತ್ತದೆ. ಗೂಗಲ್ ಮೊದಲು ಈ ವೆಬ್ಸೈಟ್ ಅನ್ನು ಯಾವಾಗ ಸೂಚಿಸಿತ್ತು. ಈ ವೆಬ್ಸೈಟ್ ಹೇಗೆ ಡಿಸ್ಕ್ರೈಬ್ ಮಾಡಿಕೊಳ್ಳುತ್ತದೆ. ಈ ವೆಬ್ಸೈಟ್ ಬಗ್ಗೆ ಇತರ ಮೂಲಗಳು ಏನು ಹೇಳುತ್ತವೆ ಎನ್ನುವುದನ್ನು ತಿಳಿಸುತ್ತದೆ.
ನೀವು ಆರೋಗ್ಯ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುತ್ತಿದ್ದರೆ, ಅದು ನಿಮಗೆ ತುಂಬಾ ಉಪಯುಕ್ತವಾಗಿದೆ.