ಪ್ರಸ್ತುತ, ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯೆಂದರೆ, ಲ್ಯಾಪ್ಟಾಪ್ ಅಥವಾ ಕಂಪ್ಯೂಟರಿನ ಸ್ಪೀಡ್ ನಿಧಾನವಾಗುವುದು.
ನವದೆಹಲಿ : ಪ್ರಸ್ತುತ, ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯೆಂದರೆ, ಲ್ಯಾಪ್ಟಾಪ್ ಅಥವಾ ಕಂಪ್ಯೂಟರಿನ ಸ್ಪೀಡ್ ನಿಧಾನವಾಗುವುದು. ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇಂಥ ಸಮಸ್ಯೆಗಳು ಎದುರಾದಾಗ ನಿಮಗೆ ಐಟಿ ತಂಡ ಸಹಾಯಕ್ಕೆ ಬರುತ್ತದೆ. ಆದರೆ ಮನೆಯಲ್ಲಿ ಈ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನಿಮ್ಮ ಕಂಪ್ಯೂಟರ್ ಸಾಕಷ್ಟು ಹಳೆಯದಾಗಿದ್ದರೆ, ಅದರ ವೇಗವನ್ನು ಹೆಚ್ಚಿಸಲು ಹಾರ್ಡ್ ವೇರ್ ಅನ್ನು ಬದಲಾಯಿಸಬೇಕಾಗುತ್ತದೆ. ಇದಕ್ಕಾಗಿ, ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ನ RAM ಅನ್ನು ಕೂಡಾ ಹೆಚ್ಚಿಸಬೇಕಾಗಬಹುದು. ಇದಲ್ಲದೆ, ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಮ್ ಅನ್ನು ಕೂಡಾ ಪರಿಶೀಲಿಸಬೇಕಾಗುತ್ತದೆ.
ಎಷ್ಟೋ ಸಲ ಸಮಯ ಉಳಿಸುವ ಸಲುವಾಗಿ ಅಥವಾ, ಫೈಲ್ ಗಳನ್ನು ಮತ್ತೆ ಓಪನ್ ಮಾಡಬೇಕಾಗುತ್ತದೆ ಎಂಬ ಸೋಮಾರಿತನದಿಂದಾಗಿ ಸಿಸ್ಟಮ್ ಅನ್ನು ರಿಸ್ಟಾರ್ಟ್ ಮಾಡುವುದೇ ಇಲ್ಲ. ಹೀಗೆ ಮಾಡಿದರೆ ಸಿಸ್ಟಮ್ ನ ಸ್ಪೀಡ್ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಅನ್ನು ರೀಸ್ಟಾರ್ಟ್ ಮಾಡುತ್ತಿರಿ.
ಆಪರೇಟಿಂಗ್ ಸಿಸ್ಟಮ್ ಅನ್ನುupdate ಮಾಡುವ ಮೆಸೇಜ್ ಅಥವಾ ನೊಟಿಫಿಕೇಶನ್ ಅನ್ನು ನಿರ್ಲಕ್ಷಿಸಬೆಡಿ. ಸಮಯಕ್ಕೆ ಸರಿಯಾಗಿ ಸಿಸ್ಟಮ್ update ಆಗುತ್ತಿರಲಿ.
ನಾವು ಬಳಸದೇ ಇರುವ ಕೆಲ ಸಾಫ್ಟ್ ವೇರ್ ಗಳನ್ನು ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಇಟ್ಟುಕೊಂಡಿರುತ್ತೇವೆ. ಯಾವ ಸಾಫ್ಟ್ ವೇರ್ ಅನ್ನು ನಾವು ಬಳಸುವುದಿಲ್ಲವೋ ಅದನ್ನು ಸಿಸ್ಟಮ್ ನಿಂದ ಡಿಲೀಟ್ ಮಾಡಿಕೊಳ್ಳಿ.
ಲ್ಯಾಪ್ಟಾಪ್ ಅಥವಾ ಪಿಸಿಯಲ್ಲಿ ಸ್ಟಾರ್ಟ್ ಬಟನ್ ಮೇಲೆ ರೈಟ್ ಕ್ಲಿಕ್ ಮಾಡಿ. ಇದರ ನಂತರ, ರನ್ ಆಯ್ಕೆಮಾಡಿ. ಸರ್ಚ್ ಬಾಕ್ಸ್ ತೆರೆಯುತ್ತದೆ. ಇದನ್ನು% temp% ಮಾಡಿಕೊಳ್ಳಿ. ಈಗ ಕೆಲವು ಫೈಲ್ಗಳು ತೆರೆದುಕೊಳ್ಳುತ್ತವೆ. ಇಲ್ಲಿ ಉಪಯೋಗವಿಲ್ಲದ ಫೈಲ್ ಗಳನ್ನು ಸೆಲೆಕ್ಟ್ ಮಾಡಿ ಡಿಲೀಟ್ ಮಾಡಿ. ಸಾಧ್ಯವಾದರೆ ಎಲ್ಲಾ ಫೈಲ್ ಗಳನ್ನು ಡಿಲೀಟ್ ಮಾಡಬಹುದು.