ನವದೆಹಲಿ : ವಿಮಾನ (Flight) ಭರ ಭರನೆ ಟೇಕಾಫ್ ಆಗಿ, ಫಟಾಪಟ್ ಲ್ಯಾಂಡ್ ಆಗುವುದನ್ನು ನೀವು ನೋಡಿಯೇ ಇರುತ್ತೀರಿ. ವಿಮಾನದ ರೀತಿಯಲ್ಲಿ ಲ್ಯಾಂಡ್ ಆಗಲು ಯಾರಿಗೂ ಸಾಧ್ಯವಿಲ್ಲ. ಹಾಗಂದುಕೊಳ್ಳಬೇಡಿ..! ವಿಮಾನದಂತೆ ಲ್ಯಾಂಡ್ ಆಗಲೂ ಹಕ್ಕಿಗಳಿಗೆ ಸಾಧ್ಯವಿದೆ.
ಹಕ್ಕಿಗಳನ್ನು ನೋಡಿಯೇ ಮನುಷ್ಯ ಹಾರಲು ಕಲಿತ.!
ಹಕ್ಕಿಗಳನ್ನು (Birds) ನಕಲು ಮಾಡಿಯೇ ಮನುಷ್ಯ ವಿಮಾನ ರೂಪಿಸಿದ. ಅವುಗಳಂತೆ ಹಾರಲು ಕಲಿತ. ಇದು ನಿಮಗೆ ಗೊತ್ತಿದೆ. ಆದರೆ, ಇಲ್ಲೊಂದು ವೈರಲ್ ವಿಡಿಯೋ (Viral Video) ಇದೆ. ಅದನ್ನು ನೋಡಿದಾಗ, ಹಕ್ಕಿಗಳ ನಕಲು ಮಾಡಿಯೇ ಮನುಷ್ಯ ವಿಮಾನ ಲ್ಯಾಂಡ್ (flight land) ಮಾಡಲು ಕಲಿತನೋ ಎಂಬ ಪ್ರಶ್ನೆ ಮೂಡುತ್ತದೆ. ನೀವು ಮೊದಲು ಆ ವಿಡಿಯೋ ನೋಡಿ.
It’s not only plane that sometimes does belly landing pic.twitter.com/3fs2Qsu2Ni
— Susanta Nanda IFS (@susantananda3) May 11, 2021
ಇದನ್ನೂ ಓದಿ : ಕೊಳ್ಳದಲ್ಲಿ ಹುಲಿರಾಯರ ಪಟಾಲಮ್ ಮತ್ತು ಹನುಮಂತರಾಯರ ಡೇಂಜರಸ್ ಗೇಂ..!
ಇದೊಂದು ವೈರಲ್ ವಿಡಿಯೋ. ಇಲ್ಲಿ ಹಕ್ಕಿಯೊಂದು ಲ್ಯಾಂಡ್ ಆಗುವ ವಿಧಾನ ಬಲು ರೋಚಕವಾಗಿದೆ. ಸುಯ್ಯಂನೇ ಹಾರಿ ಬಂದ ಈ ಹಕ್ಕಿ, ನೀರನ್ನು ಮುಟ್ಟಿ ರನ್ ವೇನಲ್ಲಿ (run way) ವಿಮಾನ ಓಡಿದಂತೆ ಓಡಿ ಒಂದು ನಿರ್ದಿಷ್ಟ ಜಾಗದಲ್ಲಿ ಲ್ಯಾಂಡ್ ಆಗಿ ಬಿಡುತ್ತದೆ. ಈ ಹಕ್ಕಿಗಳನ್ನು ನಕಲು ಮಾಡಿಯೇ ಮನುಷ್ಯ ವಿಮಾನ ಲ್ಯಾಂಡಿಂಗ್ ಮಾಡಲು ಕಲಿತಿರಬಹುದು ಎಂಬ ಅನುಮಾನ ನಿಮ್ಮಲ್ಲಿ ಮೂಡಿದರೂ ತಪ್ಪಲ್ಲ. ಈ ಅದ್ಭುತ ದೃಶ್ಯ ಕೆಮೆರಾಗಳಲ್ಲಿ (camera) ಸೆರೆಯಾಗಿದ್ದು ವಿಶೇಷ.
ಬಾತುಕೋಳಿಗಳ ಪಾದ ನೋಡಿ ನೀರಲ್ಲಿ ಡೈವ್ ಮಾಡಿ ತೇಲುವುದನ್ನು ಕಲಿತ. ಮಿಂಚುಳ್ಳಿಗಳ ಮೀನು ಹಿಡಿಯುವ ಸ್ಟ್ರಾಟಜಿ ನೋಡಿ ಅದನ್ನು ಕ್ಷಿಪಣಿಗಳಲ್ಲಿ ಅಳವಡಿಸಿಬಿಟ್ಟ. ಬಹುದೂರ ಹಾರಬಲ್ಲ ಸಣ್ಣ ಪಕ್ಷಿಗಳ ಕ್ಷಮತೆ ಈಗಲೂ ಮನುಷ್ಯನಿಗೆ ಅಧ್ಯಯನ ಯೋಗ್ಯ ವಿಷಯ. ಹಾಗಾಗಿ, ಪರಿಸರವನ್ನು ನೋಡಿ ಖುಷಿ ಪಡಬೇಕು. ಅದನ್ನು ಶೋಷಿಸಲು ಹೋಗಬಾರದು. ಈ ಹಕ್ಕಿಯ ತಾಕತ್ತನ್ನು ಮತ್ತೊಮ್ಮೆ ನೋಡಿ.
ಇದನ್ನೂ ಓದಿ : Desert Rose Tree: ಮರುಭೂಮಿಯಲ್ಲಿ ಅರಳಿ ನಿಂತ ಪುಷ್ಪಗಳು: ಸ್ವರ್ಗವೇ ಧರೆಗಿಳಿದಂಥಹ ನೋಟ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.