ಅಕ್ಷಯ ತೃತೀಯದ ದಿನ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ; ಲಕ್ಷ್ಮೀ ಮುನಿದುಕೊಳ್ಳುತ್ತಾಳೆ

ಅಕ್ಷಯ ತೃತೀಯ ದಿನಕ್ಕೆ ಬಹಳ ಮಹತ್ವವಿದೆ. ಈ ದಿನ ತಪ್ಪಿಯೂ ಕೆಲ ಕೆಲಸಗಳನ್ನು ಮಾಡಲು ಹೋಗಬೇಡಿ. ಇಲ್ಲವಾದರೆ ಲಕ್ಷ್ಮೀ ಮುನಿಸಿಕೊಳ್ಳುತ್ತಾಳೆ. ಲಕ್ಷ್ಮೀ ಮುನಿಯುವುದು ಅಂದರೆ, ಹಣದ ಅಭಾವ ಎದುರಿಸುವುದು ಎಂದರ್ಥ.. 

ನವದೆಹಲಿ : ವೈಶಾಖ ಮಾಸದ ಶುಕ್ಷ ಪಕ್ಷದ ತೃತೀಯ ತಿಥಿಯನ್ನು ಅಕ್ಷಯ ತೃತೀಯ ಎಂದು ಆಚರಿಸಲಾಗುತ್ತದೆ. ಈ ಬಾರಿ ಮೇ 14ರಂದು ಅಕ್ಷಯ ತೃತೀಯದ ಹಬ್ಬ ಬಂದಿದೆ. ಹಿಂದೂ ಪಂಚಾಂಗದ ಪ್ರಕಾರ ಅಕ್ಷಯ ತೃತೀಯವನ್ನು ವರ್ಷದ ಅತ್ಯಂತ ಶುಭ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಯಾವುದೇ ಶುಭ ಕಾರ್ಯ ಮಾಡಲು ಪಂಚಾಂಗ ನೋಡುವ ಅಗತ್ಯವಿರುವುದಿಲ್ಲ. ಈ ದಿನ ಮಹಾ ಲಕ್ಷ್ಮೀಗೆ ಪೂಜೆ ಆರತಿ ಸಲ್ಲಿಸಲಾಗುತ್ತದೆ. ಈ ಮೂಲಕ ವರ್ಷ ಪೂರ್ತಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಅಕ್ಷಯ ತೃತೀಯದ ದಿನ ಕೆಲವೊಂದು ಕೆಲಸಗಳನ್ನು ಮಾಡುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ಕೆಲಸಗಳನ್ನು ಮಾಡಿದರೆ ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ.  ಹಾಗಾಗಿ ಅಕ್ಷಯ ತೃತೀಯದ ದಿನ ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಎಂಬುದನ್ನು ನಾವು ಹೇಳುತ್ತೇವೆ..  

2 /6

ಮನೆ ಶುಚಿಯಾಗಿರಬೇಕು.  ಲಕ್ಷ್ಮೀ ದೇವಿ ಸ್ವಚ್ಛತೆಯನ್ನು ಬಹಳವಾಗಿ ಇಷ್ಟಪಡುತ್ತಾಳೆ. ಎಲ್ಲಿ ಸ್ವಚ್ಛತೆ ಇರುವುದಿಲ್ಲವೋ ಅಲ್ಲಿ ಲಕ್ಷ್ಮೀ ವಾಸವಿರುವುದಿಲ್ಲ. ಹಾಗಾಗಿ ಈ ದಿನ ಪೂಜೆಗೆ ಮಹತ್ವ ನೀಡುವಂತೆ ಮನೆಯ ಸ್ವಚ್ಛತೆಯ ಬಗ್ಗೆಯೂ ಗಮನವಿರಲಿ. ಪೂಜಾ ಸ್ಥಳ ಶುಚಿಯಾಗಿರುವುದು ಬಹಳ ಮುಖ್ಯ.   

3 /6

ಈ ದಿನ ಮನೆಯಲ್ಲಿ ಎಲ್ಲರೂ ಸಾಧ್ಯವಾದಷ್ಟು ಪ್ರೀತಿ ಪ್ರೇಮದಿಂದ ಇರಿ. ಕಿರುಚಾಡುವುದು ಅರುಚಾಡುವುದು ಜಗಳವಾಡುವುದು ಇಂತಹ ಕೆಲಸಗಳಿಗೆ ಆಸ್ಪದ ನೀಡಬೇಡಿ. ಮನೆಯಲ್ಲಿ ಕ್ಲೇಷ ಇದ್ದರೆ ಅಲ್ಲಿಯೂ ಲಕ್ಷ್ಮೀ ನೆಲೆಸುವುದಿಲ್ಲ.  

4 /6

ಭಗವಾನ್ ವಿಷ್ಣುವಿಗೆ ತುಳಸಿ ಎಂದರೆ ಅತ್ಯಂತ ಪ್ರಿಯೆ. ಹಲವೆಡೆ ಅಕ್ಷಯ ತೃತೀಯದ ದಿನ ತುಳಸೀಗೆ ಪೂಜೆ ಸಲ್ಲಿಸಲಾಗುತ್ತದೆ. ಹಾಗಾಗಿ ಅಕ್ಷಯ ತೃತೀಯದ ದಿನ ಸ್ನಾನ ಮಾಡದೆ ತುಳಸಿಯನ್ನು ಮುಟ್ಟಬೇಡಿ. ಅಕ್ಷಯ ತೃತೀಯದ ದಿನ ತುಳಸಿಯ ಎಲೆಯನ್ನು ಕೂಡಾ ಮುರಿಯಬಾರದು.   

5 /6

ಅಕ್ಷಯ ತೃತೀಯ ಬಹಳ ಶುಭ ದಿನ. ಈ ದಿನ ನೀವು ಹೊಸ ಮನೆಯನ್ನು ಖರೀದಿಸಬಹುದು. ಆದರೆ ನೆನಪಿಡಿ, ಈ ದಿನದಂದು ಹೊಸ ಮನೆ ನಿರ್ಮಾಣ ಕಾರ್ಯ ಆರಂಭಿಸಬೇಡಿ. ಅಂದರೆ ಈ ದಿನ ಭೂಮಿ ಅಗೆಯುವ ಕೆಲಸ ಮಾಡಬೇಡಿ

6 /6

ಅಕ್ಷಯ ತೃತೀಯದ ದಿನ ಮಾಂಸಾಹಾರ ಮದ್ಯಪಾನ ನಿಷೇಧ. ಅಲ್ಲದೆ ಈ ದಿನ ಆಹಾರದಲ್ಲಿ ನೀರುಳ್ಳಿ, ಬೆಳ್ಳುಳ್ಳಿಯ ಸೇವನೆ ಕೂಡಾ ಬೇಡ.