Coronavirus: ಭಾರತದ ಕರೋನಾ ಪರಿಸ್ಥಿತಿ ಬಗ್ಗೆ WHO ವಿಜ್ಞಾನಿ ಕಳವಳ

ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಭಾರತದ ಕರೋನಾ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಭಾರತದಲ್ಲಿ ಪರಿಸ್ಥಿತಿಗಳು ಉತ್ತಮವಾಗಿಲ್ಲ, ಕೋವಿಡ್ -19 ರ ಸರಿಯಾದ ಅಂಕಿಅಂಶಗಳನ್ನು ತೋರಿಸುವುದು ಅವಶ್ಯಕವಾಗಿದೆ ಎಂದಿದ್ದಾರೆ.

Written by - Yashaswini V | Last Updated : May 11, 2021, 09:19 AM IST
  • ಭಾರತದಲ್ಲಿ ಕೋವಿಡ್ -19 ರ ಅಂಕಿಅಂಶಗಳು ದಿನೇ ದಿನೇ ಆತಂಕಕಾರಿಯಾಗುತ್ತಿದೆ ಮತ್ತು ಸರ್ಕಾರವು ಸರಿಯಾದ ಅಂಕಿಅಂಶಗಳನ್ನು ಮರೆಮಾಡಬಾರದು- WHO
  • ಭಾರತದಲ್ಲಿ ರೂಪಾಂತರದ ಹರಡುವಿಕೆ, ಅದು ಉಂಟುಮಾಡುವ ರೋಗದ ತೀವ್ರತೆಯನ್ನು ಪರೀಕ್ಷಿಸಲು ಅಧ್ಯಯನಗಳು ನಡೆಯುತ್ತಿವೆ- WHO ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್
  • ಡಬ್ಲ್ಯುಎಚ್‌ಒ ವಿಜ್ಞಾನಿ ಭಾರತದ ವಿವಿಧ ಭಾಗಗಳಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಪೂರ್ಣ ಚಿತ್ರವನ್ನು ಪಡೆಯಲು ಭಾರತದಲ್ಲಿ ಹೆಚ್ಚಿನ ಜೀನೋಮ್ ಅನುಕ್ರಮಣಿಸಲು ಕರೆ ನೀಡಿದರು
Coronavirus: ಭಾರತದ ಕರೋನಾ ಪರಿಸ್ಥಿತಿ ಬಗ್ಗೆ WHO ವಿಜ್ಞಾನಿ ಕಳವಳ title=
WHO Chief Scientist Soumya Swaminathan

ಜಿನೀವಾ: Corona Virus In India- ಭಾರತವು COVID-19 ರ ವಿನಾಶಕಾರಿ ಎರಡನೇ ಅಲೆಯ ಹಿಡಿತದಲ್ಲಿರುವುದರಿಂದ, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್, ಭಾರತದಲ್ಲಿ ಕರೋನಾ ಸೋಂಕು ಮತ್ತು ಸಾವಿನ ಪ್ರಮಾಣವನ್ನು "ಚಿಂತಾಜನಕ" ಎಂದು ಬಣ್ಣಿಸಿದ್ದಾರೆ.  ಭಾರತದಲ್ಲಿ ಕೋವಿಡ್ -19 ರ ಅಂಕಿಅಂಶಗಳು ದಿನೇ ದಿನೇ ಆತಂಕಕಾರಿಯಾಗುತ್ತಿದೆ ಮತ್ತು ಸರ್ಕಾರವು ಸರಿಯಾದ ಅಂಕಿಅಂಶಗಳನ್ನು ಮರೆಮಾಡಬಾರದು ಎಂದವರು ತಿಳಿಸಿದ್ದಾರೆ.

ಕರೋನಾ ಸೋಂಕಿನ ಅಂಕಿಅಂಶಗಳನ್ನು ಮರೆಮಾಡಬಾರದು:
ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಎವಲ್ಯುವೇಶನ್ (ಐಎಚ್‌ಎಂಇ) ಪ್ರಸ್ತುತ ಅಂಕಿಅಂಶಗಳ ಆಧಾರದ ಮೇಲೆ ಆಗಸ್ಟ್ ವೇಳೆಗೆ ದೇಶದಲ್ಲಿ ಸುಮಾರು 1 ಮಿಲಿಯನ್ ಜನರು ಭಾರತದಲ್ಲಿ ಕೋವಿಡ್ -19 (Covid-19 in India) ಗೆ ಬಲಿಯಾಗಬಹುದು ಎಂದು ಅಂದಾಜು ಮಾಡಿದೆ, ಆದರೆ ಇದು ಮತ್ತಷ್ಟು ಹೆಚ್ಚಾಗಬಹುದು. ಭಾರತ ಮತ್ತು ದಕ್ಷಿಣ ಏಷ್ಯಾದ ಇತರ ದೇಶಗಳಲ್ಲಿ, ಪರಿಸ್ಥಿತಿ ಬಹಳ ಆತಂಕಕಾರಿಯಾಗಿದೆ. ಸರ್ಕಾರಗಳು ಕರೋನಾ ಸೋಂಕಿನ ಅಂಕಿ-ಅಂಶಗಳನ್ನು ಮರೆಮಾಡಬಾರದು ಎಂದು ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಸೌಮ್ಯಾ ಸ್ವಾಮಿನಾಥನ್ ಕರೆ ನೀಡಿದ್ದಾರೆ.

ಇದನ್ನೂ ಓದಿ- Corona Treatment: ಕರೋನಾ ಚಿಕಿತ್ಸೆಗಾಗಿ ಸರ್ಕಾರ ನೀಡುತ್ತಿದೆ 5 ಲಕ್ಷ ರೂಪಾಯಿ, ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ

ಭಾರತ ಮತ್ತು ಆಗ್ನೇಯ ಪ್ರದೇಶದ ಇತರ ದೇಶಗಳಲ್ಲಿ ನಾವು ಇಂದು ನೋಡುತ್ತಿರುವ ಪ್ರಕರಣಗಳು ಮತ್ತು ದೈನಂದಿನ ಸಾವುಗಳ ಸಂಖ್ಯೆ ನಮಗೆ ದೊಡ್ಡ ಕಾಳಜಿಯಾಗಿದೆ. ಪ್ರತಿದಿನ ಸೋಂಕುಗಳು ಮತ್ತು ಸಾವುಗಳ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದೆ. ಈ ಎಲ್ಲಾ ದೇಶಗಳು ಕಡಿಮೆ ಅಂಕಿಅಂಶಗಳನ್ನು ತೋರಿಸಿವೆ. ನಿಜವಾದ ಸಂಖ್ಯೆ ಬೇರೆಯೇ ಇದೇ ಎಂಬುದಕ್ಕೆ ಈ ದೇಶಗಳ ಪರಿಸ್ಥಿತಿಯೇ ಸ್ಪಷ್ಟ ಉದಾಹರಣೆಯಾಗಿದೆ. ಸರ್ಕಾರ ನಿಜವಾದ ಅಂಕಿಅಂಶಗಳನ್ನು ತೋರಿಸಬೇಕು ಎಂದು ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ.

ಕಳೆದ ವರ್ಷ ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕರೋನವೈರಸ್ ರೂಪಾಂತರವನ್ನು ಜಾಗತಿಕ ಕಾಳಜಿಯ ರೂಪಾಂತರವೆಂದು ವರ್ಗೀಕರಿಸಲಾಗುತ್ತಿದೆ ಎಂದು ಡಬ್ಲ್ಯುಎಚ್‌ಒ (WHO) ಸೋಮವಾರ ಹೇಳಿದೆ. ಕೆಲವು ಪ್ರಾಥಮಿಕ ಅಧ್ಯಯನಗಳು ಇದು ಹೆಚ್ಚು ಸುಲಭವಾಗಿ ಹರಡುತ್ತದೆ ಎಂದು ತೋರಿಸುತ್ತದೆ. ನಾವು ಇದನ್ನು ಜಾಗತಿಕ ಮಟ್ಟದಲ್ಲಿ ಕಾಳಜಿಯ ರೂಪಾಂತರವೆಂದು ವರ್ಗೀಕರಿಸುತ್ತಿದ್ದೇವೆ ಎಂದು COVID-19 ನಲ್ಲಿ WHO  ಮಾರಿಯಾ ವ್ಯಾನ್ ಕೆರ್ಖೋವ್ ಬ್ರೀಫಿಂಗ್‌ನಲ್ಲಿ ತಿಳಿಸಿದರು.

ಬಿ .1.617 ರೂಪಾಂತರವು "ಜಾಗತಿಕ ಕಾಳಜಿ" ಎಂದು ಗೊತ್ತುಪಡಿಸಿದ ನಾಲ್ಕನೇ ರೂಪಾಂತರವಾಗಿದೆ ಮತ್ತು ಹೆಚ್ಚಿನ ಟ್ರ್ಯಾಕಿಂಗ್ ಮತ್ತು ವಿಶ್ಲೇಷಣೆ ಮತ್ತು ದತ್ತಾಂಶ ಸಂಗ್ರಹಣೆಯ ಅಗತ್ಯವನ್ನು ಪಾರದರ್ಶಕ ರೀತಿಯಲ್ಲಿ ಮಾಡಬೇಕು ಎಂದು ಡಬ್ಲ್ಯೂಎಚ್ಒ ತಿಳಿಸಿದೆ.

ಇದನ್ನೂ ಓದಿ-  Covid precautions: ಕರೋನಾ ತಪ್ಪಿಸಲು ಆಯುಷ್ ಸಚಿವಾಲಯದ ಈ ಮುನ್ನೆಚ್ಚರಿಕಾ ಕ್ರಮ ಅನುಸರಿಸಿ

ಕರೋನಾವೈರಸ್ (Coronavirus) ರೂಪಾಂತರಕ್ಕೆ ಸಂಬಂಧಿಸಿದಂತೆ ನಾವು ಜಾಗೃತರಾಗಿರಬೇಕು. ಏಕೆಂದರೆ ಉತ್ತಮ ದತ್ತಾಂಶ, ಉತ್ತಮ ನೀತಿಗಳನ್ನು ಏನು ನಡೆಯುತ್ತಿದೆ ಎಂಬುದರ ಕಡೆಗೆ ನಿರ್ದೇಶಿಸಬಹುದು. ನೆನಪಿಡಿ, ಜನರು ಕೇವಲ COVID ಯಿಂದ ಸಾಯುತ್ತಿಲ್ಲ, ಜನರು ಇತರ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ಹಲವರಿಗೆ ಅಗತ್ಯ ಆರೋಗ್ಯ ಸೇವೆಗಳು ಲಭ್ಯವಾಗುತ್ತಿಲ್ಲ ಎಂದು ಡಾ. ಸೌಮ್ಯ ಸ್ವಾಮಿನಾಥನ್ ಪ್ರತಿಪಾದಿಸಿದರು.

ಭಾರತದಲ್ಲಿ ರೂಪಾಂತರದ ಹರಡುವಿಕೆ, ಅದು ಉಂಟುಮಾಡುವ ರೋಗದ ತೀವ್ರತೆ ಮತ್ತು ಲಸಿಕೆ ಹಾಕಿದ ಜನರಲ್ಲಿ ಪ್ರತಿಕಾಯಗಳ ಪ್ರತಿಕ್ರಿಯೆ ಪರೀಕ್ಷಿಸಲು ಅಧ್ಯಯನಗಳು ನಡೆಯುತ್ತಿವೆ. ಡಬ್ಲ್ಯುಎಚ್‌ಒ ವಿಜ್ಞಾನಿ ಭಾರತದಲ್ಲಿ ಹೆಚ್ಚು ಜೀನೋಮ್ ಸೀಕ್ವೆನ್ಸಿಂಗ್‌ಗೆ ದೇಶದ ವಿವಿಧ ಭಾಗಗಳಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಕ್ಲಿನಿಕಲ್ ಎಪಿಡೆಮಿಯೋಲಾಜಿಕಲ್ ಅಧ್ಯಯನಗಳೊಂದಿಗೆ ಸಂಪೂರ್ಣ ಚಿತ್ರಣವನ್ನು ಪಡೆಯಬೇಕೆಂದು ಕರೆ ನೀಡಲಾಗಿದೆ ಎಂದು ಸೌಮ್ಯಾ ಸ್ವಾಮಿನಾಥನ್ ಹೇಳಿದರು.

ಡಬಲ್ ರೂಪಾಂತರಿತ - ಬಿ .1.617 - ಹೆಚ್ಚು ಹರಡಬಲ್ಲದು ಮತ್ತು ಡಬ್ಲ್ಯುಎಚ್‌ಒ ಸಮಿತಿಯು ಇದನ್ನು 'ಕಾಳಜಿಯ ರೂಪಾಂತರ' ಎಂದು ವರ್ಗೀಕರಿಸಿದೆ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News