ನವದೆಹಲಿ : ಪ್ರಪಂಚದಾದ್ಯಂತ ಇಂತಹ ಅನೇಕ ಘಟನೆಗಳು ನಡೆದಿವೆ. ಕೆಲ ಘಟನೆಗಳನ್ನು ನಂಬುವುದು ಕಷ್ಟ. ಯಾಕೆಂದರೆ ಈ ಘಟನೆಗಳು ಶತಮಾನದಿಂದ ರಹಸ್ಯವಾಗಿಯೇ ಉಳಿದಿವೆ. ಇವತ್ತು ನಾವು ಹೇಳುತ್ತಿರುವುದ ಕೂಡಾ ಅಂಥದ್ದೇ ಇಂದು ನಿಗೂಢ ರಹಸ್ಯದ ಬಗ್ಗೆ. ಈ ಘಟನೆ ನಡೆದದ್ದು 2016 ರಲ್ಲಿ ಈಜಿಪ್ಟ್ ನಲ್ಲಿ (Egypt). ಘಟನೆ ನಡೆದು ಇಷ್ಟು ವರ್ಷಗಳೇ ಕಳೆದರೂ ಇನ್ನೂ ಇದರ ರಹಸ್ಯ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇನ್ನೇನು ಲ್ಯಾಂಡಿಂಗ್ ಆಗಬೇಕು ಎನ್ನುವಷ್ಟರಲ್ಲಿ ವಿಮಾನವೇ (Airplane) ಕಣ್ಮರೆಯಾದ ಘಟನೆ ಅದು.
ಆಕಾಶದಲ್ಲೇ ವಿಮಾಣ ಕಳೆದುಹೋದ ರಹಸ್ಯ :
ಈಜಿಪ್ಟಿನ ಏರ್ಲೈನ್ಸ್ (Egypt Airlines) ಏರ್ಬಸ್ -320 (Airbus-320) ಈಜಿಪ್ಟಿನ ಕೈರೋ ವಿಮಾನ ನಿಲ್ದಾಣ (Cairo Airport) ತಲುಪಬೇಕಾಗಿತ್ತು. ಇದು ವಿಶ್ವದ ಅತ್ಯಂತ ಆಧುನಿಕ ವಿಮಾನ ನಿಲ್ದಾಣದಲ್ಲಿ (Most Modern Airport) ಸೇರಿದೆ. ಈ ವಿಮಾನದಲ್ಲಿ ಒಟ್ಟು 66 ಪ್ರಯಾಣಿಕರಿದ್ದರು. ಇನ್ನೇನು ಲ್ಯಾಂಡಿಂಗ್ ಗೆ ಕೇವಲ 20 ನಿಮಿಷಗಳಷ್ಟೇ ಬಾಕಿಯಿತ್ತು. ಆದರೆ, ಅರೆ ಕ್ಷಣದಲ್ಲಿ ಆ ವಿಮಾನ ಎಲ್ಲಿ ಹೋಯಿತು ಎಂಬುದೇ ತಿಳಿಯದಾಯಿತು. ಈ ರಹಸ್ಯ ಘಟನೆಯ (Weird Incident) ಬಗ್ಗೆ ಇಲ್ಲಿಯವರೆಗೆ ಯಾರಿಗೂ ಯಾವ ಸುಳಿವೂ ಸಿಕ್ಕಿಲ್ಲ. ವಿಮಾನ ಅಪಘಾತಕ್ಕೆ ಈಡಾಯಿತು ಎಂದರೆ ಇಲ್ಲಿವರೆಗೆ ಈ ವಿಮಾನದ ಭಗ್ನಾವಶೇಷ ಸಿಕ್ಕಿಲ್ಲ. ಅಲ್ಲದೆ ಈ ವಿಮಾನದಲ್ಲಿದ್ದ (Flight) ಯಾತ್ರಿಗಳ ಮೃತದೇಹವೂ ಸಿಕ್ಕಿಲ್ಲ.
ಇದನ್ನೂ ಓದಿ : ಪ್ರಧಾನಿ ಮೋದಿಗೆ ನೆರವಿನ ಸಂದೇಶ ರವಾನಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್
ಅದು ಕೇವಲ 4 ಗಂಟೆಗಳ ಪ್ರಯಾಣವಾಗಿತ್ತು :
ಈಜಿಪ್ಟ್ ಏರ್ಲೈನ್ಸ್ನ ಪ್ರಯಾಣಿಕರ ವಿಮಾನ ಏರ್ಬಸ್ -320, ಪ್ಯಾರಿಸ್ ನಿಂದ (Paris) 18 ಮೇ 2016 ರಂದು ಈಜಿಪ್ಟ್ನ ಕೈರೋ ನಗರಕ್ಕೆ ಹಾರರಾಟ ನಡೆಸಿತ್ತು. ಇದು 4 ಗಂಟೆಗಳ ಪ್ರಯಾಣದ ಅವಧಿ. ಆದರೆ 3 ಗಂಟೆ 40 ನಿಮಿಷಗಳ ಹಾರಾಟದ ನಂತರ, ಈ ವಿಮಾನವು ಆಕಾಶದಲ್ಲಿ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ಅದನ್ನು ಸಂಪರ್ಕಿಸುವ ಎಲ್ಲಾ ಪ್ರಯತ್ನವೂ ವಿಫಲವಾಯಿತು. ಒಂದು ಹಂತದಲ್ಲಿ ವಿಮಾನವನ್ನು ಅಪಹರಿಸಿರಬಹುದು (Flight Hijack) ಅಥವಾ ಅಪಘಾತ (Accident) ಸಂಭವಿಸಿರಬಹುದು ಎಂದು ಕೂಡಾ ಊಹಿಸಲಾಗಿತ್ತು, ಆದರೆ ಇದಕ್ಕೂ ಇಲ್ಲಿವರೆಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ.
ಈ 10 ಜನ ಸಿಬ್ಬಂದಿ, 56 ಮಂದಿ ಪ್ರಯಾಣಿಕರು ಸೇರಿ 66 ಜನ ಪ್ರಯಾಣಿಸುತ್ತಿದ್ದರು.
ಇದನ್ನೂ ಓದಿ : Desert Rose Tree: ಮರುಭೂಮಿಯಲ್ಲಿ ಅರಳಿ ನಿಂತ ಪುಷ್ಪಗಳು: ಸ್ವರ್ಗವೇ ಧರೆಗಿಳಿದಂಥಹ ನೋಟ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.