ನವದೆಹಲಿ: Coronavirus - ಕೊರೊನಾ ವ್ಯಾಕ್ಸಿನ್ ತಯಾರಕ ಕಂಪನಿ ಭಾರತ್ ಬಯೋಟೆಕ್ (Bharat Biotech) ಕಂಪನಿ ತನ್ನ ಕೊರೊನಾ ಲಸಿಕೆಯಾಗಿರುವ ಕೊವ್ಯಾಕ್ಸಿನ್ (Covaxin) ದರ ಇಳಿಕೆ ಮಾಡಿರುವುದಾಗಿ ಘೋಷಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ ರಾಜ್ಯಸರ್ಕಾರಗಳಿಗೆ ಕೊವ್ಯಾಕ್ಸಿನ್ ವ್ಯಾಕ್ಸಿನ್ ನ ಒಂದು ಡೋಸ್ 400 ರೂ.ಗಳಿಗೆ ನೀಡಲಾಗುವುದು ಎಂದಿದೆ.
ಇದಕ್ಕೂ ಮೊದಲು ಇದಾಗಿತ್ತು ಕೊವ್ಯಾಕ್ಸಿನ್ ದರ
ಇದಕ್ಕೂ ಮೊದಲು ಹೇಳಿಕೆ ಬಿಡುಗಡೆ ಮಾಡಿದ್ದ ಭಾರತ್ ಬಯೋಟೆಕ್ ಕಂಪನಿ ರಾಜ್ಯಸರ್ಕಾರಗಳಿಗೆ ರೂ.600 ಪ್ರತಿ ಡೋಸ್ ವ್ಯಾಕ್ಸಿನ್ ನೀಡುವುದಾಗಿ ಹೇಳಿತ್ತು. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳಿಗೆ ರೂ.1200 ಪ್ರತಿ ಡೋಸ್ (Corona Vaccine) ನೀಡುವುದಾಗಿಯೂ ಕೂಡ ಹೇಳಿತ್ತು.
ಇದನ್ನೂ ಓದಿ- Coronavirus: ನಾಳೆ ಬೆಳಗ್ಗೆ 11 ಗಂಟೆಗೆ ಸಂಪುಟ ಸಭೆ ಕರೆದ ಪ್ರಧಾನಿ ಮೋದಿ, ಮಹತ್ವದ ನಿರ್ಣಯ ಸಾಧ್ಯತೆ
ಪ್ರೆಸ್ ರಿಲೀಸ್
ಎಲ್ಲಕ್ಕಿಂತ ಮೊದಲು ಬೆಲೆ ಇಳಿಕೆ ಮಾಡಿದ ಸಿರಮ್ ಇನ್ಸ್ಟಿಟ್ಯೂಟ್
ಇದಕ್ಕೂ ಮೊದಲು ಏಪ್ರಿಲ್ 28 ರಂದು ಪುಣೆ ಮೂಲದ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ರಾಜ್ಯ ಸರ್ಕಾರಗಳಿಗೆ ನೀಡಲಾಗುವ ಕೋವಿಶೀಲ್ಡ್ ಬೆಲೆಯನ್ನು ಇಳಿಕೆ ಮಾಡಿರುವುದಾಗಿ ಘೋಷಿಸಿತ್ತು. ಈ ಕುರಿತು ಹೇಳಿಕೆ ನೀಡಿದ್ದ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರ ಅದರ್ ಪೂನಾವಾಲಾ, ರಾಜ್ಯ ಸರ್ಕಾರಗಳಿಗೆ ನೀಡಲಾಗುವ ಲಸಿಕೆಯ ಬೆಲೆಯಲ್ಲಿ ರೂ.100 ಇಳಿಕೆ ಮಾಡಿ ಘೋಷಣೆ ಮಾಡಿದ್ದರು. ಅಂದರೆ, ರಾಜ್ಯ ಸರ್ಕಾರಗಳಿಗೆ ಕೊವಿಶಿಲ್ದ್ (Covishield) ಲಸಿಕೆಯನ್ನು ರೂ.400 ಪ್ರತಿ ಪ್ರಮಾಣದ ಬದಲು ರೂ.300 ಪ್ರತಿ ಪ್ರಮಾಣ ನೀಡಲಾಗುವುದು ಎಂದಿದ್ದರು. ಅಧಿಕ ಸಂಖ್ಯೆಯಲ್ಲಿ ಜನರಿಗೆ ವ್ಯಾಕ್ಸಿನ್ ಲಾಭ ಸಿಗುವಂತಾಗಬೇಕು ಎಂಬುದು ಕಂಪನಿಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ- Who Should Not Take Vaccine: ಇಂತಹ ಜನರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬಾರದು! ಕಾರಣ ಇಲ್ಲಿದೆ
ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಈ ಕುರಿತಾದ ಘೋಷಣೆ ಮಾಡಿದ ಅದರ್ ಪೂನಾವಾಲಾ, ' ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಪರವಾಗಿ ಲೋಕೋಪಕಾರದ ಭಾವನೆಯ ಅಡಿ, ರಾಜ್ಯಗಳಿಗೆ ನಿಗದಿಪಡಿಸಿದ ಲಸಿಕೆಯ ಬೆಲೆಯನ್ನು ಪ್ರತಿ ಡೋಸ್‌ಗೆ 400 ರೂ.ಗಳಿಂದ 300 ರೂ.ಗೆ ಇಳಿಸುತ್ತಿದ್ದೇನೆ. ಬೆಲೆಗಳಲ್ಲಿನ ಬದಲಾವಣೆಗಳು ತಕ್ಷಣ ಜಾರಿಗೆ ಬಂದಿವೆ. ಇದು ರಾಜ್ಯ ಸರ್ಕಾರಗಳ ನಿಧಿಯಿಂದ ಕೋಟಿ ಕೋಟಿ ರೂಪಾಯಿ ಹಣ ಉಳಿಸಲಿದೆ ಮತ್ತು ಇದರಿಂದಾಗಿ ಲಸಿಕೆ ಲಾಭ ಹೆಚ್ಚಿನ ಜನರಿಗೆ ತಲುಪಲಿದೆ ಮತ್ತು ಅಸಂಖ್ಯಾತ ಜೀವಗಳು ಉಳಿಯಲಿವೆ' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ- ಕರೋನಾ ಲಸಿಕೆಗೆ ಮೊದಲು ಮತ್ತು ನಂತರ ತಿನ್ನುವ ಆಹಾರ ಹೇಗಿರಬೇಕು..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.