ನವದೆಹಲಿ: Powerful Fiber Broadband Plan - Spectra ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಖಾಸಗಿ ಫೈಬರ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಪೂರೈಕೆದಾರ ಕಂಪನಿಯಾಗಿದೆ. ಪ್ರಸ್ತುತ ಈ ಕಂಪನಿಯು ದೇಶದ ನಾಲ್ಕು ನಗರಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತದೆ. ಅಂದರೆ ದೆಹಲಿ, ನೋಯ್ಡಾ, ಗುರುಗ್ರಾಮ್ ಮತ್ತು ಬೆಂಗಳೂರು ನಗರಗಳಲ್ಲಿ ಈ ಕಂಪನಿ ಇಂಟರ್ನೆಟ್ ಸೇವೆ ನೀಡುತ್ತದೆ. ಸ್ಪೆಕ್ಟ್ರಾ ಸೇವೆಗಳನ್ನು ಉತ್ತಮವಾಗಿ ಪರಿಗಣಿಸಲಾಗುತ್ತದೆ ಮತ್ತು ಕಂಪನಿಯು ತನ್ನ ಗ್ರಾಹಕರಿಗೆ ಅನೇಕ ಸೇವಾ ಯೋಜನೆಗಳನ್ನು ನಡೆಸುತ್ತದೆ. ಇಂದು ನಾವು ಕಂಪನಿಯ 500Mbps ವೇಗ ಸೇವೆಯ ಬಗ್ಗೆ ಹೇಳಲಿದ್ದೇವೆ. ಈ ಕಂಪನಿಯ ಫೈಬರ್ ಇಂಟರ್ನೆಟ್ ಬ್ರಾಡ್ಬ್ಯಾಂಡ್ ಸೇವೆಯು ನಮ್ಮ ದೇಶದ ಅಗ್ಗದ ಹೈಸ್ಪೀಡ್ ಇಂಟರ್ನೆಟ್ ಸೇವೆಯಾಗಿದೆ ಎಂದು ಹೇಳಲಾಗುತ್ತದೆ .
ಕಂಪನಿ ತನ್ನ ಗ್ರಾಹಕರಿಗೆ ನೀಡುತ್ತಿರುವ ಈ ಪ್ಲಾನ್ ಹೈ ಸ್ಪೀಡ್ ಇಂಟರ್ನೆಟ್ (Internet) ಸೆಗ್ಮೆಂಟ್ ನಲ್ಲಿ ಅತ್ಯಂತ ಬೆಸ್ಟ್ ಪ್ಲಾನ್ ಎಂದು ಹೇಳಲಾಗುತ್ತದೆ. ಈ ಪ್ಲಾನ್ ನಲ್ಲಿ ಹೈ ಸ್ಪೀಡ್ ಡೇಟಾ ಸಿಗುತ್ತದೆ. ಅದೂ ಕೇವಲ 1599 ರೂ.ಗಳಲ್ಲಿ ಸಿಗುತ್ತದೆ. ಇಲ್ಲಿ ಗಮನ ನೀಡುವ ಸಂಗತಿ ಎಂದರೆ ಈ ಶುಲ್ಕ ಯಾವುದೇ ತೆರಿಗೆ ಒಳಗೊಂಡಿಲ್ಲ. ಅಂದರೆ, ಟ್ಯಾಕ್ಸ್ ಹಣ ನೀವು ಹೆಚ್ಚುವರಿಯಾಗಿ ನೀಡಬೇಕು. ಕಂಪನಿ ನಿಮಗೆ ಈ ಪ್ಲಾನ್ ನಲ್ಲಿ 750 ಜಿಬಿ ಡೇಟಾ ನೀಡುತ್ತಿದೆ. ಇದಲ್ಲದೆ ಕಂಪನಿ ನಿಮ್ಮಿಂದ ರೂ.1000 ಇನ್ಸ್ಟಾಲೆಶನ್ ಚಾರ್ಜ್ ಕೂಡ ಪಡೆಯುತ್ತದೆ. ಇದಲ್ಲದೆ ನೀವು ರೂ.2000 ರೀಫಂಡೆಬಲ್ ಸಿಕ್ಯೋರಿಟಿ ಡಿಪಾಸಿಟ್ ಕೂಡ ನೀಡಬೇಕು.
ಅರ್ಧವಾರ್ಷಿಕ ಪ್ಲಾನ್
ಒಂದು ವೇಳೆ ನೀವು ಕಂಪನಿಯ 500 Mbps Spectra broadband plan ಪ್ಲಾನ್ ನಲ್ಲಿ ಹೆಚ್ಚುವರಿ ಲಾಭ ಪಡೆಯಲು ಬಯಸುತ್ತಿದ್ದರೆ, ಇದಕ್ಕಾಗಿ ನೀವು ಅರ್ಧ ವಾರ್ಷಿಕ ಪ್ಲಾನ್ ಆಯ್ದುಕೊಳ್ಳಬೇಕು. ಈ ಪ್ಲಾನ್ ಅಡಿ ನಿಮಗೆ ಪ್ರತಿ ತ್ರೈಮಾಸಿಕಕ್ಕಾಗಿ 1500 ಎಂಬಿಪಿಎಸ್ ಡೇಟಾ ಸಿಗುತ್ತಿದೆ ಹಾಗೂ ಈ ಪ್ಲಾನ್ ಅಡಿ ನೀವು ಯಾವುದೇ ಸಿಕ್ಯೋ ರಿಟಿ ಡಿಪಾಸಿಟ್ ಪಾವತಿಸಬೇಕಾದ ಅವಶ್ಯಕತೆ ಕೂಡ ಇಲ್ಲ. ಆದರೆ. ನೀವು ಒಂದೇ ಟೈಮ್ ಇನ್ಸ್ಟಾಲೆಶನ್ ನೀಡಲೇಬೇಕು. ಟ್ಯಾಕ್ಸ್ ಸೇರಿದಂತೆ ಈ 6 ತಿಂಗಳ ಪ್ಲಾನ್ ಗಾಗಿ ನೀವು 12,501 ರೂ. ಪಾವತಿಸಬೇಕು.
ಇದನ್ನೂ ಓದಿ- Vi Cheapest Recharge Plan: ಮತ್ತೆ ಮಾರುಕಟ್ಟೆ ಪ್ರವೇಶಿಸಿದ ಅತ್ಯಂತ ಅಗ್ಗದ ಹಾಗೂ ಪಾಪ್ಯುಲರ್ ರಿಚಾರ್ಜ್ ಪ್ಲಾನ್
ವಾರ್ಷಿಕ ಪ್ಲಾನ್
ಕಂಪನಿಯ ಅನುವಲ್ ಪ್ಲಾನ್ ನಲ್ಲಿ ನಿಮಗೆ ಅನಿಯಮಿತ ಡೇಟಾ ಸಿಗಲಿದೆ. ಇದರಲ್ಲಿಯೂ ಕೂಡ ನೀವು ಕೇವಲ ಒನ್ ಟೈಮ್ ಇನ್ಸ್ಟಾಲೆಶನ್ ಚಾರ್ಜ್ ನೀಡಬೇಕು. ಒಟ್ಟು ಒಂದು ವರ್ಷದ ಪ್ಲಾನ್ ಗಾಗಿ ನೀವು ಟ್ಯಾಕ್ಸ್ ಸೇರಿದಂತೆ ರೂ. 23,822 ಪಾವತಿಸಬೇಕು. ಇದರಲ್ಲಿ ನೀವು ತ್ರೈಮಾಸಿಕ ಹಾಗೂ ಮಾಸಿಕ ಪ್ಲಾನ್ ಗಳನ್ನೂ ಸಹ ಪಡೆಯಬಹುದಾಗಿದೆ.
ಇದನ್ನೂ ಓದಿ- Govt Giving Free Recharge ! ಸರ್ಕಾರ 10 ಕೋಟಿ ಗ್ರಾಹಕರಿಗೆ ಉಚಿತ ರಿಚಾರ್ಜ್ ನೀಡುತ್ತಿದೆ! ನಿಮಗೂ ಈ SMS ಬಂದಿದೆಯೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.