ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೇಶದ ಪ್ರಮುಖ ವೈದ್ಯರೊಂದಿಗೆ ಮತ್ತು ಪ್ರಸಿದ್ಧ ಫಾರ್ಮಾ ಕಂಪನಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೋನಾ ಪರಿಸ್ಥಿತಿ ಕುರಿತು ಸಂವಾದ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಎಂ ಮೋದಿ ದೇಶದ ಪ್ರಮುಖ ವೈದ್ಯರೊಂದಿಗೆ ಸಂಜೆ 4.30 ಕ್ಕೆ ಮತ್ತು ಪ್ರಸಿದ್ಧ ಫಾರ್ಮಾ ಕಂಪನಿ(Pharma Companies)ಗಳೊಂದಿಗೆ ಸಂಜೆ 6 ಗಂಟೆಗೆ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ: ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್.! ಪೇಟಿಎಂ ಜೊತೆ ಏರ್ಪಟ್ಟ ಒಪ್ಪಂದ ಏನು..?
ನಿನ್ನೆ ಪಿಎಂ ಮೋದಿ ದೇಶದ ಕೊರೋನಾ(Corona) ಪರಿಸ್ಥಿತಿ ಕುರಿತು ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ: Delhi Lockdown: ಮದ್ಯ ಖರೀದಿಗೆ ಮುಗಿಬಿದ್ದ ಜನ, ಔಷಧಿ ಅಲ್ಲ ಪೆಗ್ ಕೆಲಸಕ್ಕೆ ಬರುತ್ತೆ ಎಂದ ಮಹಿಳೆ
ದಿನೆ ದಿನೆ ದೇಶದಲ್ಲಿ ಕೊರೋನಾ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಧಾನಿ ಮೋದಿ(PM Narendra Modi) ನಿಯಮಿತ ಸಭೆಗಳನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: West Bengal Election 2021: ಕೊರೊನಾ ಬಿಕ್ಕಟ್ಟಿನ ಮಧ್ಯೆ ಪ್ರಧಾನಿ ಮೋದಿ ಎಲೆಕ್ಷನ್ ಪ್ರಚಾರ: ಒಂದೇ ದಿನ 4 ರ‍್ಯಾಲಿ!
ದೇಶದಲ್ಲಿ ಎರಡನೇ ಅಲೆಯಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ. ರೋಗಿಗಳಿಗೆ ಆಮ್ಲಜನ(Oxygen)ಕದ ಕೊರತೆ, ICU ಬೆಡ್ ಕೊರತೆ, ರೆಮ್ಡೆಸಿವಿರ್ ನಂತಹ ಔಷಧಿಗಳ ಕೊರತೆ ಹೆಚ್ಚಾಗಿದೆ. ಆದ್ದರಿಂದ ವಿವಿಧ ರಾಜ್ಯಗಳ ಸಿಎಂಗಳು ಕೇಂದ್ರದ ಸಹಾಯಕೆ ಕೈ ಚಾಚುತ್ತಿವೆ.
ಇದನ್ನೂ ಓದಿ: ಒಂದು ವಾರಗಳ ಸಂಪೂರ್ಣ ಲಾಕ್ ಡೌನ್ ಫೋಷಿಸಿದ ದೆಹಲಿ ಸರ್ಕಾರ
ಭಾರತದ ಒಟ್ಟು ಕೋವಿಡ್(COVID-19) ಪ್ರಕಾರಗಳ ಸಂಖ್ಯೆ 2,73,810 ಏರಿಕೆಯೊಂದಿಗೆ 1.50 ಕೋಟಿ ಗಡಿ ದಾಟಿದೆ, ಆದರೆ ಸಕ್ರಿಯ ಪ್ರಕರಣಗಳು 19 ಲಕ್ಷವನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.