ನವದೆಹಲಿ: ದೇಶಾದ್ಯಂತ ಕರೋನಾವೈರಸ್ ಎರಡನೇ ಅಲೆಯ ಅಟ್ಟಹಾಸ ಮುಂದುವರೆದಿದೆ. ಈ ಸಾಂಕ್ರಾಮಿಕ ರೋಗವು ದೇಶ ಮೂಲೆ ಮೂಲೆಯನ್ನೂ ಆಕ್ರಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಅರಿವು ಮೂಡಿಸಲು ಕೇಂದ್ರ ಸರ್ಕಾರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವ ಜನರಿಗೆ ಈ ರೋಗದ ಅಪಾಯ ಹೆಚ್ಚು ಮತ್ತು ಅದನ್ನು ಹೇಗೆ ತಪ್ಪಿಸಬೇಕು ಎಂದು ಈ ಪಟ್ಟಿಯಲ್ಲಿ ತಿಳಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಟ್ವೀಟ್:
ಈ ಪಟ್ಟಿಯನ್ನು ಕೇಂದ್ರ ಸರ್ಕಾರದ ಇಂಡಿಯಾಫೈಟ್ಸ್ ಕೊರೊನಾ (IndiaFightsCorona) ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಲಾಗಿದೆ. ಕರೋನವೈರಸ್ (Coronavirus) ಸಾಂಕ್ರಾಮಿಕದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ಉಪಕ್ರಮದ ಉದ್ದೇಶ ಎಂದು ಸರ್ಕಾರ ತಿಳಿಸಿದೆ. ಧೂಮಪಾನ, ಹೃದ್ರೋಗ ಮತ್ತು ಉಸಿರಾಟದ ಕಾಯಿಲೆ ಇರುವವರಿಗೆ ಕರೋನಾವೈರಸ್ ಬರುವ ಸಾಧ್ಯತೆ ಹೆಚ್ಚು ಎಂದು ಈ ಟ್ವೀಟ್ನಲ್ಲಿ ತಿಳಿಸಲಾಗಿದೆ.
📍Risk factors increasing #COVID19 vulnerability
✅Those with the age of 60 years and above
✅Those who smoke 🚬
✅Those with non-communicable diseases (NCDs)#StaySafe👍 #Unite2FightCorona pic.twitter.com/SeU7bvVNLW
— #IndiaFightsCorona (@COVIDNewsByMIB) April 18, 2021
ಇದನ್ನೂ ಓದಿ - Corona Strain: ಕಳೆದ 24 ಗಂಟೆಗಳಲ್ಲಿ 2.75 ಲಕ್ಷ ಹೊಸ ಪ್ರಕರಣ, ಕಳವಳ ಹೆಚ್ಚಿಸುವ ಸಾವಿನ ಅಂಕಿ-ಅಂಶ
ಈ ಪಟ್ಟಿಯಲ್ಲಿ ನೀವೂ ಸೇರಿದ್ದೀರಾ?
1. ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, 60 ವರ್ಷ ಅಥವಾ ಅದಕ್ಕಿಂತ ಅಧಿಕ ವಯಸ್ಸಿನ ಜನರು ಕರೋನಾ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ಅವರು ಹೆಚ್ಚು ಜಾಗರೂಕರಾಗಿರಬೇಕು.
2. ಸಚಿವಾಲಯದ ಪ್ರಕಾರ, ಬೀಡಿ, ಸಿಗರೇಟ್, ಹುಕ್ಕಾ, ಗುಟ್ಖಾ ಅಥವಾ ಇನ್ನಾವುದೇ ಮಾದಕತೆಯನ್ನು ಧೂಮಪಾನ ಮಾಡುವ ಜನರಲ್ಲೂ ಕೂಡ ಕೋವಿಡ್ 19 (Covid 19) ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೇ ಎನ್ನಲಾಗಿದೆ.
ಇದನ್ನೂ ಓದಿ - Mask: ಬಟ್ಟೆ / N95 ಮಾಸ್ಕ್ ಇವುಗಳಲ್ಲಿ ಯಾವುದು ಕರೋನಾದಿಂದ ರಕ್ಷಿಸುತ್ತೆ? ಇಲ್ಲಿದೆ ತಜ್ಞರ ಅಭಿಪ್ರಾಯ
3. ಹೃದ್ರೋಗ, ಕ್ಯಾನ್ಸರ್, ಮಧುಮೇಹ ಮತ್ತು ಆಸ್ತಮಾದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಹೊಂದಿರುವವರು ಕರೋನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಈ ಕಾಯಿಲೆಗಳನ್ನು ಹೊಂದಿರುವವರಲ್ಲಿ ಕರೋನಾ ಸೋಂಕಿಗೆ ಒಳಪಡುವ ಅಪಾಯವು 3-4 ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ.
4. ನೀವು ಮಧುಮೇಹ ರೋಗಿಯಾಗಿದ್ದರೆ ಮತ್ತು ನಿಮ್ಮ ಸಕ್ಕರೆ ಮಟ್ಟ ಹೆಚ್ಚಿದ್ದರೆ, ನಿಮ್ಮ ಕರೋನಾ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಇತರ ವ್ಯಕ್ತಿಗಿಂತ ಮೂರು ಪಟ್ಟು ಹೆಚ್ಚು ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.