ನವದೆಹಲಿ: Printing Currency Notes - ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ (Coronavirus) ಸಾಂಕ್ರಾಮಿ ಪ್ರಕೋಪವನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರದ ನಾಸಿಕ್ ನ ನೋಟು ಮುದ್ರಣಾಲಯದಲ್ಲಿ ಕರೆನ್ಸಿ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಹಾರಾಷ್ಟ್ರದಲ್ಲಿ 'ಬ್ರೇಕ್ ದಿ ಚೈನ್' (Break the chain) ಅಭಿಯಾನದಡಿ ಈ ಕ್ರಮ ಕೈಗೊಳ್ಳಲಾಗಿದೆ.
ನಾಸಿಕ್ ಪ್ರೆಸ್ ನಲ್ಲಿ ನಿಂತು ಹೋದ ನೋಟುಗಳ ಮುದ್ರಣ ಕಾರ್ಯ
ನಾಸಿಕ್ನ ಕರೆನ್ಸಿ ಸೆಕ್ಯುರಿಟಿ ಪ್ರೆಸ್ (Nasik Currency Security Press) ಮತ್ತು ಇಂಡಿಯಾ ಸೆಕ್ಯುರಿಟಿ ಪ್ರೆಸ್ (India Security Press)ನಲ್ಲಿ ಏಪ್ರಿಲ್ 30 ರವರೆಗೆ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ. ಈ ಎರಡೂ ಪ್ರೆಸ್ಗಳಲ್ಲಿ, ಅಗತ್ಯ ಸೇವೆಗಳೊಂದಿಗೆ ಸಂಪರ್ಕ ಹೊಂದಿದ ನೌಕರರು ಮಾತ್ರ ಈ ಅವಧಿಯಲ್ಲಿ ಕೆಲಸ ಮಾಡುತ್ತಾರೆ, ಅಂದರೆ - ಅಗ್ನಿಶಾಮಕ ದಳ, ನೀರು ಸರಬರಾಜು ಮತ್ತು ವೈದ್ಯಕೀಯ ಸೇವೆಗಳೊಂದಿಗೆ ಸಂಪರ್ಕ ಹೊಂದಿದ ನೌಕರರು ಆಯಾ ಶಿಫ್ಟ್ ನಲ್ಲಿ ಕೆಲಸ ಮಾಡಲಿದ್ದಾರೆ.
ಇಲ್ಲಿಂದಲೇ ಶೇ.40ರಷ್ಟು ನೋಟುಗಳ ಮುದ್ರಣ
ಈ ಅವಧಿಯಲ್ಲಿ ಕರೆನ್ಸಿ ಮುದ್ರಣಕ್ಕೆ ಸಂಬಂಧಿಸಿದ ಜನರು ಕಚೇರಿಗೆ ಬರುವುದಿಲ್ಲ, ಹೀಗಾಗಿ ಕರೆನ್ಸಿಗಳ ಮುದ್ರಣವು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಭಾರತದಲ್ಲಿ ಚಲಾವಣೆಯಲ್ಲಿರುವ ಸುಮಾರು ಶೇ.40 ರಷ್ಟು ನೋಟುಗಳನ್ನು ನಾಸಿಕ್ನ ಕರೆನ್ಸಿ ನೋಟ್ ಪ್ರೆಸ್ನಲ್ಲಿ (CNP) ಮುದ್ರಿಸಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ. ಈ ಎರಡೂ ಕಂಪನಿಗಳಲ್ಲಿ ಸುಮಾರು 3000 ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಈ ನೌಕರರು ಮತ್ತು ಅವರ ಕುಟುಂಬಗಳ ಆರೋಗ್ಯದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ- Covid 19 Most Risky Places: ಕರೋನ ಎರಡನೇ ಅಲೆಯಿಂದ ರಕ್ಷಣೆ ಬೇಕೇ? ಈ ಸ್ಥಳಗಳಿಂದ ದೂರವಿರಿ
ಕಳೆದ ವರ್ಷ ಕೂಡ ನೋಟುಗಳ ಮುದ್ರಣ ನಿಲ್ಲಿಸಲಾಗಿತ್ತು
ಕಳೆದ ವರ್ಷ ಕೂಡ ಕೊರೊನಾ(Covid-19) ಮಹಾಮಾರಿಯ ಹಿನ್ನೆಲೆ ಕರೆನ್ಸಿ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ವರ್ಷ ನಾಸಿಕ್ ನೋಟು ಮುದ್ರಣಾಲಯ ಕಚೇರಿಯ ಸುಮಾರು 40 ನೌಕರರು ಕೊರೊನಾ ಸೋಂಕಿಗೆ ಒಳಗಾದ ಹಿನ್ನೆಲೆ ಮುದ್ರಣಾಲಯವನ್ನು ಕೆಲ ದಿನಗಳ ಕಾಲ ಬಂದ್ ಮಾಡಲಾಗಿತ್ತು. ನಾಸಿಕ್ ನಲ್ಲಿ ಹೈ ಕ್ವಾಲಿಟಿ ಕರೆನ್ಸಿ ನೋಟುಗಳ ಮುದ್ರಣ ಕಾರ್ಯ ನಡೆಯುತ್ತದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ- Weekend Curfew in Delhi: ವೀಕ್-ಎಂಡ್ ಕರ್ಫ್ಯೂ ಮೊರೆಹೋದ ರಾಷ್ಟ್ರ ರಾಜಧಾನಿ
ನಗದು ಬದಲಾಗಿ ಡಿಜಿಟಲ್ ಹಣ ಪಾವತಿಸಿ
ಕಳೆದ ವರ್ಷ ನೋಟು ಮುದ್ರಣಾಲಯ ಸ್ಥಗಿತಗೊಂಡ ಹಿನ್ನೆಲೆ ಸರ್ಕಾರ ನಾಗರಿಕರಿಗೆ ನಗದು ಹಣದ ಬದಲಾಗಿ ಡಿಜಿಟಲ್ ಕರೆನ್ಸಿ ಬಳಸಲು ಮನವಿ ಮಾಡಿತ್ತು. ಆದರೆ, ಇನ್ನೊಂದೆಡೆ ಕರೆನ್ಸಿ ನೋಟುಗಳ ಮೂಲಕ ವೈರಸ್ ಹರಡುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ. ಏಕೆಂದರೆ ಹಣವನ್ನು ಎಣಿಸುವಾಗ ಜನರು ತಮ್ಮ ಜೊಲ್ಲನ್ನು ಹೆಚ್ಚಾಗಿ ಬಳಸುತ್ತಾರೆ ಹಾಗೂ ಇದು ತುಂಬಾ ಅಪಾಯಕಾರಿಯಾಗಿದೆ. ಹೀಗಾಗಿ ನೀವೂ ಕೂಡ ಇನ್ಮುಂದೆ ಹಣಕಾಸಿನ ವ್ಯವಹಾರ ನಡೆಸುವಾಗ ಕರೆನ್ಸಿ ನೋಟುಗಳ ಬದಲಾಗಿ ಡಿಜಿಟಲ್ ಮೋಡ್ ನಲ್ಲಿ ಹಣ ಪಾವತಿಸಿದರೆ ಉತ್ತಮ.
ಇದನ್ನೂ ಓದಿ- Corona Vaccine: ಅಮೆರಿಕದ ನಂತರ ಈ ದೇಶದಲ್ಲೂ Johnson & Johnson ಲಸಿಕೆ ನಿಷೇಧ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.