ನವದೆಹಲಿ: RBI News - 'ಆನ್ ಟ್ಯಾಪ್' ಅಥವಾ ಯಾವಾಗ ಬೇಕಾದರೂ ಲೈಸನ್ಸ್ ಗಾಗಿ ಅರ್ಜಿ ಸಲ್ಲಿಸುವ ಮಾರ್ಗಸೂಚಿಗಳ ಅಡಿ ಭಾರತೀಯ ರಿಸರ್ವ್ ಬ್ಯಾಂಕ್ ಒಟ್ಟು ಎಂಟು ಅರ್ಜಿಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ ಎಲ್ಲಾ ರೀತಿಯ ಸೇವೆಗಳನ್ನು ಒದಗಿಸುವ ಒಟ್ಟು ನಾಲ್ಕು ಯುನಿವರ್ಸಲ್ ಬ್ಯಾಂಕ್ ಹಾಗೂ ನಾಲ್ಕು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳಿಗಾಗಿ ಅರ್ಜಿಗಳು ಶಾಮೀಲಾಗಿವೆ. ಖಾಸಗಿ ವಲಯದ ಯುನಿವರ್ಸಲ್ ಬ್ಯಾಂಕ್ ಗಳು ಹಾಗೂ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು ಆನ್ ಟ್ಯಾಪ್ ಲೈಸಂಸಿಂಗ್ ನಿರ್ದೇಶನಗಳು ಕ್ರಮಶಃ ಆಗಸ್ಟ್ 1, 2016 ಹಾಗೂ ಡಿಸೆಂಬರ್ 05, 2019 ರ ಅವಧಿಯಲ್ಲಿ ಜಾರಿಯಾಗಿದ್ದವು.
ಯೂನಿವರ್ಸಲ್ ಬ್ಯಾಂಕ್ ಗಳು (Universal Banks)
UAE ಎಕ್ಸ್ ಚೇಂಜ್ ಅಂಡ್ ಫೈನಾನ್ಸಿಯಲ್ ಸರ್ವಿಸೆಸ್, ದಿ ರಿಪೆಟ್ರಿಯೇಟ್ಸ್ ಅಂಡ್ ಡೆವಲಪ್ಮೆಂಟ್ ಬ್ಯಾಂಕ್ ಲಿ, ಚೆತನ್ಯ ಇಂಡಿಯನ್ ಫಿನ್ ಕ್ರೆಡಿಟ್ ಪ್ರೈವೇಟ್ ಲಿ ಹಾಗೂ ಪಂಕಜ್ ವೈಶ್ಯಾ ಹಾಗೂ ಇತರ 'ಆನ್ ಟ್ಯಾಪ್' ಲೈಸಂಸಿಂಗ್ ನಿರ್ದೇಶನಗಳ ಅಡಿ ಯುನಿವರ್ಸಲ್ ಬ್ಯಾಂಕ್ ಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಇದನ್ನೂ ಓದಿ-ಶೀಘ್ರದಲ್ಲೇ ಬಂದ್ ಆಗಲಿದೆ ಈ ಪ್ರಸಿದ್ದ ಬ್ಯಾಂಕ್..! ಕಾರಣ ಇಲ್ಲಿದೆ ..!
ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು (Small Finance Banks)
ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಾಗಿ 'ಆನ್ ಟ್ಯಾಪ್' ನಿರ್ದೇಶನಗಳ ಅಡಿ ವಿ ಸಾಫ್ಟ್ ಟೆಕ್ನಾಲಾಜಿ ಪ್ರೈವೇಟ್ ಲಿಮಿಟೆಡ್, ಕಾಲಿಕಟ್ ಸಿಟಿ ಸರ್ವಿಸ್ ಕೋ ಆಪ್ ರೆಟಿವ್ ಬ್ಯಾಂಕ್ ಲಿಮಿಟೆಡ್, ಅಖಿಲ್ ಕುಮಾರ್ ಗುಪ್ತಾ ವತಿಯಿಂದ ಜೋನಲ್ ಗ್ರಾಮೀಣ ಫೈನನ್ಸಯಾಲ್ ಸರ್ವಿಸೆಸ್ ಪ್ರೈವೇಟ್ ಲಿ. ಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಇದನ್ನೂ ಓದಿ- ಪಾಲಿಸಿದಾರರಿಗೆ ಎಲ್ಐಸಿ ತರಾತುರಿಯ ಆಲರ್ಟ್ ಜಾರಿ ಮಾಡಿದ್ದೇಕೆ..?
ಮಾರ್ಗಸೂಚಿಗಳ ಅನುಸಾರ ಯುನಿವರ್ಸಲ್ ಬ್ಯಾಂಕ್ ಗಳಿಗಾಗಿ ಕನಿಷ್ಠ ವೋಟಿಂಗ್ ಇಕ್ವಿಟಿ ಡಿಪಾಸಿಟ್ 500 ಕೋಟಿ ರೂ ಆಗಿರಬೇಕು. ಹೀಗಾಗಿ ಬ್ಯಾಂಕ್ ನ ಕನಿಷ್ಠ ನೆಟ್ ವರ್ತ್ 500 ಕೋಟಿ ಗಳಾಗಿರಬೇಕು. SFB ವಿಷಯದಲ್ಲಿ ಇದು ಕನಿಷ್ಠ ಅಂದರೆ 200 ಕೋಟಿ ಮತ್ತು 100 ಕೋಟಿ ಆಗಿದೆ. ಐದು ವರ್ಷಗಳಲ್ಲಿ ಇದನ್ನು 200 ಕೋಟಿ ರೂ.ಗೆ ಹೆಚ್ಚಿಸಬೇಕು.
ಇದನ್ನೂ ಓದಿ-Moody's Predictions: ಕೊರೊನಾ 2ನೇ ಅಲೆಯ ಮಧ್ಯೆಯೂ ಕೂಡ ಭಾರತದ ಆರ್ಥಿಕ ಪ್ರಗತಿ ದರ ಎರಡಂಕಿಯಲ್ಲಿರಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.