ಕರ್ಣಿ ಮಾತಾ ಮಂದಿರದಲ್ಲಿ ಇಲಿಗಳಿಗೇ ಪ್ರಾಶಸ್ತ್ಯ; ಇಲ್ಲಿಇಲಿಗಳು ತಿಂದು ಬಿಟ್ಟ ಆಹಾರವೇ ಪ್ರಸಾದ..!

ಇಲಿಗಳ ದೇವಸ್ಥಾನವೆಂದೇ ಪ್ರಸಿದ್ದಿಯಾಗಿರುವ ಕರ್ಣಿ ದೇವಾಲಯ ರಾಜಸ್ಥಾನದ ಬಿಕಾನೆರ್ ನಗರದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನದಲ್ಲಿ ಸುಮಾರು 20ರಿಂದ 25 ಸಾವಿರ ಇಲಿಗಳಿವೆ.

Written by - Ranjitha R K | Last Updated : Apr 15, 2021, 05:48 PM IST
  • ರಾಜಸ್ಥಾನದ ಬಿಕಾನೆರ್‌ನಲ್ಲಿದೆ ಕರ್ಣಿ ಮಾತಾ ದೇವಸ್ಥಾನ
  • ಕರ್ಣಿ ಮಾತಾ ದೇವಾಲಯವನ್ನು ಇಲಿಗಳ ದೇವಾಲಯ ಎಂದೂ ಕರೆಯುತ್ತಾರೆ.
  • ದೇವಾಲಯದಲ್ಲಿ ಇಲಿಗಳಿಗಿಟ್ಟ ಆಹಾರವೇ ಇಲ್ಲಿ ಪ್ರಸಾದ
ಕರ್ಣಿ ಮಾತಾ ಮಂದಿರದಲ್ಲಿ ಇಲಿಗಳಿಗೇ ಪ್ರಾಶಸ್ತ್ಯ; ಇಲ್ಲಿಇಲಿಗಳು ತಿಂದು ಬಿಟ್ಟ ಆಹಾರವೇ ಪ್ರಸಾದ..! title=
ರಾಜಸ್ಥಾನದ ಬಿಕಾನೆರ್‌ನಲ್ಲಿದೆ ಕರ್ಣಿ ಮಾತಾ ದೇವಸ್ಥಾನ (file photo)

ನವದೆಹಲಿ : ನಮ್ಮ ದೇಶದಲ್ಲಿ ಅನೇಕ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ಕತೆ ಪುರಾಣವಿದೆ. ಪ್ರತಿಯೊಂದು ದೇವಾಲಯಕ್ಕೆ ಅದರದ್ದೇ ಆದ ಆಚರಣೆಗಳಿವೆ. ಕೆಲವೊಂದು ದೇವಾಲಯಗಳ ಆಚರಣೆ ನೋಡಿದರೆ ಆಶ್ಚರ್ಯವಾಗುತ್ತದೆ. ಇನ್ನು ಕೆಲವೊಮ್ಮೆ ಕೆಲ ಘಟನೆಗಳು ಶಕ್ತಿಯ ಅಸ್ತಿತ್ವವನ್ನು ಸಾಬೀತುಪಡಿಸುತ್ತದೆ. ಇಲ್ಲಿ ನಾವು ಹೇಳುತ್ತಿರುವ ದೇವಾಲು ಕೂಡಾ ಹಾಗೆಯೇ.. ಇದು ದೇವಿಯ ದೇವಾಲಯ (Devi Temple). ಈ ದೇವಾಲಯದಲ್ಲಿ ಇಲಿಗಳದ್ದೇ (Rat) ಪಾರುಪತ್ಯಲ್ಲಿ ಎಲ್ಲಿ ನೋಡಿದರೂ ಕಣ್ಣಿಗೆ ಇಲಿಗಳೇ ಬೀಳುತ್ತವೆ. ಇಲ್ಲಿ ಇಲಿಗಳು ತಾಯಿ ದೇವಿಯ ಸೈನಿಕರಂತೆ ಭಾಸವಾಗುತ್ತದೆ.  ಈ ದೇವಾಲಯಕ್ಕೆ ಭೆಟಿ ನೀಡುವ ಪ್ರತಿಯೊಬ್ಬನ ಮನದ ಇಚ್ಚೇ ಈಡೇರುತ್ತದೆಯಂತೆ. 

ಕರ್ಣಿ ಮಾತಾ ದೇವಸ್ಥಾನದಲ್ಲಿವೆ  ಸಾವಿರಾರು ಇಲಿಗಳು : 
ಇಲಿಗಳ ದೇವಸ್ಥಾನವೆಂದೇ (Rat Temple) ಪ್ರಸಿದ್ದಿಯಾಗಿರುವ ಕರ್ಣಿ ದೇವಾಲಯ (Karni Temple) ರಾಜಸ್ಥಾನದ ಬಿಕಾನೆರ್ ನಗರದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನದಲ್ಲಿ ಸುಮಾರು 20ರಿಂದ 25 ಸಾವಿರ ಇಲಿಗಳಿವೆ. ಈ ದೇವಾಲಯದ ಮತ್ತೊಂದು ವಿಶೇಷವೆಂದರೆ, ಇಲ್ಲಿ  ಇಲಿಗಳು ತಿಂದು ಬಿಟ್ಟ ಆಹಾರವನ್ನೇ (Food) ಪ್ರಸಾದವೆಂದು ನೀಡಲಾಗುತ್ತದೆ. ಆದರೆ ಇಲ್ಲಿಯವರೆಗೆ ಇಲ್ಲಿಯ ಪ್ರಸಾದ ಸೇವಿಸಿದ ಯಾರೊಬ್ಬರೂ ಅನಾರೋಗ್ಯಕ್ಕೆ ತುತ್ತಾಗಲಿಲ್ಲ ಎನ್ನುವುದು ವಿಶೇಷ. ಅಲ್ಲದೆ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇಲಿಗಳಿದ್ದರೂ ದೇವಾಲಯದಲ್ಲಿ ಇಲಿಗಳ ವಾಸನೆ ಬರುವುದಿಲ್ಲ. 

ಇದನ್ನೂ ಓದಿ : Sindhoora: ನಕಾರಾತ್ಮಕ ಶಕ್ತಿ, ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡುತ್ತೆ ಸಿಂಧೂರ

ಬಿಳಿ ಇಲಿಗಳನ್ನು ಕಂಡರೆ ಇಷ್ಟಾರ್ಥ ಸಿದ್ದಿಸುತ್ತದೆಯಂತೆ : 
ಈ ದೇವಾಲಯದ ಇಲಿಗಳನ್ನು ಕಾಬಾ (Kaba) ಎಂದು ಕರೆಯಲಾಗುತ್ತದೆ.  ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು,  ದೇವಾಲಯದ ಒಳಗೆ ತಮ್ಮ ಪಾದಗಳನ್ನು ಎಳೆದುಕೊಂಡು ನಡೆಯಬೇಕಾಗುತ್ತದೆ. ಯಾಕೆಂದರೆ ಲಿಗಳು ಭಕ್ತರ (Devotee) ಕಾಲಿನಡಿಗೆ ಬಿದ್ದು ಅನಾಹುತವಾಗದಿರಲಿ ಎಂಬ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ. ದೇವಾಲಯದಲ್ಲಿ ಕಪ್ಪು ಇಲಿಗಳು ಮತ್ತು ಬಿಳಿ ಇಲಿಗಳಿವೆ. ಆದರೆ ಕಪ್ಪು ಇಲಿಗಳ ಸಂಖ್ಯೆ ಹೆಚ್ಚಾಗಿರುತ್ತವೆ. ಇಲ್ಲಿನ ಮತ್ತೊಂದು ನಂಬಿಕೆಯೆಂದರೆ ದೇವಾಲಯದಲ್ಲಿ ಯಾರ ಭಕ್ತರ ಕಣ್ಣಿಗೆ ಬಿಳಿ ಇಲಿ (White rats) ಬೀಳುತ್ತದೆಯೋ ಅವರ ಇಷ್ಟಾರ್ಥ ಸಿದ್ದಿಸುತ್ತದೆಯಂತೆ. ನವರಾತ್ರಿ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. 

ಸಾಮಾನ್ಯ ಮಹಿಳೆಯಿಂದ ದೇವಿ ಸ್ಥಾನಕ್ಕೇರಿದ ಕರ್ಣಿ ಮಾತೆ : 
ಈ ದೇವಾಲಯದಲ್ಲಿ ಇರುವ ಕರ್ಣಿ ಮಾತೆಯನ್ನು ದೇವಿ ಜಗದಂಬೆಯ ಅವತಾರ ಎಂದು ಪೂಜಿಸಲಾಗುತ್ತದೆ. ಜಾನಪದ ಕತೆಗಳ ಪ್ರಕಾರ,  ಕರ್ಣಿ ಮಾತೆ 1387 ರಲ್ಲಿ ಚಾರನ್ ಕುಟುಂಬದಲ್ಲಿ ಜನಿಸಿದಳು. ಅವಳ ಬಾಲ್ಯದ ಹೆಸರು ರಿಗೂ ಬಾಯಿ. ರಿಗೂ ಬಾಯಿ ವಿವಾಹವು (Marriage) ಕಿಪೋಜಿ ಚರಣ್ ಅವರೊಂದಿಗೆ ನೆರವೇರುತ್ತದೆ. ಆದರೆ ಸಂಸಾರ ಜೀವನದಲ್ಲಿ ಆಸಕ್ತಿ ಇರದ ಕಾರಣ , ತಮ್ಮ ಸಹೋದರಿ, ಗುಲಾಬ್ ಅವರನ್ನು ಪತಿ ಕಿಪೋಜಿ ಚರಣ್ ಅವರೊಂದಿಗೆ ವಿವಾಹ ಮಾಡಿಕೊಡುತ್ತಾರೆ. ತಾನು  ದೇವಿಯ ಭಕ್ತಿಯಲ್ಲಿ ತೊಡಗುತ್ತಾರೆ. ಅಲ್ಲದೆ ಜನರ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾರೆ. ಹೀಗೆ ಜನರ ಸೇವೆ ವೇಳೆ ನಡೆಯುತ್ತಿದ್ದ ಕೆಲ ಪವಾಡಗಳಿಂದ ರಿಗೂ ಬಾಯಿಯನ್ನು ಜನ   ಕರ್ಣಿ ಮಾತಾ ಎಂಬ ಹೆಸರಿನಲ್ಲಿ ಅವಳನ್ನು ಪೂಜಿಸಲು ಪ್ರಾರಂಭಿಸಿದರು. ಇದೇ ಕರ್ಣಿ ಮಾತೆಯನ್ನು ಈಗಲೂ ಇಲ್ಲಿ ಪೂಜಿಸಲಾಗುತ್ತದೆ. 

ಇದನ್ನೂ ಓದಿ : Staircase Vastu Tips - ಮನೆಯ Staircaseನಲ್ಲಿ ಅಡಗಿದೆ ಯಶಸ್ಸಿನ ಗುಟ್ಟು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News