ಬೆಂಗಳೂರು: ಸಿಬಿಎಸ್ಇ ಹತ್ತನೇ ತರಗತಿಗಳ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ SSLC ಪರೀಕ್ಷೆಗಳ ಕುರಿತು ಈಗಾಗಲೇ ಊಹಾಪೋಹ ಏಳತೊಡಗಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಹೇಳಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ ಬರೆದು ಮಾಹಿತಿ ಹಂಚಿಕೊಂಡಿರುವ ಸುರೇಶ ಕುಮಾರ್(S Suresh Kumar), ನಮ್ಮ ರಾಜ್ಯದ SSLC ಪರೀಕ್ಷೆಗಳು ಪ್ರಾರಂಭ ವಾಗಬೇಕಿರುವುದು 21.6.2021 ರಿಂದ, ಅಂದರೆ ಜೂನ್ 21 ರಿಂದ. ಆದ್ದರಿಂದ ಈಗ ನಮ್ಮ ರಾಜ್ಯದಲ್ಲಿ ಸಿಬಿಎಸ್ಇ ರೀತಿ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
CBSE ಹತ್ತನೇ ತರಗತಿಗಳ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ SSLC ಪರೀಕ್ಷೆಗಳ ಕುರಿತು ಈಗಾಗಲೇ ಊಹಾಪೋಹ ಏಳತೊಡಗಿದೆ.
ನಮ್ಮ ರಾಜ್ಯದ SSLC ಪರೀಕ್ಷೆಗಳು ಪ್ರಾರಂಭ ವಾಗಬೇಕಿರುವುದು
21.6.2021 ರಿಂದ, ಅಂದರೆ ಜೂನ್ 21 ರಿಂದ.ಆದ್ದರಿಂದ ಈಗ ನಮ್ಮ ರಾಜ್ಯದಲ್ಲಿ CBSE ರೀತಿ ಯಾವುದೇ ತೀರ್ಮಾನ ಕೈಗೊಂಡಿಲ್ಲ.
— S.Suresh Kumar, Minister - Govt of Karnataka (@nimmasuresh) April 14, 2021
ಇದನ್ನೂ ಓದಿ- Covid-19: ರಂಜಾನ್ಗಾಗಿ ರಾಜ್ಯ ಸರ್ಕಾರದಿಂದ 'ಹೊಸ ಮಾರ್ಗಸೂಚಿ'ಗಳು..!
ಕೇಂದ್ರ ಸರ್ಕಾರವು ಇಂದು ಮಧ್ಯಾಹ್ನ ಸಿಬಿಎಸ್ಇ(CBSE) 10 ನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ 12 ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಮುಂದೋಡಲಾಗಿದೆ. ಈ ಪರೀಕ್ಷೆ ಕುರಿತು ಮುಂದಿನ ಪರಸ್ಥಿತಿ ನೋಡಿ ದಿನಾಂಕ ಪ್ರಕಟಿಸಲಾಗುದು ಎಂದು ಹೇಳಿದೆ.
ಇದನ್ನೂ ಓದಿ- Ashwath Narayan: 'ಪದವಿ ಮತ್ತು ಸ್ನಾತಕೋತರ ಪದವಿ ವಿದ್ಯಾರ್ಥಿಗಳಿಗೆ ಆನ್ಲೈನ್ ಎಕ್ಸಾಮ್ ಸಾಧ್ಯವಿಲ್ಲ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.