COVID Tongue: ಕರೋನಾ ರೋಗಿಗಳ ನಾಲಗೆಯಲ್ಲಿ ಕಂಡುಬರುತ್ತಿದೆ ವಿಚಿತ್ರ ಲಕ್ಷಣಗಳು


ಕರೋನಾ ಸಾಂಕ್ರಾಮಿಕ ಪ್ರಕರಣಗಳು ಹೆಚ್ಚಾದಂತೆ, ಅದರ ಹೊಸ ಲಕ್ಷಣಗಳು ಈಗ ಹೊರಬರುತ್ತಿವೆ. ಆರೋಗ್ಯ ತಜ್ಞರು ಕೂಡಾ ಇದೀಗ  ಹೊಸ ಹೊಸ ಲಕ್ಷಣಗಳಿಂದ ಆತಂಕ ಪಡುವಂತಾಗಿದೆ. 

ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ (Coronavirus) ರೋಗ ಕಾಣಿಸಿಕೊಂಡು ಒಂದು ವರ್ಷ ಕಳೆದಿದೆ. ವರ್ಷದ ನಂತರವೂ ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಕರೋನ ವೈರಸ್ ಹೊಸ ಅಲೆಯೊಂದಿಗೆ, ತಜ್ಞರು COVID Tongue ಎಂಬ ವಿಚಿತ್ರ ರೋಗಲಕ್ಷಣದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.  ವೇಗವಾಗಿ ಹರಡುವ ಕರೋನಾ ಸೋಂಕಿನಲ್ಲಿ ಇದು ಸಾಮಾನ್ಯ ಲಕ್ಷಣವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಕರೋನಾದಿಂದ ಬಳಲುತ್ತಿರುವ ಅನೇಕ ಜನರು ಈಗ COVID Tongue ಎಂಬ ಅಪರೂಪದ ಮತ್ತು ಅಸಾಮಾನ್ಯ ರೋಗಲಕ್ಷಣವನ್ನು ಅನುಭವಿಸುತ್ತಿದ್ದಾರೆ. ಇದರಲ್ಲಿ, ಜನರ ದೇಹವು ಲಾಲಾರಸವನ್ನು ಉತ್ಪಾದಿಸುವಲ್ಲಿ ವಿಫಲವಾಗುತ್ತದೆ. ಈ ಲಾಲಾರಸವು ನಿಮ್ಮ ಬಾಯಿಯನ್ನು ಕೆಟ್ಟ ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ. ಇದು ಬಾಯಿಯಲ್ಲಿ ಶುಷ್ಕತೆ ಅಥವಾ ಜಿಗುಟುತನಕ್ಕೆ ಕಾರಣವಾಗಬಹುದು. ಈ ರೋಗಲಕ್ಷಣ ಹೊಂದಿರುವವರಿಗೆ ಆಹಾರವನ್ನು ಅಗಿಯಲು ಮತ್ತು ಮಾತನಾಡಲು ಕಷ್ಟವಾಗಬಹುದು.

2 /4

 ಲಂಡನಿನ ಕಿಂಗ್ ಕಾಲೇಜಿನ ಪ್ರೊಫೆಸರ್ ಟಿಮ್ ಸ್ಪೆಕ್ಟರ್, ವಿಶ್ವದ ಕರೋನಾ ಸೋಂಕಿಗೆ ಒಳಗಾದ ಪ್ರತಿ ಐದು ಜನರಲ್ಲಿ ಒಬ್ಬರಿಗೆ  ಈ ಲಕ್ಷಣ ಕಂಡು ಬಂದಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಈ ಲಕ್ಷಣಗಳು ಅಧಿಕೃತ PHE ಪಟ್ಟಿಯಲ್ಲಿ ಇನ್ನೂ ಕಾಣಿಸಿಕೊಂಡಿಲ್ಲ. ಈ ರೋಗಲಕ್ಷಣಗಳು ಚರ್ಮದ ಮೇಲಿನ ಕಲೆಗಳು, ಬಾಯಿಯಲ್ಲಿ ವಿಚಿತ್ರವಾದ ಹುಣ್ಣು ಮುಂತಾದ ಲಕ್ಷಣಗಳನ್ನು ಒಳಗೊಂಡಿದೆ. ಒಂದು ವೇಳೆ ಬರೀ ತಲೆನೋವು ಮತ್ತು ಆಯಾಸ ಮಾತ್ರ ಇದ್ದರೂ ಕೂಡಾ ಅದು ಕರೋನಾ ಸೋಂಕಿನ ಲಕ್ಷಣವಾಗಿರಬಹುದು. 

3 /4

ಭಾರತದಲ್ಲಿ ಇದುವರೆಗೆ ಒಂದು ದಿನದಲ್ಲಿ ಅತಿ ಹೆಚ್ಚು ಹೊಸ ಕರೋನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1 ಲಕ್ಷ 52 ಸಾವಿರ 869 ಹೊಸ ಕರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಈ 24 ಗಂಟೆಗಳಲ್ಲಿ ದೇಶದಲ್ಲಿ ಕರೋನಾ ವೈರಸ್‌ನಿಂದ 839 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕರೋನಾ ಸೋಂಕಿಗೆ ಒಳಗಾದವರ ಸಂಖ್ಯೆ 1 ಕೋಟಿ 33 ಲಕ್ಷ 58 ಸಾವಿರ 805 ಕ್ಕೆ ತಲುಪಿದೆ.   

4 /4

ಇಲ್ಲಿಯವರೆಗೆ ದೇಶದ 1 ಕೋಟಿ 19 ಲಕ್ಷ 90 ಸಾವಿರ 859 ಜನರು ಕರೋನಾದಿಂದ ಚೇತರಿಸಿಕೊಂಡಿದ್ದಾರೆ. ಅಲ್ಲದೆ, 1 ಲಕ್ಷ 68 ಸಾವಿರ 436 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳು ರಾತ್ರಿ ಕರ್ಫ್ಯೂ ಮತ್ತು ಲಾಕ್‌ಡೌನ್ ಅನ್ನು ವಿಧಿಸಿವೆ.