Corona Vaccine : ಕರೋನ ಲಸಿಕೆಯ ಎರಡನೇ ಡೋಸ್ ಪಡೆದ ಪ್ರಧಾನಿ ಮೋದಿ

ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡ ನಂತರ, ಪ್ರಧಾನಿ ಮೋದಿ ಅವರೇ ಟ್ವೀಟ್ ಮಾಡಿ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ.   

Written by - Ranjitha R K | Last Updated : Apr 8, 2021, 09:28 AM IST
  • ಕರೋನ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡ ಪ್ರಧಾನಿ
  • ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ ಮೋದಿ
  • ಎಲ್ಲರೂ ಲಸಿಕೆ ತೆಗೆದುಕೊಳ್ಳುವಂತೆ ಪ್ರಧಾನಿ ಮನವಿ
Corona Vaccine : ಕರೋನ ಲಸಿಕೆಯ ಎರಡನೇ ಡೋಸ್ ಪಡೆದ ಪ್ರಧಾನಿ ಮೋದಿ  title=
ಕರೋನ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡ ಪ್ರಧಾನಿ (photo twitter)

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ  (Narendra Modi) ಗುರುವಾರ ಬೆಳಿಗ್ಗೆ ದೆಹಲಿಯ ಏಮ್ಸ್ ನಲ್ಲಿ (AIIMS) ಕರೋನಾ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. ಮಾರ್ಚ್ 1 ರಂದು ಪ್ರಧಾನ ಮಂತ್ರಿ ಕೋವಿಡ್ ಲಸಿಕೆಯ ಮೊದಲನೆ ಡೋಸ್ ತೆಗೆದುಕೊಂಡಿದ್ದರು. ಪ್ರಧಾನಿ ಮೋದಿ ಅವರಿಗೆ ಭಾರತ್ ಬಯೋಟೆಕ್ ತಯಾರಿಸಿದ ಕೊವಾಕ್ಸಿನ್  (Covaxin) ಲಸಿಕೆ ಹಾಕಲಾಗಿದೆ. ಏಮ್ಸ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ  ನರ್ಸ್ ಗಳಾದ ಪುದುಚೇರಿಯ ಪಿ ನಿವೇದ ಮತ್ತು ಪಂಜಾಬ್‌ನ ನಿಶಾ ಶರ್ಮಾ ಪ್ರಧಾನ ಮಂತ್ರಿಯವರಿಗೆ ಲಸಿಕೆ ಹಾಕಿದ್ದಾರೆ. 

ಲಸಿಕೆಯ (Corona Vaccine) ಎರಡನೇ ಡೋಸ್ ತೆಗೆದುಕೊಂಡ ನಂತರ, ಪ್ರಧಾನಿ ಮೋದಿ (Narendra Modi) ಅವರೇ ಟ್ವೀಟ್ ಮಾಡಿ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರೊಂದಿಗೆ, ನೀವು ಲಸಿಕೆಗೆ ಅರ್ಹರಾಗಿದ್ದರೆ, CoWin ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಲಸಿಕೆ ಪಡೆಯಿರಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಸದ್ಯಕ್ಕೆ ವ್ಯಾಕ್ಸಿನೇಷನ್ (Vaccination) ಒಂದೇ ವೈರಸ್ ಅನ್ನು ಸೋಲಿಸಲು ಇರುವ ಮಾರ್ಗ ಎಂದು ಮೋದಿ ಹೇಳಿದ್ದಾರೆ. 

 

ಇದನ್ನೂ ಓದಿ : ಎಪ್ರಿಲ್ 15 ರ ವರೆಗೆ ಈ ರಾಜ್ಯದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಸ್ಥಗಿತ

ಯಾವ ಸಂಸ್ಥೆಯಲ್ಲಿ ಸುಮಾರು 100  ಮಂದಿ ಲಸಿಕೆ (Vaccine) ಪಡೆಯಲು ಅರ್ಹರಾಗಿರುತ್ತರೆಯೋ ಆ ಸಂಸ್ಥೆಗಳಲ್ಲಿ ಲಸಿಕೆ ಕೇಂದ್ರ ಸ್ಥಾಪಿಸಲು ಸರ್ಕಾರ ಅನುಮತಿ ನೀಡಿತ್ತು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ  ಏಪ್ರಿಲ್ 11 ರಿಂದ ಸರ್ಕಾರಿ ಮತ್ತು ಖಾಸಗಿ ಕೆಲಸದ ಸ್ಥಳಗಳಲ್ಲಿ ಕೋವಿಡ್ -19 (COVID-19) ಲಸಿಕೆ ನೀಡಲು ಸರ್ಕಾರ ಅನುಮತಿ ನೀಡಿದೆ. ಅಲ್ಲದೆ, ದೇಶದಲ್ಲಿ ಕೋವಿಡ್  ಲಸಿಕೆಯ ಕೊರತೆಯಿಲ್ಲ ಎನ್ನುವುದನ್ನೂ ಕೂಡಾ ಕೇಂದ್ರ ಇದೇ ವೇಳೆ ಸ್ಪಷ್ಟಪಡಿಸಿದೆ. 

ಇದನ್ನೂ ಓದಿ : ಇನ್ನೂ ಮುಂದೆ ನಿಮ್ಮ ಕೆಲಸದ ಸ್ಥಳದಲ್ಲಿಯೂ ಸಿಗಲಿದೆ ಕೊರೊನಾ ಲಸಿಕೆ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News