ನವದೆಹಲಿ: ಶ್ರೇಷ್ಠ ಬ್ಯಾಟ್ಸ್‌ಮನ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಆದರೆ, ಸಚಿನ್ ತೆಂಡೂಲ್ಕರ್ ಅವರ ಕುಟುಂಬದ ಇತರ ಸದಸ್ಯರ ವರದಿ ನಕಾರಾತ್ಮಕವಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸ್ವತಃ ಟ್ವಿಟರ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿನ್ ತೆಂಡೂಲ್ಕರ್ (Sachin Tendulkar), ಸೌಮ್ಯ ಗುಣಲಕ್ಷಣಗಳು ಕಂಡು ಬಂದ ನಂತರ ನನಗೆ ಕರೋನಾ ದೃಢಪಟ್ಟಿದೆ. ಆದರೆ ಕುಟುಂಬದ ಇತರೆ ಸದಸ್ಯರಿಗೆ ಕರೋನಾ ನೆಗೆಟಿವ್ ಆಗಿದೆ. ನಾನು ಸದ್ಯ ಮನೆಯಲ್ಲಿಯೇ ಕ್ವಾರೆಂಟೈನ್‌ನಲ್ಲಿದ್ದೇನೆ. ಇದಲ್ಲದೆ, ವೈದ್ಯರ ಸಲಹೆಯಂತೆ ಈ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ಪ್ರೋಟೋಕಾಲ್ಗಳನ್ನು ನಾನು ಅನುಸರಿಸುತ್ತಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. 'ಟೇಕ್ ಕೇರ್ ಆಲ್ ಆಫ್ ಯು' ಎಂದು ಬರೆದಿದ್ದಾರೆ.
— Sachin Tendulkar (@sachin_rt) March 27, 2021
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇತ್ತೀಚಿಗೆ ರಾಯಪುರದಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ (Road Safety World Series) ನಲ್ಲಿ ಇಂಡಿಯಾ ಲೆಜೆಂಡ್ಸ್ ನಾಯಕತ್ವವನ್ನು ಅಲಂಕರಿಸಿದ್ದರು, ಇದರಲ್ಲಿ ಭಾರತ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಇದನ್ನೂ ಓದಿ - ಸಚಿನ್ ತೆಂಡೂಲ್ಕರ್, ಲಾರಾ ರಸ್ತೆ ಸುರಕ್ಷತಾ ವೀಡಿಯೋ: ಆಸ್ಕರ್ ಗೆ ನಾಮ ನಿರ್ದೇಶನ ಎಂದ ಯುವಿ
ಸಚಿನ್ ತೆಂಡೂಲ್ಕರ್ ಅವರು ನವೆಂಬರ್ 15, 1989 ರಂದು ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದರು. ವೆಸ್ಟ್ ಇಂಡೀಸ್ ವಿರುದ್ಧ 14 ನವೆಂಬರ್ 2013 ರಂದು ಭಾರತಕ್ಕಾಗಿ ಕೊನೆಯ ಪಂದ್ಯವನ್ನು ಆಡಿದ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.
ಭಾರತ ಪರ 463 ಏಕದಿನ ಪಂದ್ಯಗಳನ್ನು ಆಡಿರುವ ಸಚಿನ್ 86.23 ರ ಸ್ಟ್ರೈಕ್ ಮೂಲಕ ಈ ಸ್ವರೂಪದಲ್ಲಿ 18,426 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು 49 ಶತಕಗಳನ್ನು ಒಳಗೊಂಡಂತೆ 96 ಅರ್ಧಶತಕಗಳನ್ನು ಗಳಿಸಿದರು.
ಇದನ್ನೂ ಓದಿ - ಧೋನಿ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗುವುದರಲ್ಲಿ ಸಚಿನ್ ಪಾತ್ರ ...!
ಅದೇ ಸಮಯದಲ್ಲಿ 200 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಸಚಿನ್ 51 ಶತಕ ಮತ್ತು 68 ಅರ್ಧಶತಕಗಳ ಸಹಾಯದಿಂದ 15,921 ರನ್ ಗಳಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 2 ಸಾವಿರಕ್ಕಿಂತ ಅಧಿಕ ಬೌಂಡರಿ ಗಳಿಸಿದ ಏಕೈಕ ಆಟಗಾರ. ಟೆಸ್ಟ್ ಪಂದ್ಯಗಳಲ್ಲಿ ಅವರು 2058 ಬೌಂಡರಿಗಳ ದಾಖಲೆ ಹೊಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.