International Flight: ಏಪ್ರಿಲ್ 30 ವರೆಗೆ 'ಇಂಟೆರ್ ನ್ಯಾಷನಲ್ ಫ್ಲೈಟ್' ಬಂದ್..!

ಆಯ್ದ ಮಾರ್ಗಗಳಲ್ಲಿ ನಿಗದಿತ ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಸುತ್ತೋಲೆ

Written by - Channabasava A Kashinakunti | Last Updated : Mar 23, 2021, 08:53 PM IST
  • ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಹಾರಾಟ ನಿಷೇಧವನ್ನ 2021ರ ಏಪ್ರಿಲ್ 30ರವರೆಗೆ ವಿಸ್ತರಿಸಿದೆ.
  • ಆಯ್ದ ಮಾರ್ಗಗಳಲ್ಲಿ ನಿಗದಿತ ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಸುತ್ತೋಲೆ
  • ಭಾರತವು ಪ್ರಸ್ತುತ ಸುಮಾರು 27 ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ವೈಮಾನಿಕ ಒಪ್ಪಂದ ಹೊಂದಿದ್ದು
International Flight: ಏಪ್ರಿಲ್ 30 ವರೆಗೆ 'ಇಂಟೆರ್ ನ್ಯಾಷನಲ್ ಫ್ಲೈಟ್' ಬಂದ್..! title=

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಉಲ್ಭಣವಾದ ಹಿನ್ನೆಲೆಯಲ್ಲಿ ಭಾರತ ಸರ್ಕಾರ, ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಹಾರಾಟ ನಿಷೇಧವನ್ನ 2021ರ ಏಪ್ರಿಲ್ 30ರವರೆಗೆ ವಿಸ್ತರಿಸಿದೆ.

ಆದ್ರೆ, ಆಯ್ದ ಮಾರ್ಗಗಳಲ್ಲಿ ನಿಗದಿತ ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ನೀಡಬೇಕು ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಸುತ್ತೋಲೆಯಲ್ಲಿ ತಿಳಿಸಿದೆ.

US: ಕೊಲೊರಾಡೋದಲ್ಲಿನ ಸೂಪರ್ ಮಾರ್ಕೆಟ್‌ನಲ್ಲಿ ಗುಂಡಿನ ದಾಳಿ

ಕೊರೊನಾ ಸೋಂಕಿ(Coronavirus)ನಿಂದ ಮಾರ್ಚ್ 23ರಿಂದ ಅಂದ್ರೆ ಇಂದಿನಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಸೇವೆಗಳನ್ನ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಇದೇ ವೇಳೆ, ಮೇ ತಿಂಗಳಿನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಜುಲೈನಿಂದ ಇತರ ದೇಶಗಳೊಂದಿಗೆ ದ್ವಿಪಕ್ಷೀಯ ಏರ್ ಬಬಲ್ ಏರ್ ಲೈನ್ಸ್ ಮೂಲಕ ಹಾರಾಟ ನಡೆಸುತ್ತಿವೆ.

ಎರಡು ವರ್ಷಗಳ ನಂತರ ಜಲ ಹಂಚಿಕೆ ವಿಚಾರವಾಗಿ ಭಾರತ-ಪಾಕ್ ಮಾತುಕತೆ

ಭಾರತ(India)ವು ಪ್ರಸ್ತುತ ಸುಮಾರು 27 ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ವೈಮಾನಿಕ ಒಪ್ಪಂದ ಹೊಂದಿದ್ದು, ಇದರಲ್ಲಿ ಆಫ್ಘಾನಿಸ್ತಾನ, ಬಹರೇನ್, ಬಾಂಗ್ಲಾದೇಶ, ಭೂತಾನ್, ಕೆನಡಾ, ಇಥಿಯೋಪಿಯಾ, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಕೀನ್ಯಾ, ಕುವೈತ್, ಮಾಲ್ಡೀವ್ಸ್, ನೇಪಾಳ, ನೆದರ್ಲ್ಯಾಂಡ್ಸ್, ನೈಜೀರಿಯಾ, ಒಮಾನ್, ಕತಾರ್, ರುವಾಂಡಾ, ಸೆಷೆಲ್ಸ್, ತಾಂಜಾನಿಯಾ, ಉಕ್ರೇನ್, ಯುಎಇ, ಯುಕೆ, ಉಜ್ಬೇಕಿಸ್ತಾನ ಮತ್ತು ಅಮೆರಿಕ.

UK School: ವಿಚಿತ್ರ ವಾರ್ನಿಂಗ್! 'ಮಕ್ಕಳ ತಾಯಂದಿರರು ಶಾಲೆಯಲ್ಲಿ ತುಂಡುಡುಗೆ ಧರಿಸುವಂತಿಲ್ಲ'

ಈ ಅಮಾನತು ಅಂತಾರಾಷ್ಟ್ರೀಯ ಸರಕು ಮತ್ತು ವಿಮಾನ ಹಾರಾಟದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಬಾಂಗ್ಲಾದೇಶ ಭೇಟಿ ವೇಳೆ ಮೋದಿಗೆ ಗರಿಷ್ಟ ಭದ್ರತೆ ಒದಗಿಸಲಾಗುವುದು - ಎ.ಕೆ.ಅಬ್ದುಲ್ ಮೊಮೆನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News