ನವದೆಹಲಿ: COVID-19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಮಹಾರಾಷ್ಟ್ರದ ಎಲ್ಲಾ ಚಿತ್ರಮಂದಿರಗಳು, ಸಭಾಂಗಣಗಳು ಮತ್ತು ಕಚೇರಿಗಳು ಮಾರ್ಚ್ 31 ರವರೆಗೆ ಶೇಕಡಾ 50 ರಷ್ಟು ಸ್ಥಳಾವಕಾಶದೊಂದಿಗೆ ಕಾರ್ಯನಿರ್ವಹಿಸಲಿವೆ ಎಂದು ಸರ್ಕಾರ ಆದೇಶಿಸಿದೆ.
ಮಹಾರಾಷ್ಟ್ರವು ಗುರುವಾರ ರಾತ್ರಿಯವರೆಗೆ 24 ಗಂಟೆಗಳ ಅವಧಿಯಲ್ಲಿ 25,833 ಹೊಸ COVID-19 ಪ್ರಕರಣಗಳನ್ನು ವರದಿ ಮಾಡಿದೆ, ಇದು ಕಳೆದ ವರ್ಷ ಸಾಂಕ್ರಾಮಿಕ ರೋಗ ಹರಡಿದ ನಂತರದ ಹೆಚ್ಚಳವಾಗಿದೆ.
ಇದನ್ನೂ ಓದಿ-AstraZeneca ವ್ಯಾಕ್ಸಿನ್ ನಿಂದ ರಕ್ತ ಹೆಪ್ಪುಗಟ್ಟುವಿಕೆಯ ದೂರು, ಈ ದೇಶಗಳಲ್ಲಿ ಲಸಿಕೆ ಬಳಕೆಗೆ ಬ್ಯಾನ್
ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದರೆ ಮತ್ತೊಂದು ಲಾಕ್ ಡೌನ್ ವಿಧಿಸುವ ಎಚ್ಚರಿಕೆಯನ್ನು ಸಿಎಂ ಠಾಕ್ರೆ ನೀಡಿದ ಬೆನ್ನಲ್ಲೇ ಈಗ ಚಿತ್ರಮಂದಿರಗಳು ಮತ್ತು ಕಚೇರಿಗಳಲ್ಲಿನ ಸಾಮರ್ಥ್ಯವನ್ನು ಮೊಟಕುಗೊಳಿಸುವ ಇಂದಿನ ಆದೇಶವು ಬಂದಿದೆ.ಆರೋಗ್ಯ ಮತ್ತು ಇತರ ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಎಲ್ಲಾ ಖಾಸಗಿ ಕಚೇರಿಗಳು 50% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತವೆ ..."ಎಂದು ಆದೇಶದಲ್ಲಿ ತಿಳಿಸಲಾಗಿದೆ.
'ಉತ್ಪಾದನಾ ವಲಯದಲ್ಲಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಸ್ಥಳೀಯ ಅಧಿಕಾರಿಗಳು ಅನುಮೋದಿಸಿದಂತೆ ಕೆಲಸದ ವರ್ಗಾವಣೆಯನ್ನು ಹೆಚ್ಚಿಸಲು ಉತ್ಪಾದನಾ ಘಟಕಗಳಿಗೆ ಅವಕಾಶ ನೀಡಬಹುದು" ಎಂದು ಸರ್ಕಾರ ಹೇಳಿದೆ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಘಟಕವನ್ನು ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಇದನ್ನೂ ಓದಿ-24x7 Covid-19 Vaccination:ಇನ್ಮುಂದೆ ಹಗಲು-ರಾತ್ರಿ ಯಾವಾಗ ಬೇಕಾದರೂ ಲಸಿಕೆ ಹಾಕಿಸಿಕೊಳ್ಳಬಹುದು
ಆರು ತಿಂಗಳ ಅಂತರದ ನಂತರ, ಮುಂಬೈನ ಧರವಿಯಲ್ಲಿ ಪ್ರಕರಣಗಳ ಹೆಚ್ಚಳ ಕಂಡಿದೆ ಎಂದು ಆರೋಗ್ಯ ಅಧಿಕಾರಿಗಳು ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತೋರಿಸುತ್ತವೆ. ಈ ಕೊಳೆಗೇರಿ ಪ್ರದೇಶವು ಕಳೆದ 24 ಗಂಟೆಗಳಲ್ಲಿ 30 ಪ್ರಕರಣಗಳನ್ನು ದಾಖಲಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.