ಬೆಂಗಳೂರು : ಮನೆಯಲ್ಲಿ ಹೇಗೆ ಮಲಗಬೇಕು ಅನ್ನೋ ವಿಚಾರದಲ್ಲಿ ವಾಸ್ತುಶಾಸ್ತ್ರ ಸಾಕಷ್ಟು ಹೇಳುತ್ತದೆ. ಹೇಗೇಗೋ ಮಲಗಿದರೆ ಅಮಂಗಳ, ಅಪಶಕುನ, ದುರಾದೃಷ್ಟ ವಕ್ಕರಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ವಾಸ್ತು ಶಾಸ್ತ್ರದಲ್ಲಿ (Vastu tips) ದಿಕ್ಕಿಗೆ ಸಾಕಷ್ಟು ಮಹತ್ವವಿದೆ. ದಿಕ್ಕಿನ ಕುರಿತಂತೆ ಹೇಳಲಾದ ನಿಯಮಗಳನ್ನು ಪಾಲಿಸಬೇಕೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು ವಿಷಯ ಪಾಲಿಸಿದರೆ ಮನೆಯಲ್ಲಿ ಸುಖ ಸಮೃದ್ದಿ ನೆಲೆಸುತ್ತದೆ ಎಂದು ವಾಸ್ತು ಪಂಡಿತರು ಹೇಳುತ್ತಾರೆ. ನಾವು ಮಲಗುವಾಗ ಯಾವುದಾದರೂ ಒಂದು ದಿಕ್ಕಿಗೆ ತಲೆ ಕಾಲು ಹಾಕಿ ಮಲಗಿ ಬಿಡುತ್ತೇವೆ. ಮಲಗುವಾಗ ತಲೆ ಮತ್ತು ಕಾಲನ್ನು ಸರಿಯಾದ ದಿಕ್ಕಿನಲ್ಲಿಡಬೇಕು ಎಂದು ವಾಸ್ತುಶಾಸ್ತ್ರ (Vastu shastra) ಹೇಳುತ್ತದೆ. ಇಲ್ಲದೇ ಹೋದರೆ ಮಾನಸಿಕ ಕ್ಷೋಭೆ, ಹಣಕಾಸು ತೊಂದರೆ ಉಂಟಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಇದನ್ನೂ ಓದಿ : Tuesday Tips : ಮಂಗಳವಾರ ತಪ್ಪಿಯೂ ಈ 5 ಕೆಲಸಗಳನ್ನು ಮಾಡ್ಬೇಡಿ..!
ವಾಸ್ತುಪ್ರಕಾರ ಹೀಗೆ ಮಲಗಬೇಕು.!
1. ವಾಸ್ತುಪ್ರಕಾರ ಯಾವತ್ತಿಗೂ ಉತ್ತರ ಅಥವಾ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಲೇ ಬಾರದು. ಹೀಗೆ ಮಲಗಿದರೆ ನಕಾರಾತ್ಮಕ ಶಕ್ತಿ (Negetive energy) ಸಂಚಾರವಾಗುತ್ತದೆ. ಜೊತೆಗೆ ಟೆನ್ಶನ್ ಹೆಚ್ಚುತ್ತದೆ. ಯಾವತ್ತಿಗೂ ಪೂರ್ವ ಅಥವಾ ದಕ್ಷಿಣದ ದಿಕ್ಕಿಗೆ ತಲೆ ಹಾಕಿ ಮಲಗಬೇಕು.
2. ವಾಸ್ತು ಪ್ರಕಾರ ಹೇಳಬೇಕೆಂದರೆ ಮದುವೆ ವಯಸ್ಸಿಗೆ ಬಂದಿರುವ ಹುಡುಗ ಹುಡುಗಿಯರು ಉತ್ತರ ದಿಕ್ಕಿಗೆ ಕಾಲು ಹಾಕಿ ಮಲಗಬೇಕು (Sleeping Tips). ಹೀಗೆ ಮಾಡಿದರೆ ಬೇಗ ಕಂಕಣಬಲ ಕೂಡಿ ಬರುತ್ತದೆಯಂತೆ.
3. ವಾಸ್ತು ಶಾಸ್ತ್ರದ ಪ್ರಕಾರ ವಿವಾಹಿತ ಮಹಿಳೆಯರು ಯಾವತ್ತಿಗೂ ಮನೆಯ ವಾಯುವ್ಯ ಕೋನದಲ್ಲಿ ಮಲಗಬಾರದು. ಹೀಗೆ ಮಲಗಿದರೆ ಮನಸ್ಸಿನಲ್ಲಿ ಬೇರೆಯೇ ಮನೆ ಮಾಡುವ ಯೋಚನೆ ಬರುತ್ತಿರುತ್ತದೆಯಂತೆ
ಇದನ್ನೂ ಓದಿ : Vastu: ಸುಖ-ಸಮೃದ್ಧಿಗೆ ಮಾರಕ ಈ ವಸ್ತುಗಳು, ನಿಮ್ಮ ಮನೆಯಲ್ಲಿದ್ದರೂ ಕೂಡಲೇ ಹೊರಹಾಕಿ
4. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಹಿರಿಯರು ಪಶ್ಚಿಮ ದಿಕ್ಕಿಗೆ ಕಾಲು ಚಾಚಿ ಮಲಗಬೇಕಂತೆ. ಹೀಗೆ ಮಲಗಿದರೆ ಆರೋಗ್ಯ (Health) ಚೆನ್ನಾಗಿರುತ್ತದೆಯಂತೆ.
5. ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಜಾಗದಲ್ಲಿ ಪ್ಲಾಸ್ಟಿಕ್ ಹೂವು (Plastic flower) , ಗಿಡಗಳನ್ನು ಇಡಬಾರದು. ತಪ್ಪಿಯೂ ಹೀಗೆ ಮಾಡಬಾರದು ಎಂದು ಹೇಳುತ್ತಾರೆ. ಇದರಿಂದ ದಾರಿದ್ರ್ಯ ಬರುತ್ತದೆಯಂತೆ.
6.ಪ್ರತಿದಿನ ಬೆಳಗ್ಗೆ ಅಥವಾ ಸಂಜೆ (Evening) ಕರ್ಪೂರದ ದೀಪ ಬೆಳಗಿ ಪ್ರತಿ ರೂಮಿಗೂ ತೋರಿಸಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಖತಂ ಆಗುತ್ತದೆಯಂತೆ.
ಇದನ್ನೂ ಓದಿ : Importance Of Colours In Vastu- ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ-ಸೌಭಾಗ್ಯ ಪಡೆಯಲು ಬಣ್ಣಗಳ ಪಾತ್ರ ತುಂಬಾ ದೊಡ್ಡದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.