ನವದೆಹಲಿ : ಹೋಳಿ ಹಬ್ಬದ ಸನಿಹದಲ್ಲಿ ಕಿಸಾನ್ ಸಮ್ಮಾನ್ (Kisan samman) ಯೋಜನೆಯ ದುಡ್ಡು ರೈತರ ಖಾತೆಗೆ ನೇರ ವರ್ಗಾವಣೆಯಾಗಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ವಯ ಕೇಂದ್ರ ಸರ್ಕಾರ ಅರ್ಹ ರೈತರಿಗೆ (Farmers) ಪ್ರತಿವರ್ಷ ಆರು ಸಾವಿರ ರೂಪಾಯಿ ನೀಡುತ್ತಿದೆ. ಮೂರು ಕಂತುಗಳಲ್ಲಿ ಎರಡು ಸಾವಿರ ರೂಪಾಯಿ ದುಡ್ಡು ನೇರ ರೈತರ ಖಾತೆಗೆ ವರ್ಗಾವಣೆಯಾಗುತ್ತಿದೆ. ಹೋಳಿ (Holi)ಹಬ್ಬಕ್ಕೆ ಮುನ್ನ ಕಿಸಾನ್ ಸಮ್ಮಾನ್ ನಿಧಿಯ ಒಂದು ಕಂತು ದುಡ್ಡು ರೈತರ ಖಾತೆಗೆ ವರ್ಗಾವಣೆಯಾಗಲಿದೆ. ಇದಕ್ಕಾಗಿ ನೀವು ಇದುವರೆಗೆ ರಿಜಿಸ್ಟ್ರೇಶನ್ ಮಾಡಿಲ್ಲದಿದ್ದರೆ, ಕೂಡಲೇ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದು.
ಕಿಸಾನ್ ಸಮ್ಮಾನ್ (Kisan samman) ನಿಧಿಗಾಗಿ ರಿಜಿಸ್ಟ್ರೇಶನ್ ಅತ್ಯಂತ ಸುಲಭವಾಗಿದೆ. ಪಂಚಾಯತ್ ಕಚೇರಿ, ಗ್ರಾಮ ಲೆಕ್ಕಿಗರ ಕಚೇರಿ, ಕಾಮನ್ ಸರ್ವಿಸ್ ಸೆಂಟರ್ (CSC) ಹೋಗಿ ಹೆಸರು ನೋಂದಾಯಿಸಬಹುದಾಗಿದೆ. ಅಲ್ಲದೆ, ಮನೆಯಲ್ಲಿ ಕುಳಿತೇ online ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ : Petrol-Diesel Rate: ದೇಶಾದ್ಯಂತ 100 ರೂ.ಗಡಿ ದಾಟಲಿದೆಯೇ ಪೆಟ್ರೋಲ್-ಡಿಸೇಲ್ ಬೆಲೆ? ಕಾರಣ ಇಲ್ಲಿದೆ
ಕಿಸಾನ್ ಸಮ್ಮಾನ್ ನಿಧಿಗೆ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳುವುದು ಹೇಗೆ..?
1. ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ pmkisan.gov.in ಲಾಗಿನ್ ಆಗಿ
2. ಅದರಲ್ಲಿ Farmers Cornerಗೆ ಹೋಗಿ
3. New Farmer Registration ಗೆ ಕ್ಲಿಕ್ ಮಾಡಿ
4. Aadhaar ನಂಬರ್ ಭರ್ತಿ ಮಾಡಿ. ಕಾಪ್ಚು ಕೋಡ್ ತುಂಬಿ
5. ನಿಮ್ಮ ರಾಜ್ಯದ ಮಾಹಿತಿ ತುಂಬಿ. ಎಲ್ಲಾ ವ್ಯಕ್ತಿಗತ ವಿವರ ಭರ್ತಿ ಮಾಡಿ. ನಂತರ ಸೇವ್ ಮಡಿ
ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ಸಲ್ಲಿಸಬೇಡಿ. ಕಿಸಾನ್ ಸಮ್ಮಾನ್ ನಿಧಿಗಾಗಿ ಒಂದಷ್ಟು ಮಾರ್ಗದರ್ಶಿ ಸೂತ್ರಗಳಿವೆ. ಅದನ್ನು ಓದಿ. ತಪ್ಪು ಮಾಹಿತಿ ನೀಡಿ ದುಡ್ಡು ಪಡೆದರೆ ನಿಮ್ಮ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬಹುದು.
ಇದನ್ನೂ ಓದಿ : Bank Merger : ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ಬ್ಯಾಂಕ್ ವ್ಯವಹಾರ ನಡೆಯುವುದಿಲ್ಲ
ಕಿಸಾನ್ ಸಮ್ಮಾನ್ ನಿಧಿಗೆ ಅನರ್ಹರು ಯಾರು?
1. ಕೃಷಿ ಕೂಲಿ ಕಾರ್ಮಿಕರು
2. ಸರ್ಕಾರಿ ನೌಕರರು (government employees) ಅಥವಾ ನಿವೃತ್ತ ಸರ್ಕಾರಿ ನೌಕರರು
3. ಹಾಲಿ ಮಂತ್ರಿಗಳು, ಮಾಜಿ ಮಂತ್ರಿಗಳು, ಸಂಸದರು, ಶಾಸಕರು
4. ಡಾಕ್ಟರ್ಸ್, ಇಂಜಿನಿಯರ್, ವಕೀಲರು, ಸಿಎ ಇತ್ಯಾದಿ
5. ಆದಾಯ ತೆರಿಗೆ ಪಾವತಿಸುವ ರೈತರು
6. 10 ಸಾವಿರಕ್ಕಿಂತ ಅಧಿಕ ಪಿಂಚಣಿ ಪಡೆಯುವ ರೈತರು (Farmers)
7. ಹೊಲಗದ್ದೆಗಳನ್ನು ಬೇರೆ ಬಳಕೆಗೆ ಕೊಟ್ಟ ರೈತರು
ಈ ಮೇಲಿನ ಕೆಟಗರಿಯ ರೈತರು ಕಿಸಾನ್ ನಿಧಿ ದುಡ್ಡು ಪಡೆಯಲು ಅನರ್ಹರಾಗಿರುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.