ಬೈಕ್ ಟ್ಯಾಕ್ಸಿ ಅಥವಾ ಬಾಕ್ಸಿಯನ್ನು ನೀಡುವ ರಾಪಿಡೋ ಕಂಪನಿಯು ಬಾಡಿಗೆ ಸೇವೆಯನ್ನು ಪ್ರಾರಂಭಿಸಿದೆ. ಈ ಸೌಲಭ್ಯದಡಿಯಲ್ಲಿ ರಾಪಿಡೊ ಬಾಡಿಗೆ ಸೇವೆಯನ್ನು ಒಂದು ಗಂಟೆಯಿಂದ 6 ಗಂಟೆಗಳವರೆಗೆ ಕಾಯ್ದಿರಿಸಬಹುದು.
ಬೆಂಗಳೂರು : ನೀವು ನಿಮ್ಮ ಕಾರು ಅಥವಾ ಬೈಕನ್ನು ಸರ್ವಿಸ್ ಗಾಗಿ ಬಿಟ್ಟಿದ್ದರೆ, ದಿನದ ಡಾಟ ಹೇಗೆ ಎನ್ನುವುದ ಬಗ್ಗೆ ಚಿಂತೆಯಿರುತ್ತದೆ. ಆದರೆ ಇದೀಗ ರಾಪಿಡೋ (Rapido) ಬೈಕ್ ಟ್ಯಾಕ್ಸಿ ಸೇವೆ ಆರಂಭವಾಗಿದ್ದು, ಈ ತಲೆನೋವಿಗೆ ಪರಿಹಾರ ಸಿಗಲಿದೆ. ಈ ಸೇವೆಯ ಮೂಲಕ, ಕೇವಲ ಒಂದು ಬುಕಿಂಗ್‌ನಲ್ಲಿ ಇಡೀ ದಿನದ ಬಾಡಿಗೆ ಸೇವೆಯ ಲಾಭವನ್ನು ಪಡೆಯಬಹುದು. ಇದೀಗ ದೆಹಲಿ-ಎನ್‌ಸಿಆರ್, ಬೆಂಗಳೂರು (Bengaluru), ಹೈದರಾಬಾದ್, ಚೆನ್ನೈ, ಸೇರಿದಂತೆ 6 ನಗರಗಳಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಆದರೆ ಶೀಘ್ರದಲ್ಲೇ ಇದನ್ನು ದೇಶದ ಇತರ ನಗರಗಳಲ್ಲಿಯೂ ಪ್ರಾರಂಭಿಸಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಬೈಕ್ ಟ್ಯಾಕ್ಸಿ ಅಥವಾ ಬಾಕ್ಸಿಯನ್ನು (Baxi)ನೀಡುವ ರಾಪಿಡೋ ಕಂಪನಿಯು ಬಾಡಿಗೆ ಸೇವೆಯನ್ನು ಪ್ರಾರಂಭಿಸಿದೆ. ಈಗ ಒಂದು ಬುಕಿಂಗ್ ಮೂಲಕ ಇಡೀ ದಿನ ರಾಪಿಡೊ ಬಾಡಿಗೆ ಸೇವೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ರಾಪಿಡೋ ಪ್ರಸ್ತುತ ದೆಹಲಿ-ಎನ್‌ಸಿಆರ್, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತಾ ಮತ್ತು ಜೈಪುರದಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಸೌಲಭ್ಯದಡಿಯಲ್ಲಿ ರಾಪಿಡೊ ಬಾಡಿಗೆ ಸೇವೆಯನ್ನು ಒಂದು ಗಂಟೆಯಿಂದ 6 ಗಂಟೆಗಳವರೆಗೆ ಕಾಯ್ದಿರಿಸಬಹುದು.
ರಾಪಿಡೋ ಕಂಪನಿಯ ಪ್ರಕಾರ, ಬಾಡಿಗೆ ಸೇವೆಯನ್ನು ಕೇವಲ 6 ನಗರಗಳಲ್ಲಿ ಪ್ರಾರಂಭಿಸಲಾಗಿದೆ. ಆದರೆ ಶೀಘ್ರದಲ್ಲೇ ಈ ಯೋಜನೆಯನ್ನು 100 ನಗರಗಳಿಗೆ ವಿಸ್ತರಿಸಲಾಗುವುದು. ಯಾವ ನಗರಗಳಲ್ಲಿ ಈ ಸೇವೆ ವಿಸ್ತರಣೆಯಾಗಲಿದೆ ಎಂಬುದರ ಬಗ್ಗೆ ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ.ಆದರೂ, ಮುಂಬೈ, ಪುಣೆ, ಲಕ್ನೋ, ಆಗ್ರಾ, ಪಾಟ್ನಾದಂತಹ ದೊಡ್ಡ ನಗರಗಳಲ್ಲಿ ಈ ಸೇವೆ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ.
ಬೆಲೆ ಏರಿಕೆಯ ದಿನ ದಿನಗಳಲ್ಲಿ ಮಲ್ಟಿ ಸ್ಟಾಪ್ ಸಿಂಗಲ್ ಬುಕಿಂಗ್‌ನ ಬೇಡಿಕೆಯೂ ಹೆಚ್ಚಾಗಿದೆ. ಇಲ್ಲಿ ಗ್ರಾಹಕರಿಗೆ ಮತ್ತೆ ಮತ್ತೆ ಬಾಡಿಗೆ ಬೈಕನ್ನು ಬುಕ್ ಮಾಡಬೇಕಾಗಿಲ್ಲ, ಹಾಗಾಗಿ, ಪ್ರತಿ ಬಾರಿಯೂ ಬುಕಿಂಗ್ ಶುಲ್ಕವನ್ನು ಕೂಡಾ ಪಾವತಿಸಬೇಕಾಗಿಲ್ಲ. ಮಲ್ಟಿ-ಸ್ಟಾಪ್ ಸಿಂಗಲ್ ಬುಕಿಂಗ್ ಸೇವೆಗೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.