Indian Railway Recruitment 2021: 10, 12ನೇ ತರಗತಿ ಪಾಸ್ ಆದವರಿಗೆ ರೈಲ್ವೆಯಲ್ಲಿ ಉದ್ಯೋಗಾವಕಾಶ

Indian Railway Recruitment 2021: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಸೂಚನೆಗಳನ್ನು ತಪ್ಪದೇ ಸಂಪೂರ್ಣವಾಗಿ ಓದಿ.  

Written by - Yashaswini V | Last Updated : Feb 22, 2021, 11:45 AM IST
  • ಭಾರತೀಯ ರೈಲ್ವೆ ನೇಮಕಾತಿ 2021
  • ಭಾರತೀಯ ರೈಲ್ವೆ ನೇಮಕಾತಿಗೆ ಅರ್ಹತಾ ಮಾನದಂಡ
  • ಭಾರತೀಯ ರೈಲ್ವೆ ನೇಮಕಾತಿ 2021 ರ ಆಯ್ಕೆ ಪ್ರಕ್ರಿಯೆ ಹೇಗೆಂದು ತಿಳಿಯಿರಿ
Indian Railway Recruitment 2021: 10, 12ನೇ ತರಗತಿ ಪಾಸ್ ಆದವರಿಗೆ ರೈಲ್ವೆಯಲ್ಲಿ ಉದ್ಯೋಗಾವಕಾಶ title=
Indian Railway Recruitment 2021

Indian Railway Recruitment 2021:  ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ (ಎಸ್‌ಇಸಿಆರ್) ಕ್ರೀಡಾ ಕೋಟಾ(SECR Recruitment 2021) ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 23, ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು (Indian Railway Recruitment 2021), SECR secr.indianrailways.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆಯಡಿ ಸಂಸ್ಥೆಯಲ್ಲಿ 26 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಫೆಬ್ರವರಿ 23, 2021 ರಂದು ಅಥವಾ ಅದಕ್ಕೂ ಮೊದಲು ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಅಭ್ಯರ್ಥಿಗಳು ಈ ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು (Indian Railway Recruitment 2021) ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://secr.indianrailways.gov.in/. ಅಲ್ಲದೆ, ಈ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಗಳನ್ನು ನೀವು ನೋಡಬಹುದು https://secr.indianrailways.gov.in/uploads/files/1611295118372-Sports%20....

ಇದನ್ನೂ ಓದಿ - Delhi District Court Recruitment 2021: 10ನೇ ತರಗತಿ ಪಾಸ್ ಆದವರಿಗೆ ಭರ್ಜರಿ ಉದ್ಯೋಗಾವಕಾಶ

ಭಾರತೀಯ ರೈಲ್ವೆ ನೇಮಕಾತಿ 2021 ರ ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 23 ಜನವರಿ 2021
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23 ಫೆಬ್ರವರಿ 2021

ಭಾರತೀಯ ರೈಲ್ವೆ ನೇಮಕಾತಿಗೆ ಅರ್ಹತಾ ಮಾನದಂಡ 2021 

  • ಲೆವಲ್ 2 ಮತ್ತು ಲೆವಲ್ 3 : ಅಭ್ಯರ್ಥಿಗಳು ತಾಂತ್ರಿಕೇತರ ಹುದ್ದೆಗಳಿಗೆ 12 ನೇ ತರಗತಿ ಮತ್ತು ತಾಂತ್ರಿಕ ಹುದ್ದೆಗಳಿಗೆ ಐಟಿಐನೊಂದಿಗೆ 10 ನೇ ತರಗತಿ ಉತ್ತೀರ್ಣರಾಗಿರಬೇಕು.
  • ಲೆವಲ್ 4: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ.
  • ಲೆವಲ್ 5 : ಯಾವುದೇ ವಿಭಾಗದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು

ಇದನ್ನೂ ಓದಿ - Sarkari Naukri 2021: ಈ ನೇರ ಲಿಂಕ್‌ನೊಂದಿಗೆ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಶೀಘ್ರದಲ್ಲೇ ಅರ್ಜಿ ಸಲ್ಲಿಸಿ

ಭಾರತೀಯ ರೈಲ್ವೆ ನೇಮಕಾತಿ 2021 ರ ಆಯ್ಕೆ ಪ್ರಕ್ರಿಯೆ :
ಕ್ರೀಡಾ ಪರೀಕ್ಷೆಗಳು ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂಕಗಳ ವಿತರಣೆಯು ಕ್ರೀಡಾ ಕೌಶಲ್ಯಕ್ಕೆ 40 ಅಂಕಗಳು, ದೈಹಿಕ ದಕ್ಷತೆ ಮತ್ತು ಅಂಕಗಳ ಸಮಯದಲ್ಲಿ ತರಬೇತುದಾರರ ವೀಕ್ಷಣೆ, ಮಾನದಂಡಗಳ ಪ್ರಕಾರ ಮಾನ್ಯತೆ ಪಡೆದ ಕ್ರೀಡಾ ಸಾಧನೆಗಳ ಮೌಲ್ಯಮಾಪನಕ್ಕೆ 50 ಅಂಕಗಳು ಮತ್ತು ಶೈಕ್ಷಣಿಕ ಅರ್ಹತೆಗೆ 10 ಅಂಕಗಳು.

ಭಾರತೀಯ ರೈಲ್ವೆ ನೇಮಕಾತಿ 2021 ರ ಪರೀಕ್ಷಾ ಶುಲ್ಕ :
ಇತರ ವರ್ಗದ ಅಭ್ಯರ್ಥಿಗಳು 500 ರೂ. ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 250 / - ರೂ. ಪಾವತಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News