LIC Policy - ನಿಮ್ಮ LIC Policyಯೂ ಕೂಡ ಕಾರಣಾಂತರದಿಂದ ಬಂದ್ ಆಗಿದೆಯೇ? ಚಿಂತೆ ಬಿಟ್ಟು ಈ ವರದಿ ಓದಿ ನೀವೂ ನಿಮ್ಮ ಲ್ಯಾಪ್ಸ್ ಆಗಿರುವ ಪಾಲಸಿಯನ್ನು ಮರು ಆರಂಭಿಸಿ.
ನವದೆಹಲಿ: LIC Policy - ಯಾವುದೇ ಒಂದು ಕಾರಣದಿಂದ ನಿಮ್ಮ ಎಲ್‌ಐಸಿ ಪಾಲಸಿ ಬಂದ್ (LIC lapsed policies) ಆಗಿದ್ದರೆ , ನಿಮ್ಮ ಪಾಲಸಿಯನ್ನು ನೀವು ಪುನರುಜ್ಜೀವನಗೊಳಿಸಬಹುದಾಗಿದೆ (Revieve Policy). ಇದಕ್ಕಾಗಿ ವಿಶೇಷ ಪುನರುಜ್ಜೀವನ ಅಭಿಯಾನವನ್ನು (Special Revive Drive) ಕಂಪನಿ ಆರಂಭಿಸಿದೆ. ಈ ಅಭಿಯಾನವು ಜನವರಿ 7 ರಿಂದ ಪ್ರಾರಂಭವಾಗಿದೆ ಮತ್ತು 2021 ರ ಮಾರ್ಚ್ 6 ರವರೆಗೆ ನಡೆಯಲಿದೆ. ಈ ಅಭಿಯಾನದಲ್ಲಿ, ಪಾಲಿಸಿಯನ್ನು ಮತ್ತೆ ಪ್ರಾರಂಭಿಸಲು ಕಂಪನಿಯು ಗ್ರಾಹಕರಿಗೆ ಅವಕಾಶ ನೀಡುತ್ತಿದೆ. ಆದರೆ ಇದಕ್ಕಾಗಿ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ನಿಗದಿಪಡಿಸಲಾಗಿದೆ.
ಯಾವುದೇ ಒಂದು ಅನಿವಾರ್ಯ ಕಾರಣದಿಂದ ತಮ್ಮ ಪಾಲಸಿಯ (LIC) ಪ್ರಿಮಿಯಂ ಪಾವತಿಸದೇ ಹೋದ ಗ್ರಾಹಕರಿಗೆ ಈ ಅಭಿಯಾನದ ಲಾಭ ಸಿಗಲಿದೆ. ಆದರೆ ಇದಕ್ಕಾಗಿ ಪ್ರಿಮಿಯಂ ಪಾವತಿಸದ ದಿನಾಂಕವು 5 ವರ್ಷಕ್ಕಿಂತ ಹಳೆಯದಾಗಿರಬಾರದು. ಇದಲ್ಲದೆ ಪಾಲಸಿ ಪುನರುಜೀವನಗೊಳಿಸಲು ಲೇಟ್ ಫೀ ನಿಂದ ಮುಕ್ತಿ ಕೂಡ ಸಿಗಲಿದೆ.
ಇದನ್ನೂ ಓದಿ- LICಯ ಈ ಯೋಜನೆಯಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಜೀವನವಿಡೀ Pension ಪಡೆಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಎಷ್ಟು ವಿನಾಯ್ತಿ ಸಿಗುತ್ತದೆ?: ಪಾಲಿಸಿಯನ್ನು ಪುನಃ ನವೀಕರಿಸಲು ತಗಲುವ ಶುಲ್ಕದಲ್ಲಿ ಶೇ 20 ರಷ್ಟು ಮನ್ನಾ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಇದೇ ವೇಳೆ ವಾರ್ಷಿಕ ಪ್ರೀಮಿಯಂ ಒಂದರಿಂದ ಮೂರು ಲಕ್ಷಗಳ ನಡುವೆ ಇದ್ದರೆ, ಲೇಟ್ ಫೀ ನಲ್ಲಿ ಶೇ. 25 ರಷ್ಟು ರಿಯಾಯಿತಿ ಸಿಗಲಿದೆ. 3,00,001 ಮತ್ತು ಅದಕ್ಕಿಂತ ಹೆಚ್ಚಿನ ಪ್ರೀಮಿಯಂನಲ್ಲಿ ಶೇ. 30 ಅಥವಾ 3,000 ರೂ ರಿಯಾಯಿತಿ ಲಭ್ಯವಿದೆ.
2. 1,526 ಸೆಟೆಲೈಟ್ ಕಚೇರಿ: ಇಂತಹ ಪಾಲಸಿಗಳನ್ನು ಪುನರಾರಂಭಿಸಲು ಎಲ್ಐಸಿ 1,526 ಸೆಟೆಲೈಟ್ (LIC Satellite Centres) ಕಚೇರಿಗಳಿಗೆ ಅಧಿಕಾರ ನೀಡಿದೆ ಹಾಗೂ ನವೀಕರಣದ ವೇಳೆ ವಿಶೇಷ ವೈದ್ಯಕೀಯ ತಪಾಸಣೆ ಮಾಡುವ ಅವಶ್ಯಕತೆ ಇಲ್ಲ.
3. ಯಾವ ಷರತ್ತುಗಳು ಅನ್ವಯಿಸಲಿವೆ? : ಈ ಅಭಿಯಾನಕ್ಕಾಗಿ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. 5 ವರ್ಷಗಳೊಳಗಿನ ಪಾಲಸಿಗಳನ್ನು ಮಾತ್ರ ಪುನರುಜ್ಜೀವನಗೊಳಿಸಲಾಗುತ್ತದೆ. ಆರೋಗ್ಯ ಸಂಬಂಧಿತ ಅಗತ್ಯಗಳಿಗೆ ಸಹ ಕೆಲವು ರಿಯಾಯಿತಿ ನೀಡಲಾಗುವುದು. ಹೆಚ್ಚಿನ ಪಾಲಸಿಗಳನ್ನು ಆರೋಗ್ಯ ಘೋಷಣೆಯ (Restore LIC Risk Cover) ಆಧಾರದ ಮೇಲೆ ಮತ್ತು ಕೋವಿಡ್ -19 ಕುರಿತು ಪ್ರಶ್ನೆಗಳ ಆಧಾರದ ಮೇಲೆ ಮಾತ್ರ ಪುನರಾರಂಭಿಸಲಾಗುತ್ತದೆ. ಕಂಪನಿಯು ಈ ಹಿಂದೆ ಆಗಸ್ಟ್ 10 ರಿಂದ ಅಕ್ಟೋಬರ್ 9, 2020 ರವರೆಗೆ ಪುನರುಜ್ಜೀವನಗೊಳಿಸುವ ಯೋಜನೆಯನ್ನು ಸಹ ಆರಂಭಿಸಿತ್ತು ಎಂಬುದು ಇಲ್ಲಿ ಗಮನಾರ್ಹ.
4. ಈ ಪಾಲಸಿಗಳಿಗೆ ವಿನಾಯ್ತಿ ಲಾಭ ಇಲ್ಲ: ಟರ್ಮ್ ಇನ್ಶುರೆನ್ಸ್, ಹೆಲ್ತ್ ಇನ್ಶುರೆನ್ಸ್, ಮಲ್ಟಿಪಲ್ ರಿಸ್ಕ್ ಪಾಲಿಸಿಗಳಂತಹ ಹೆಚ್ಚಿನ ಅಪಾಯದ ಯೋಜನೆಗಳಿಗೆ ಯಾವುದೇ ರೀತಿಯ ರಿಯಾಯಿತಿ ನೀಡಲಾಗುವುದಿಲ್ಲ ಎಂದು ಕಂಪನಿ ಹೇಳಿದೆ. ಪ್ರೀಮಿಯಂ ಪಾವತಿಸುವ ಅವಧಿಯನ್ನು ಲ್ಯಾಪ್ಸ್ ಆಗಿರುವ ಮತ್ತು ಪುನರುಜ್ಜೀವನ ದಿನಾಂಕದವರೆಗೆ ಅವರ ಪಾಲಿಸಿ ಅವಧಿಯನ್ನು ಪೂರ್ಣಗೊಳಿಸದ ಪಾಲಸಿಗಳನ್ನು ಮಾತ್ರ ಈ ಅಭಿಯಾನದಲ್ಲಿ ಪುನರುಜ್ಜೀವನಗೊಳಿಸಬಹುದು.