Shani Vakri 2021: ಶನಿಯ ವಕ್ರ ನಡೆ, ಯಾವ ರಾಶಿಯ ಜನರ ಮೇಲೆ ಏನು ಪ್ರಭಾವ? ನಿಮ್ಮ ರಾಶಿ ಯಾವುದು?

Shani Vakri 2021 - ಶನಿದೇವ ಈ ವರ್ಷ ಯಾವುದೇ ರಾಶಿಯನ್ನು ಪರಿವರ್ತಿಸುತ್ತಿಲ್ಲ. ಆದರೆ, ಶನಿ ತನ್ನ ನಕ್ಷತ್ರ ಬದಲಾಯಿಸುತ್ತಿದ್ದಾನೆ ಹಾಗೂ ಆತ ವಕ್ರ ನಡೆ ಕೂಡ ನಡೆಯಲಿದ್ದಾನೆ.

ನವದೆಹಲಿ: Shani Vakri 2021 - ಶನಿದೇವನನ್ನು ಓರ್ವ ಕಠಿಣ ದೇವ ಎಂದೇ ಪರಿಗಣಿಸಲಾಗುತ್ತದೆ. ಎಲ್ಲ 9 ಗ್ರಹಗಳಲ್ಲಿ ಶನಿದೇವನನ್ನು ನ್ಯಾಯಾಧೀಶ ಎಂದು ಪರಿಗಣಿಸಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಅಶುಭನಾದರೆ ವ್ಯಕ್ತಿಗಳ ಜೀವನ ಸಂಕಷ್ಟ ಹಾಗೂ ದುಖಗಳಿಂದ ಕೂಡಿರುತ್ತದೆ. ಎಲ್ಲ ಕಾರ್ಯಗಳಲ್ಲಿ ಅಡೆತಡೆ ಉಂಟುಮಾಡುವುದು ಹಾಗೂ ಕಾಯಿಲೆ ಇತ್ಯಾದಿಗಳಿಗೂ ಕೂಡ ಶನಿ (Shani Dev) ಕಾರಣನಾಗುತ್ತಾನೆ. ಹೀಗಾಗಿ ಶನಿಯನ್ನು ಶಾಂತವಾಗಿರಿಸುವುದು ತುಂಬಾ ಮುಖ್ಯ.

 

ಇದನ್ನೂ ಓದಿ- New Dress Wearing: ವಾರದ ಈ ದಿನಗಳಂದು ಹೊಸ ಬಟ್ಟೆ ಧರಿಸಬೇಡಿ, ಸಂಕಷ್ಟ ಎದುರಾದೀತು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಶನಿ ಯಾವಾಗ ವಕ್ರಿಯಾಗುತ್ತಿದ್ದಾನೆ? - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವ 23 ಮೇ 2021 ರಂದು ವಕ್ರಿಯಾಗಲಿದ್ದಾನೆ. ಪ್ರಸ್ತುತ ಶನಿ ಮಕರ ರಾಶಿಯಲ್ಲಿ ಗೋಚರಿಸುತ್ತಿದ್ದಾನೆ. ಇದೆ ರಾಶಿಯಲ್ಲಿ ಗುರು ಹಾಗೂ ಬುಧ ಕೂಡ ವಿರಾಜಮಾನರಾಗಿದ್ದಾರೆ. ಗುರುಗ್ರಹದ ಜೊತೆಗೆ ಶನಿಯ ಸಮ ಸಂಬಂಧವಿದೆ. ಅಂದರೆ, ಶತ್ರುತ್ವ ಕೂಡ ಇಲ್ಲ ಮಿತ್ರುತ್ವ ಕೂಡ ಇಲ್ಲ. ಪ್ರಸ್ತುತ ಶನಿ ತನ್ನದೇ ಆದ ಮಾರ್ಗದಲ್ಲಿ ಸಂಚರಿಸುತ್ತಿದ್ದಾನೆ. ಆದರೆ, ಮೇ 23 ರಿಂದ ಆತ ವಕ್ರ ನಡೆ ನಡೆಯಲಿದ್ದಾನೆ. ಅದರ ನಂತರ 11 ಅಕ್ಟೋಬರ್ 2021ರಂದು ಮತ್ತೆ ಆತ ತನ್ನ ಮಾರ್ಗದಲ್ಲಿ ನೇರ ನಡೆಗೆ ಬರಲಿದ್ದಾನೆ. ಈ ವರ್ಷ ಆತ ಯಾವುದೇ ರಾಶಿ ಪರಿವರ್ತನೆ ಮಾಡುತ್ತಿಲ್ಲವಾದ್ದರಿಂದ, ಆತ ಮಕರರಾಶಿಯಲ್ಲೇ ವಕ್ರನಡೆಯನ್ನು ಕೈಗೊಳ್ಳಲಿದ್ದಾನೆ.

2 /4

2. ವಕ್ರನಡೆಯ ವೇಳೆ ಆತ ಅಶುಭ ಫಲಗಳನ್ನು ನೀಡಲಿದ್ದಾನೆ - ಶನಿದೆವನ ವಕ್ರ ನಡೆಯ ವೇಳೆ ಅಶುಭ ಫಲಗಳನ್ನು ನೀಡುತ್ತಾನೆ ಎನ್ನಲಾಗುತ್ತದೆ. ಶನಿದೇವ ವಕ್ರಿಯಾದ ವೇಳೆ ಸಾಕಷ್ಟು ಪೀಡೆ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆತ ಶುಭ ಫಲಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಯಾರ ಜಾತಕದಲ್ಲಿ ಶನಿ ಅತ್ಯಂತ ಶುಭ ಸ್ಥಿತಿಯಲ್ಲಿ ವಿರಾಜಮಾನನಾಗಿದ್ದಾನೆಯೋ ಅವರಿಗೆ ಶನಿಯಿಂದ ಸಿಗುವ ಲಾಭ ಕಡಿಮೆಯಾಗುತ್ತದೆ.

3 /4

3. ಶನಿಯ ಸಾಡೆಸಾತಿ - ಪ್ರಸ್ತುತ ಧನುರಾಶಿ, ಮಕರರಾಶಿ ಹಾಗೂ ಕುಂಭ ರಾಶಿಗಳ ಮೇಲೆ ಶನಿಯ ಸಾಡೆಸಾತಿ ನಡೆಯುತ್ತಿದೆ. ಶನಿ ವಕ್ರನಾದರೆ ಈ ಐದು ರಾಶಿಗಳ ಜನರ ಸಂಕಷ್ಟದಲ್ಲಿ ಹೆಚ್ಚಳವಾಗಲಿದೆ. ಹೀಗಾಗಿ ಈ ಜಾತಕದ ಜನರು ವಿಶೇಷ ಎಚ್ಚರಿಕೆ ವಹಿಸುತ ಆವಶ್ಯಕತೆ ಇದೆ. ಮಿಥುನ ಹಾಗೂ ತುಲಾ ರಾಶಿಯ ಜನರ ಮೇಲೆ ಶನಿಯ ಮಹಾದೆಸೆ ಸಾಗುತ್ತಿದೆ ಇವರೂ ಕೂಡ ಎಚ್ಚರಿಕೆವಹಿಸುವ ಆವಶ್ಯಕತೆ ಇದೆ.

4 /4

4. ಶನಿಯ ಉಪಾಯಗಳು - ಶನಿಯನ್ನು ಶಾಂತಗೊಳಿಸಲು ಶಾಸ್ತ್ರಗಳಲ್ಲಿ ಹಲವು ಉಪಾಯಗಳನ್ನು ಸೂಚಿಸಲಾಗಿದೆ. ಶನಿವಾರದ ದಿನ ಶನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ. ಇದಲ್ಲದೆ ಶನಿದೆವನಿಗೆ ಸಾಸಿವೆ ಎಣ್ಣೆ ಅರ್ಪಿಸಿ. ಶನಿವಾರ ದಾನ ಮಾಡಿ. ಇದರಿಂದ ಶನಿಯ ಅಶುಭತೆಯಲ್ಲಿ ಇಳಿಕೆಯಾಗಿ ಶನಿ ಒಳ್ಳೆಯ ಫಲಗಳನ್ನು ನೀಡುತ್ತಾನೆ.